ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೩೭


ಆಜ್ಞಾಪಿಸಿದನು. ಅದನ್ನು ಕೇಳಿಸಿಕೊಂಡ ವಿರಾಧನು ನಮ್ರನಾಗಿ ರಾಮನಿಗೆ ಈ ರೀತಿ ನುಡಿದನು:
“ಎಲೈ ಪುರುಷೋತ್ತಮನೇ, ನಾನು ಮೂಢತನದಿಂದ ನಿನ್ನನ್ನು ಗುರುತಿಸಲಿಲ್ಲ. ಹೇ ರಾಮನೆ, ನಿನ್ನ ಜನ್ಮದಿಂದ ಕೌಸಲ್ಯೆಯು ಸುಪುತ್ರವತಿಯಾದಳು. ಆ ರಾಮನನ್ನು, ಈ ಮಹಾಭಾಗ್ಯವತಿಯಾದ ಸೀತೆಯನ್ನು, ಯಶಸ್ವಿಯಾದ ಲಕ್ಷ್ಮಣನನ್ನು ಈಗ ಗುರುತಿಸಿದ್ದೇನೆ.”- ಹೀಗೆಂದು ವಿರಾಧ ರಾಕ್ಷಸನು ತನ್ನ ಪೂರ್ವವೃತ್ತಾಂತವನ್ನು ಅರುಹಿದನು:


        ಅಭಿಶಾಪದಹಂ ಘೋರಾ ಪ್ರವತಿಷ್ಟೋ ರಾಕ್ಷಸೀಂ ತನುಮ್ |
        ತುಂಬರೂರ್ನಾಮ ಗಂಧರ್ವಃ ಶಪ್ತೋ ವೈಶ್ರವಣೇನ ಹಿ ॥೧೬॥
        ಪ್ರಸಾದ್ಯಮಾನಶ್ಚ ಮಯಾ ಸೋsಬ್ರವೀನ್ಮಾಂ ಮಹಾಯಶಾಃ|
        ಯದಾ ದಾಶರಥೀ ರಾಮಸ್ತ್ವಾಂ ವಧಿಷ್ಯತಿ ಸಂಯುಗೇ ॥೧೭॥
        ತದಾ ಪ್ರಕೃತಿಮಾಪನ್ನೋ ಭವಾನ್ ಸ್ವರ್ಗಂ ಗಮಿಷ್ಯತಿ |
        ಅನುಪಸ್ಥೀಯಮಾನೋ ಮಾಂ ಸ ಕ್ರುದ್ಧೋ ವ್ಯಾಜಹಾರ ಹ ॥೧೮॥
        ಇತಿ ವೈಶ್ರವಣೋ ರಾಜಾ ರಂಭಾಸಕ್ತಮುವಾಚ ಹ |
        ತವ ಪ್ರಸಾದಾನ್ಮುಕೋsಹಮಭಿಶಾಪತ್ಸುದಾರುನಾತ್ ॥೧೯॥


“ಈ ಭೀಕರವಾದ ರಾಕ್ಷಸದೇಹವು ಶಾಪದಿಂದ ನನಗೆ ಪ್ರಾಪ್ತವಾಗಿದೆ. ಪೂರ್ವದಲ್ಲಿ ನಾನು 'ತುಂಬರು' ಎಂಬ ಗಂಧರ್ವನಾಗಿದ್ದೆನು. ಕುಬೇರನು ನನಗೆ ಶಾಪವನ್ನು ಕೊಟ್ಟನು. ಶಾಪವಿಮೋಚನೆಯಾಗಬೇಕೆಂದು ನಾನು ಕುಬೇರನನ್ನು ಪ್ರಾರ್ಥಿಸಿದೆನು. ಆಗ ಆ ಕುಬೇರನು ಈ ರೀತಿ ನುಡಿದನು:
“ದಾಶರಥೀರಾಮನು ಬಂದು ಸಂಗ್ರಾಮದಲ್ಲಿ ನಿನ್ನನ್ನು ವಧಿಸುವನು; ಆಗ ಪುನಃ ನೀನು ಗಂಧರ್ವರೂಪವನ್ನು ತಾಳಿ ಸ್ವರ್ಗವನ್ನು ಸೇರುವೆ. ನಾನು ರಂಭೆಯಲ್ಲಿ ಆಸಕ್ತನಾಗಿದ್ದರಿಂದ ಕುಬೇರರಾಜನ ಸೇವೆಯು ನನ್ನಿಂದ ಸರಿಯಾಗಿ ನಡೆಯಲಿಲ್ಲ; ಆದ್ದರಿಂದ ಕೋಪಗೊಂಡು ಕುಬೇರನು ನನಗೆ ಮೇಲಿನಂತೆ ಶಾಪವನ್ನು ಕೊಟ್ಟನು. ಕುಬೇರನ ನುಡಿಯಂತೆ ಇಂದು ನಿನ್ನ ಕೃಪೆಯಿಂದ ಈ ಅತಿ ಭಯಂಕರ ಶಾಪದಿಂದ ಮುಕ್ತಿ ಪಡೆಯುತ್ತೇನೆ.”
ಇದು ಯಾಚಿತ ಉಃಶಾಪವಾಗಿದೆ.