ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೧೯


           ಯಶ್ಚ ಯಶ್ಚ ಸುರೇಂದ್ರಃ ಸ್ಯಾದ್ ಧ್ರುವಃ ಸ ನ ಭವಿಷ್ಯತಿ |
           ಏಷ ಶಾಪೋ ಮಯಾ ಮುಕ್ತ ಇತ್ಯಾಸೌ ತ್ವಾಂ ತದಾಬ್ರವೀತ್ ‖೩೫‖


“ಎಲೈ ಇಂದ್ರನೇ, ನೀನು ನನ್ನ ಪತ್ನಿಯನ್ನು ನಿಃಸಂಕೋಚವಾಗಿ ಉಪಯೋಗಿಸಿರುವೆಯಾದ್ದರಿಂದ ಸಂಗ್ರಾಮದಲ್ಲಿ ನೀನು ಶತ್ರುವಿನ ಸೆರೆಯಾಳುಗುವೆ. ಹೇ ದುರ್ಬುದ್ಧಿಯೇ. ನೀನು ಮಾಡಿದ ಪಾಪಕರ್ಮವು ಈ ಪ್ರಪಂಚದಲ್ಲಿ ಹರಡುವುದು; ಈ ಮನುಷ್ಯಲೋಕದಲ್ಲಿ ಜಾರಕರ್ಮದಲ್ಲಿ ತೊಡಗುವವರಿಗೆ ಅರ್ಧಪಾಪವು ತಗಲುವದು, ಮಿಕ್ಕ ಅರ್ಧ ಪಾಪವು ಜಾರಕರ್ಮಪ್ರವರ್ತಕನಾದ ನಿನಗೆ ತಗಲುತ್ತಾ ಹೋಗುವದು. ಅಕ್ಷಯಸ್ಥಾನವು ನಿನಗೆ ಎಂದೆಂದಿಗೂ ದೊರೆಯಲಾರದು. ಯಾವನು ದೇವರಾಜನಾಗುವನೋ ಅವನ ಸ್ಥಾನವೂ ಕೂಡ ಸ್ಥಿರವಾಗಿ ಉಳಿಯಲಾರದು. ಈ ರೀತಿ ನಾನು ನಿನ್ನನ್ನು ಶಪಿಸಿದ್ದೇನೆ” ಎಂದನು.
ಈ ಎರಡು ಕಾಂಡಗಳಲ್ಲಿಯ ಶಾಪಗಳು ಭಿನ್ನವಾಗಿವೆ. ಪಿತೃದೇವತೆಗಳನ್ನು ವಿನಂತಿಸಿದ ಫಲವಾಗಿ ಇಂದ್ರನಿಗೆ ಹೋತದ ವೃಷಣಗಳು ಪ್ರಾಪ್ತವಾಗಿವೆ. ಅದು ಉಃಶಾಪದ ಫಲವಲ್ಲ. ಇಂದ್ರನು ಗೌತಮನಲ್ಲಿ ಉಃಶಾಪವನ್ನು ಬೇಡಲಿಲ್ಲ. ಗೌತಮನು ಅದನ್ನು ಕೊಡಲೂ ಇಲ್ಲ.

೧೩. ಗೌತಮ < ಅಹಲ್ಯಾ

ಬಾಲಕಾಂಡ/೪೮-೪೯

ಗೌತಮ / ಇಂದ್ರ ಶಾಪ, ಕ್ರ. ೧೨.
ಇಂದ್ರನಿಗೆ ಶಾಪವನ್ನು ಕೊಟ್ಟನಂತರ ಗೌತಮನು ತನ್ನ ಪತ್ನಿಯಾದ ಅಹಲ್ಯೆಗೂ ಶಾಪವನ್ನು ಕೊಟ್ಟಿದ್ದಾನೆ:


           ಇಹ ವರ್ಷಸಹಸ್ರಾಣಿ ಬಹೂನಿ ನಿವಸಿಷ್ಯಸಿ ‖೨೯‖
           ವಾತಭಕ್ಷಾ ನಿರಾಹಾರಾ ತಪ್ಯಂತೀ ಭಸ್ಮಶಾಯಿನೀ |
           ಅದೃಶ್ಯಾ ಸರ್ವಭೂತಾನಾಮಾಶ್ರಮೇಸ್ಮಿನ್ವಸಿಷ್ಯಸಿ ‖೩೦‖
           ಯದಾ ತ್ವೇತದ್ವನಂ ಘೋರಂ ರಾಮೋ ದಶರಥಾತ್ಮಜಃ |
           ಆಗಮಿಷ್ಯತಿ ದುರ್ಧರ್ಷಸ್ತದಾ ಪೂತಾ ಭವಿಷ್ಯಸಿ ‖೩೧‖
           ತಸ್ಯಾತಿಥ್ಯೇನ ದುರ್ವೃತ್ತೇ ಲೋಭಮೋಹವಿವರ್ಜಿತಾ |
           ಮತ್ಸಕಾಶಂ ಮುದಾ ಯುಕ್ತಾ ಸ್ವಂ ವಪುರ್ಧಾರಯಿಷ್ಯಸಿ ‖೩೨‖