ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೨೩


           ಋಷಿಪುತ್ರಾಸ್ತು ತಚ್ಛ್ರುತ್ವಾ ವಾಕ್ಯಂ ಘೋರಾಭಿಸಂಹಿತಮ್ ‖೮‖
           ಶೇಪುಃ ಪರಮಸಂಕ್ರುದ್ದಾಶ್ಚಂಡಾಲತ್ವಂ ಗಮಿಪ್ಯಸಿ ‖೯‖


ರಾಜನ ಭಾಷಣವನ್ನು ಕೇಳಿ ಗುರುಪುತ್ರರು ಕೋಪಾವಿಷ್ಟರಾಗಿ ತ್ರಿಶಂಕುವಿಗೆ 'ನೀನು ಚಾಂಡಾಲನಾಗುವೆ' ಎಂದು ಶಪಿಸಿದರು.
ಆ ರಾತ್ರಿ ಕಳೆಯುತ್ತಲೇ ತ್ರಿಶಂಕುವು ಚಾಂಡಾಲನಾದನು. ಅವನ ಶರೀರವು ಹಾಗೂ ಅವನು ಧರಿಸಿದ ವಸ್ತ್ರವು ನೀಲವರ್ಣದ್ದಾಯಿತು. ಆತನ ದೇಹಕಾಂತಿಯು ಒರಟಾಗಿ ತಲೆಯಲ್ಲಿಯ ಕೂದಲು ಮೊಟಕಾದವು. ಭಸ್ಮದ ಲೇಪನವು ಆತನ ದೇಹದ ಮೇಲೆ ಕಾಣಿಸಿಕೊಂಡಿತು. ಮೈಮೇಲೆ ಧರಿಸಿದ ಅಲಂಕಾರಗಳು ಲೋಹಮಯವಾದುವು. ಆತನು ವಿಶ್ವಾಮಿತ್ರನ ಬಳಿ ಹೋಗಿ ಎಲ್ಲ ವೃತ್ತಾಂತವನ್ನು ಅರುಹಿದನು. ಆತನ ಬಗ್ಗೆ ಕನಿಕರಪಟ್ಟು ವಿಶ್ವಾಮಿತ್ರನು ಅಭಯ ಹೇಳಿ, ರಾಜನ ಮನೋರಥವನ್ನು ಪೂರ್ಣಗೊಳಿಸುವ ಆಶ್ವಾಸನೆಯನ್ನಿತ್ತನು.

೧೫. ವಿಶ್ವಾಮಿತ್ರ < ವಸಿಷ್ಠಪುತ್ರ, ಮಹೋದಯ

ಬಾಲಕಾಂಡ/೫೯

ವಿಶ್ವಾಮಿತ್ರನು ವಸಿಷ್ಠಪುತ್ರರಿಗೆ ಕೊಟ್ಟ ಶಾಪದ ಬಗ್ಗೆ ಶತಾನಂದನು ರಾಮನಿಗೆ ಹೇಳುತ್ತಾನೆ:
ಕುಲೋಪಾಧ್ಯಾಯನಾದ ವಸಿಷ್ಠನು ಹಾಗೂ ಆತನ ನೂರು ಜನ ಪುತ್ರರು ತ್ರಿಶಂಕು ರಾಜನ ಯಜ್ಞವನ್ನು ನಿರಾಕರಿಸಿದ ನಂತರ ತ್ರಿಶಂಕುವು ವಿಶ್ವಾಮಿತ್ರನ ಬಳಿಗೆ ಹೋದನು. ಗುರುಪುತ್ರರಿಂದ ನಿರಾಕರಣೆ, ದೇಹಸಹಿತ ಸ್ವರ್ಗವನ್ನು ಸೇರುವ ತನ್ನ ಆಕಾಂಕ್ಷೆ- ಇವುಗಳನ್ನು ಸವಿಸ್ತಾರವಾಗಿ ತಿಳಿಸಿ, ವಿಶ್ವಾಮಿತ್ರನಿಗೆ ತನ್ನ ಯಜ್ಞದ ಅಧ್ವರ್ಯುಪದವನ್ನು ಸ್ವೀಕರಿಸಬೇಕೆಂದು ನಮ್ರತೆಯಿಂದ ಪ್ರಾರ್ಥಿಸಿದನು. ವಿಶ್ವಾಮಿತ್ರನು ಕನಿಕರಪಟ್ಟು ಈ ರೀತಿ ನುಡಿದನು:
“ಹೇ ವತ್ಸನೇ, ನೀನು ಪರಮನಿಷ್ಠನೆಂದು ನಾನು ಬಲ್ಲೆ; ನಾನು ನಿನ್ನನ್ನು ರಕ್ಷಿಸುವೆ; ಪುಣ್ಯಕರ್ಮದಲ್ಲಿ ತೊಡಗಿದ ಎಲ್ಲ ಮಹರ್ಷಿಗಳನ್ನು ನೀನು ಕೈಕೊಳ್ಳಲಿರುವ ಯಜ್ಞಕ್ಕಾಗಿ ಆಮಂತ್ರಿಸಿ, ನಾನು ನಿನ್ನ ಇಷ್ಟಾರ್ಥವನ್ನ ಪೂರೈಸುವೆ. ಗುರುವಿನ ಶಾಪಯುಕ್ತ ಶರೀರ ಸಮೇತನಾಗಿ ನೀನು ಸ್ವರ್ಗವನ್ನು ಸೇರುವೆ” ಎಂದನು.
ಇತ್ತ ವಿಶ್ವಾಮಿತ್ರನು ಯಜ್ಞಕ್ಕಾಗಿ ಸಾಧನಸಾಮಗ್ರಿಗಳನ್ನು ಸಂಗ್ರಹಿಸಲು ಶಿಷ್ಯಂದಿರಿಗೆ ಅಪ್ಪಣೆ ಮಾಡಿ, ವಸಿಷ್ಠ ಪುತ್ರರನ್ನೊಳಗೊಂಡು ಋತ್ವಿಜವೃಂದ