ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮೀರಿ ಸೀತೆಯನ್ನು ಒಂಟಿಯಾಗಿ ಬಿಟ್ಟುಹೋಗುವದು ಯೋಗ್ಯವಿರಲಿಲ್ಲ; ಆದರೆ ಸೀತೆಯ ಒತ್ತಾಯದಿಂದ ಆತನು ರಾಮನ ಶೋಧಾರ್ಥಕ್ಕಾಗಿ ಹೊರಟನು. ಸೀತೆಯು ಏಕಾಕಿಯಾಗಿದ್ದಾಗ ಆಕೆಯನ್ನು ಅಪಹರಿಸುವ ಉದ್ದೇಶದಿಂದ ಬಂದ ರಾವಣನಿಗೆ ಯೋಗ್ಯವಾಧ ಸಂಧಿಯು ದೊರಕಿತು. ರಾವಣನು ಬ್ರಾಹ್ಮಣನ ವೇಷವನ್ನು ಧರಿಸಿದ್ದರಿಂದ ಸೀತೆಗೆ ಆತನ ನಿಜರೂಪವು ತಿಳಿಯಲಿಲ್ಲ. ಆಸನ, ಪಾದ್ಯಫಲಾದಿಗಳಿಂದ ಆಕೆಯು ಆತನನ್ನು ಅತಿಥಿಯೆಂದು ಸ್ವಾಗತಿಸಿದಳು.


          ಬ್ರಾಹ್ಮಣಶ್ಚಾತಿಥಿಶ್ಚೈಷ ಅನುಕ್ತೋ ಹಿ ಶಪೇತ ಮಾಮ್ ‖೨‖


“ಈ ಬ್ರಾಹ್ಮಣನ ರೂಪದಿಂದ ಅತಿಥಿಯು ಬಂದಿದ್ದಾನೆ; ಆತನು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಡದಿದ್ದರೆ ಆತನು ಶಪಿಸಬಹುದು" ಎಂದು ಸೀತೆಗೆ ಅನ್ನಿಸಿತು.

ನಿಜದಲ್ಲಿ ಶಾಪವನ್ನು ನುಡಿದಿಲ್ಲ. ಕೇವಲ ಶಾಪ ಕೊಡಬಹುದೆಂಬ ಭಯವನ್ನು ವ್ಯಕ್ತಮಾಡಲಾಗಿದೆ. ಹೀಗಿರುವದರಿಂದ ಶಾಪದ ಸ್ವರೂಪವು ತಿಳಿದು ಬರುವದಿಲ್ಲ.

೨೭. ರಾಮ < ಪ್ರಸ್ರವಣ (ಪರ್ವತ), ನದಿ

ಅರಣ್ಯಕಾಂಡ/೬೪

ಸೀತೆಯ ಶೋಧಕ್ಕಾಗಿ ಅಲೆದಾಡುತ್ತಿದ್ದಾಗ ದಾರಿಯಲ್ಲಿ ರಾಮಲಕ್ಷ್ಮಣರು ಅನೇಕ ವನ-ನದಿ-ಪರ್ವತಗಳನ್ನು ಕಂಡರು. ಸೀತೆಯು ಎಲ್ಲಿರುವಳು?- ಎಂದು ಗೋದಾವರಿ ನದಿಯನ್ನು ಪ್ರಶ್ನಿಸಿದಾಗ ಯಾವ ಉತ್ತರವೂ ಬರಲಿಲ್ಲ. ಕಾಡಿನಲ್ಲಿಯ ಪ್ರಾಣಿಗಳಿಗೆ ಅದೇ ಪ್ರಶ್ನೆಯನ್ನು ಕೇಳಿದಾಗ, ಅವು ದಕ್ಷಿಣಾಭಿಮುಖವಾಗಿ ನಿಂತು ಮೇಲಿಂದ ಮೇಲೆ ಆಕಾಶದತ್ತ ದೃಷ್ಟಿಸಿದವು. ಇದರಿಂದ ಸೀತೆಯು ಆಕಾಶ ಮಾರ್ಗವಾಗಿ ದಕ್ಷಿಣ ದಿಕ್ಕಿಗೆ ಹೋಗಿರಬಹುದೆಂದು ಲಕ್ಷ್ಮಣನು ಊಹಿಸಿದನು. ಅವರಿಬ್ಬರೂ ದಕ್ಷಿಣ ದಿಕ್ಕಿನತ್ತ ಹೊರಟರು. ರಾಮನು ಶೋಕಾಕುಲನಾಗಿದ್ದನು. ಹಾದಿಯಲ್ಲಿ ಹೂವುಗಳು ಬಿದ್ದುದನ್ನು ಅವರು ಕಂಡರು. ಸೀತೆಯ ಮುಡಿಗೆಂದು ರಾಮನೇ ಆ ಹೂಗಳನ್ನು ತಂದುಕೊಟ್ಟಿದ್ದನು; ಕಾರಣ ಅವುಗಳನ್ನು ರಾಮನು ಗುರುತಿಸಿದನು. ಅಲ್ಲಿಂದ ಅವರು ಪ್ರಸ್ತವಣಪರ್ವತಕ್ಕೆ ತೆರಳಿದರು. ರಾಮನು ಆ ಪರ್ವತಕ್ಕೆ 'ಸೀತೆ ಎಲ್ಲಿ?' ಎಂದು ಕೇಳಿದನು. ಪರ್ವತವು ಯಾವ ಉತ್ತರವನ್ನೂ ಕೊಡಲಿಲ್ಲ; ರಾಮನು ತುಂಬಾ ರೇಗಿಕೊಂಡನು. ಆತನು ಆ ಪರ್ವತವನ್ನು