ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೧೭


ಗೌತಮನಿಂದ ನಮ್ಮಿಬ್ಬರ ರಕ್ಷಣೆಯಾಗುವಂತೆ ಮಾಡು!” ಎಂದು ಹೇಳಿದಳು. ಇಂದ್ರನು ನಗುನಗುತ್ತ, “ಎಲೈ ಸುಂದರಿಯೇ, ನಾನು ಸಂತುಷ್ಟನಾದೆ; ಯಾವ ರೀತಿ ಬಂದೆನೋ ಅದೇ ರೀತಿ ಹೋಗುತ್ತೇನೆ” ಎಂದನು.
ಗೌತಮ ಋಷಿಯ ಭೀತಿಯು ಮನದಲ್ಲಿದ್ದ ಇಂದ್ರನು ಲಗುಬಗೆಯಿಂದ ಆಶ್ರಮದ ಹೊರಗೆ ಬರುತ್ತಿರುವಾಗ ಮಹಾಮುನಿಯಾದ ಗೌತಮನು ಅಲ್ಲಿಗೆ ಬಂದನು. ದುರ್ಧರ್ಷನಾದ, ತಪೋಬಲದಿಂದ ಅಗ್ನಿಯಂತೆ ತೇಜಸ್ಸುಳ್ಳ ಗೌತಮನನ್ನು ಕಂಡು ಇಂದ್ರನು ಭಯದಿಂದ ನಡುಗಿದನು. ಅವನ ಮುಖವು ಬಾಡಿತು; ನಡೆದ ಸಂಗತಿಯು ಗೌತಮನ ಗಮನಕ್ಕೆ ಬಂದು ಅತನು ಕ್ರೋದಗೊಂಡು ಇಂದ್ರನಿಗೆ ಈ ರೀತಿ ಶಪಿಸಿದನು:


           ಮಮ ರೂಪಂ ಸಮಾಸ್ಥಾಯ ಕೃತವಾನಸಿ ದುರ್ಮತೇ |
           ಅಕರ್ತವ್ಯಮಿದಂ ಯಸ್ಮಾದ್ವಿಫಲಸ್ತ್ವಂ ಭವಿಷ್ಯಸಿ ‖೨೭‖


“ಎಲೈ ದುರ್ಬುದ್ಧಿಯೇ, ನನ್ನ ವೇಷವನ್ನು ಧರಿಸಿ ನೀನು ಈ ನೀಚಕೃತ್ಯವನ್ನು ಮಾಡಿರುವಿ; ಕಾರಣ ನೀನು ವೃಷಣರಹಿತನಾಗು!”
ಕೋಪದಿಂದ ಉರಿಯುತ್ತಿದ್ದ ಗೌತಮನ ಶಾಪದಿಂದ ಇಂದ್ರನ ವೃಷಣಗಳೆರಡೂ ಕಳಚೆ ಭೂಮಿಗೆ ಬಿದ್ದವು.
ಈ ರೀತಿ ವೃಷಣರಹಿತನಾದ ಇಂದ್ರನು ಭಯಗೊಂಡು, ಸಿದ್ಧ, ಗಂಧರ್ವ, ಚಾರಣ ಮತ್ತು ಅಗ್ನಿದೇವತೆಯರನ್ನು ಕುರಿತು ಇಂತೆಂದನು-
“ಮಹಾತ್ಮನಾದ ಗೌತಮನ ತಪಸ್ಸಿನಲ್ಲಿ ವಿಘ್ನವನ್ನುಂಟುಮಾಡಬೇಕೆಂದು, ಆತನನ್ನು ಕೆರಳಿಸಬೇಕೆಂದು, ನಾನು ಈ ದೇವತಾಕಾರ್ಯವನ್ನು ಮಾಡಿದ್ದೇನೆ. ಗೌತಮನು ಉಗ್ರತಪಶ್ಚರ್ಯೆಯಿಂದ ದೇವತೆಗಳನ್ನು ಸ್ಥಾನಭ್ರಷ್ಟ ಮಾಡಬಹುದಿತ್ತು; ಕ್ರೋಧದಿಂದ ಆತನು ನನ್ನನ್ನು ನಿಷ್ಫಲನನ್ನಾಗಿ ಮಾಡಿದ್ದಾನೆ; ಅಹಲ್ಯೆಗೆ ಸಹ ಶಾಪಕೊಟ್ಟು ಅವಳನ್ನು ತ್ಯಜಿಸಿದ್ದಾನೆ. ಈ ರೀತಿ ಘೋರಶಾಪವನ್ನು ಕೊಡುವಂತೆ ಮಾಡಿ ಆತನ ತಪೋಹರಣವನ್ನು ಮಾಡಿದ್ದೇನೆ; ಆದ್ದರಿಂದ ಋಷಿವೃಂದ ಹಾಗೂ ಚಾರಣಸಮೂಹದವರಾದ ನೀವು ದೇವತಾಕಾರ್ಯದಲ್ಲಿ ತೊಡಗಿದ ನನಗೆ ಪುನಃ ವೃಷಣಯುಕ್ತನನ್ನಾಗಿ ಮಾಡಿರಿ!” (ಬಲಖಂಡ, ೪೯).
ಇಂದ್ರನ ಹೇಳಿಕೆಯನ್ನು ಆಲಿಸಿ, ಅಗ್ನಿ, ಮರುತ್ ಇವರನ್ನೊಳಗೊಂಡು ದೇವತೆಗಳು ಪಿತೃದೇವನ ಬಳಿಗೆ ಹೋಗಿ ಈ ರೀತಿ ಬಿನ್ನೈಸಿದರು: “ಈ ಹೋತಕ್ಕೆ ವೃಷಣಗಳಿವೆ. ಗೌತಮನು ಇಂದ್ರನ ವೃಷಣಗಳನ್ನು ಇಲ್ಲದಂತೆ