ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


“ಯಾವ ಆಹಾರವಿರದೇ ಕೇವಲ ವಾಯುಭಕ್ಷಣೆ ಮಾಡಿ ನೀನು ಸಾವಿರಾರು
ವರ್ಷಗಳವರೆಗೆ ಬೂದಿಯಲ್ಲಿ ಬಿದ್ದು ನರಳುವೆ. ಯಾವ ಪ್ರಾಣಿಗಳ ಕಣ್ಣಿಗೂ
ಬೀಳದೇ ನೀನು ಈ ಆಶ್ರಮದಲ್ಲಿ ಬಿದ್ದಿರುವೆ; ಜಯಿಸಲಸಾಧ್ಯನಾದ ದಶರಥಪುತ್ರ
ರಾಮನು ಈ ಘೋರಕಾನನವನ್ನು ಪ್ರವೇಶಿಸಿದಾಗ, ಹೇ ದುರಾಚಾರಿಣಿ, ಲೋಭ
ಮೋಹಗಳನ್ನು ಕಳೆದುಕೊಂಡ ನೀನು ಆತನಿಗೆ ಆದರಾತಿಥ್ಯವನ್ನು ಸಲ್ಲಿಸಿ
ಶುದ್ಧಳಾಗುವೆ. ಅನಂತರ ಸ್ವ-ಸ್ವರೂಪವನ್ನು ತಾಳಿ ನನ್ನೊಡನೆ ಆನಂದದಿಂದ
ಬಾಳುವೆ” ಎಂಬ ಶಾಪವನ್ನು ಗೌತಮನು ಕೊಟ್ಟನು.
ವಿಶ್ವಾಮಿತ್ರನ ಅಪ್ಪಣೆಯಂತೆ ರಾಮನು ಭಾಗ್ಯವತಿಯಾದ ಆ ಅಹಲ್ಯೆಯನ್ನು
ಅವಲೋಕಿಸಿದನು. ಆ ಅಹಲ್ಯೆಯ ತಪದ ಪ್ರಭಾವವು ಎಲ್ಲೆಡೆಯಲ್ಲಿಯೂ
ಹರಡಿತ್ತು. ಗೌತಮನ ಶಾಪದಿಂದ ಅವಳು ಯಾರ ದೃಷ್ಟಿಗೂ ಬೀಳುವಂತಿರಲಿಲ್ಲ.
ಶಾಪಮುಕ್ತಳಾದೊಡನೆ ಅವಳು ಎಲ್ಲರಿಗೂ ಕಾಣುವಂತಾದಳು. ಅವಳು ಈಗ
ತೇಜಸ್ವಿನಿಯಾಗಿದ್ದಳು. ರಾಮ-ಲಕ್ಷ್ಮಣರು ಆನಂದದಿಂದ ಪಾದ ಮುಟ್ಟಿ
ನಮಸ್ಕರಿಸಿದರು. ಆಕೆಯೂ ಅಭಿನಂದಿಸಿದಳು. ಅರ್ಘ್ಯಪಾದ್ಯಾದಿಗಳಿಂದ ಅವರನ್ನು
ಸತ್ಕರಿಸಿದಳು. ರಾಮ-ಲಕ್ಷ್ಮಣರು ಅದನ್ನು ಸ್ವೀಕರಿಸಿದರು. ಮಹಾತೇಜಸ್ವಿಯಾದ
ಗೌತಮನು ಅಹಲ್ಯೆಯೊಡನೆ ಸುಖವಾಗಿ ಬಾಳಿದನು. ಗೌತಮನ ಪೂಜಾ
ಸತ್ಕಾರವನ್ನು ಪಡೆದು ರಾಮನು ಮಿಥಿಲಾನಗರದತ್ತ ಪ್ರಯಾಣ ಬೆಳೆಸಿದನು.
ಉತ್ತರಕಾಂಡ/೩೦ ಇಂದ್ರನನ್ನು ಶಪಿಸಿದ ನಂತರ ಗೌತಮನು ತನ್ನ ಪತ್ನಿಯಾದ ಅಹಲೈಯನ್ನು ಈ ರೀತಿ ಧಿಕ್ಕರಿಸಿದರು:

ದುರ್ವಿನೀತೇ ವಿನಿಧ್ವಂಸ ಮಮಾಶ್ರಮಸಮೀಪತ: ||೩೬|| ರೂಪವನಸುಪನ್ನಾ ಯಸ್ಮಾತ್ಮನವಸ್ಥಿತಾ | ತಸ್ಮಾದ್ರೂಪವತೀ ಲೋಕೇ ನ ತ್ವಮೇಕಾ ಭವಿಷ್ಯತಿ ||೩೭ ರೂಪಂ ಚ ತೇ ಪ್ರಜಾಃ ಸರ್ವಾ ಗಮಿಷ್ಯಂತಿ ನ ಸಂಶಯಃ |೩೮|| “ಎಲೈ ದುರಾಚಾರಿಣಿಯೇ, ನನ್ನ ಆಶ್ರಮದ ಬಳಿಯಲ್ಲಿಯೇ ನೀನು ಧ್ವಂಸಳಾಗು: ರೂಪಯೌವನದ ಸಂಪನ್ನೆಯಾದ ನೀನು ಸ್ಥಿರಚಿತ್ತಳಾಗಿ ಉಳಿಯಲಿಲ್ಲ. ಹೀಗಾದ್ದರಿಂದ ಈ ಜಗತ್ತಿನಲ್ಲಿ ನೀನೊಬ್ಬಳೇ ರೂಪವತಿಯಾಗಿ ಇರಲಾರೆ; ಸೌಂದರ್ಯವೆಲ್ಲವೂ ಒಂದೆಡೆಯಾದರೆ ಅನರ್ಥಕ್ಕೆ ಕಾರಣ;