ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xvii

ಅದೇ ರೀತಿಯಲ್ಲಿ ಕರ್ನಾಟಕದ ಖ್ಯಾತನಾಮ ಪ್ರಕಾಶರಾದ ಮೈಸೂರಿನ ಗೀತಾ ಬುಕ್ ಹೌಸ್‌ನ ಶ್ರೀ ಎಂ. ಸತ್ಯನಾರಾಯಣರಾವ್ ಹಾಗೂ ಶ್ರೀ ಎಂ. ಗೋಪಾಲಕೃಷ್ಣ ಸೋದರರು ನನ್ನ ಪುಸ್ತಕವನ್ನು ಪ್ರಕಟಿಸುತ್ತಿರುವುದು ನನ್ನ ಭಾಗ್ಯವೇ ಸರಿ. ಕನ್ನಡ ಸಾಹಿತ್ಯ ಪ್ರಕಾಶನ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಅವರ ಕರ್ತೃತ್ವ ಹಿರಿದಾಗಿದೆ.
ಹಲವಾರು ಕನ್ನಡಿಗರು ಈ ಅನುವಾದವನ್ನು ಆಸಕ್ತಿಯನ್ನು ಓದಿ ಅನೇಕ ಮೌಲಿಕ ಸೂಚನೆಗಳನ್ನು ಮಾಡಿದ್ದಾರೆ. ಸೊಲ್ಲಾಪುರ ದಯಾನಂದ ಮಹಾ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ॥ ವೆ.ಅ. ದಿವಾಣ್ಜಿ, ಮುದ್ದೇಬಿಹಾಳದ ಮಾತೋಶ್ರೀ ಗಂಗವ್ವ ಮಹಾ ವಿದ್ಯಾಲಯದ ಗ್ರಂಥಪಲ ಶ್ರೀ ಪಂಡಿತ ಸಿದ್ದಪ್ಪ ಕನಮಡಿ, ವಿಜಾಪುರದಲ್ಲಿಯ ವಿದ್ವಾನ್ ಶ್ರೀ ಮಧ್ವಾಚಾರ್ಯ ಮೊಕಾಶಿ, ನಿವೃತ್ತ ಪ್ರಾಚಾರ್ಯ ಶ್ರೀ ಈಶ್ವರಪ್ಪ ಪಾಟೀಲ, ಅವರ ಸೌಭಾಗ್ಯವತಿ ಪ್ರಾಧ್ಯಾಪಿಕೆ ಸ್ವಸ್ತಿಕೆ ಪಾಟೀಲ, ಪ್ರಾಧ್ಯಾಪಕ ಶ್ರೀ ವೆ. ಗೋಪಾಲನ್, ಪ್ರಾಧ್ಯಾಪಕ ಶ್ರೀ ಕಲಾಲ, ಪ್ರಾಧ್ಯಾಪಕ ಶ್ರೀ ಸಾರಂಗಮಠ, ಪ್ರಾಧ್ಯಾಪಕ ಶ್ರೀ ಆರ್.ಕೆ. ಕುಲಕರ್ಣಿ, ಶ್ರೀ ಎನ್.ಎಚ್. ದೇಸಾಯಿ ಮತ್ತು ಶ್ರೀ ಮಲ್ಲಪ್ಪ ಕುಂಬಾರ ಇವರ ಹೆಸರನ್ನು ಉಲ್ಲೇಖಿಸದೆ ಇರಲಾರೆ. ನನ್ನ ಕೃತಿಯ ಬಗ್ಗೆ ಆಸಕ್ತಿ ತೋರಿ ಇದರ ಕನ್ನಡ ಅನುವಾದದ ಬಗ್ಗೆ ನನ್ನಲ್ಲಿ ಉತ್ಸಾಹ ಮೂಡಿಸಿದ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಉಪಾಧ್ಯಕ್ಷರಾದ ಡಾ॥ ಶ್ರೀನಿವಾಸ ಹಾವನೂರ ಅವರಿಗೆ ನಾನು ಋಣಿಯಾಗಿದ್ದೇನೆ.
ಈ ಕೃತಿಯ ಮುದ್ರಣವನ್ನು ಸಮರ್ಪಕವಾಗಿ ಮಾಡಿಕೊಟ್ಟ ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್‌ನ ಶ್ರೀ ಜಿ.ಎಚ್.ಕೃಷ್ಣಮೂರ್ತಿಯವರಿಗೆ ಹಾಗೂ ಮುದ್ರಣದ ಕರಡುಗಳನ್ನು ಶ್ರದ್ಧೆ, ಪ್ರೀತಿ, ವಿಶ್ವಾಸಗಳಿಂದ ತಿದ್ದಿಕೊಟ್ಟ ಶ್ರೀ ರಂಗರಾವ್ ರೋಹಿಡೇಕರ (ವಿಜಾಪುರ) ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಹೀಗೆ, ಋಣಸಂಚಯವು ನನಗೆ ಸಾಧ್ಯವಿತ್ತು; ಸುಲಭವಿತ್ತು; ಅದನ್ನು ನಾನು ಸಾಕಷ್ಟು ಮಾಡಿಕೊಂಡಿದ್ದೇನೆ. ನನ್ನ ಕೃತಿಯಿಂದ ಈ ಉಕ್ತಿಯ ಪೂರ್ವಾರ್ಧವನ್ನು ಸಾರ್ಥಕಗೊಳಿಸಿದ್ದೇನೆ. ಉತ್ತರಾರ್ಧವೂ ಸಫಲವಾಗಬೇಕೆಂಬ ಆಸೆ ಇದೆ; ಆದರೆ ಅದು ನನ್ನ ಕೇಯಲ್ಲಿಲ್ಲ. ಆ ಅಧಿಕಾರವು ಸಂಪೂರ್ಣವಾಗಿ ಓದುಗರದಾಗಿದೆ; ರಸಿಕರದಾಗಿದೆ; ವಿಮರ್ಶಕರದಾಗಿದೆ. ಅವರೆಲ್ಲರೂ ನನಗೆ ವರವನ್ನು ಕರುಣಿಸಬೇಕೆಂದು ಪ್ರಾರ್ತಿಸುವದಷ್ಟೇ ನನ್ನ ಕೈಯಲ್ಲಿದೆ.

ಪುಣೆ ೪೧೧ ೦೨೯
ಆಗಸ್ಟ್ ೨೪, ೧೯೯೦

ಶ್ರೀಪಾದ ರಘುನಾಥ ಭಿಡೆ