ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೨೧


ಆದ್ದರಿಂದ ಪ್ರಜಾಜನರೆಲ್ಲರೂ ನಿನ್ನ ರೂಪವನ್ನು ಹಂಚಿಕೊಳ್ಳುವುದರಲ್ಲಿ ಸಂದೇಹವಿಲ್ಲ.”
ಗೌತಮ ಋಷಿಯ ಕೃಪೆಯನ್ನಪೇಕ್ಷಿಸಿ ಅಹಲ್ಯೆಯು ಈ ರೀತಿ ನುಡಿದಳು:
ಅಜ್ಞಾನಾದ್ಘರ್ಷಿತಾ ವಿಪ್ರ ತ್ವದ್ರೂಪೇಣ ದಿವೌಕಸಾ |
ನ ಕಾಮಕಾರಾದ್ವಿಪ್ರರ್ಷೇ ಪ್ರಸಾದಂ ಕರ್ತುಮರ್ಹಸಿ ॥೪೦॥

“ಹೇ ವಿಪ್ರನೇ! ಇಂದ್ರನು ನಿನ್ನ ರೂಪವನ್ನು ಧರಿಸಿಬಂದುದನ್ನು ನಾನು ಅರಿಯಲಿಲ್ಲ. ಆತನು ನನ್ನನ್ನು ಭೋಗಿಸಿದ್ದಾನೆ. ನನ್ನ ಇಚ್ಛೆಯಿಂದ ಅದು ನಡೆಯಲಿಲ್ಲ. ಕಾರಣ, ಹೇ ಬ್ರಹ್ಮರ್ಷಿಯೇ, ನನ್ನ ಮೇಳೆ ದಯೆತೋರಬೇಕು!”
ಅಹಲ್ಯೆಯ ಪ್ರಾರ್ಥನೆಯನ್ನು ಕೇಳಿ ಗೌತಮನು ಅವಳಿಗೆ ಈ ರೀತಿ ಅಂದನು:


           ಉತ್ಪತ್ಸ್ಯತಿ ಮಹಾತೇಜಾ ಇಕ್ಷ್ವಾಕೂಣಾಂ ಮಹಾರಥಃ ॥೪೧॥
           ರಮೋ ನಾಮ ಶ್ರುತೋ ಲೋಕೇ ವನಂ ಚಾಪ್ಯುಪಯಾಸ್ಯತಿ |
           ಬ್ರಾಹ್ಮಣಾರ್ಥೇ ಮಹಾಬಾಹುರ್ವಿಷ್ಣುರ್ಮಾನುಷವಿಗ್ರಹಃ ॥೪೨॥
           ತಂ ದ್ರಕ್ಷ್ಯಸಿ ಯದಾ ಭದ್ರೇ ತತಃ ಪೂತಾ ಭವಿಷ್ಯಸಿ |
           ಸ ಹಿ ಪಾವಯಿತುಂ ಶಕ್ತಸ್ತ್ವಯಾ ಯದ್ ದುಷ್ಕೃತಂ ಕೃತಮ್ ॥೪೩॥
           ತಸ್ಯಾತಿಥ್ಯಂ ಚ ಕೃತ್ವಾ ವೈ ಮತ್ಸಮೀಪಂ ಗಮಿಷ್ಯಸಿ |
           ವತ್ಸ್ಯಸಿ ತ್ವಂ ಮಯಾ ಸಾರ್ಧಂ ತದಾ ಹಿ ವರವರ್ಣಿನಿ ॥೪॥


“ಇಕ್ಷ್ಯಾಕುವಂಶದಲ್ಲಿ ಮಹಾರತಿಯೂ ಮಹಾತೇಜಸ್ವಿಯೂ ಆದ ಒಬ್ಬ ಪುರುಷನು ಜನಿಸುವನು. ರಮನೆಂಬ ಹೆಸರಿನಿಂದ ಅವನು ಜಗತ್ತಿನಲ್ಲೆಲ್ಲ ಖ್ಯಾತಿ ಹೊಂದುವನು. ಮನುಷ್ಯರೂಪವನ್ನು ಧರಿಸಿದ ಆ ಮಹಾಪರಾಕ್ರಮಿಯಾದ ವಿಷ್ಣುವು ಬ್ರಾಹ್ಮಣರ ದೆಸೆಯಿಂದ ಈ ವನಕ್ಕೆ ಆಗಮಿಸುವನು. ಹೇ ಕಲ್ಯಾಣಿ! ಅವನ ದರ್ಶನದಿಂದ ನೀನು ಪವಿತ್ರಳಾಗುವೆ. ನಿನ್ನ ದುಷ್ಕರ್ಮಗಳಿಂದ ನಿನ್ನನ್ನು ಪರಿಶುದ್ಧಗೊಳಿಸುವ ಸಾಮರ್ಥ್ಯವು ಆತನಲ್ಲಿದೆ. ಅವನನ್ನು ಸತ್ಕರಿಸಿದ ನಂತರ ನೀನು ನನ್ನ ಬಳಿ ಬರುವೆ; ಎಲೈ ವರವರ್ಣಿನಿಯೇ, ಆಗ ನೀನು ನನ್ನೊಡನೆ ವಾಸಿಸುವೆ.”
ಎರಡು ಸ್ಥಳಗಳಲ್ಲಿದ್ದ ಈ ಶಾಪಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಬಾಲ ಕಾಂಡದಲ್ಲಿಯ ಶಾಪದ ಉತ್ತರಾರ್ಧದಲ್ಲಿ ಉಃಶಾಪವು ಸೇರಿಕೊಂಡಿದೆ. ಈ