ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೪೧


ಕುರಿತು, “ಎಲೈ ಪರ್ವತರಾಜನೆ, ನೀನು ನನ್ನ ಹೊಂಬಣ್ಣದ ಸುಂದರಿಯಾದ ಸೀತೆಯು ಎಲ್ಲಿದ್ದಾಳೆಂದು ತೋರಿಸು! ಇಲ್ಲವಾದರೆ ನಾನು ನಿನ್ನ ಶಿಖರಗಳನ್ನೆಲ್ಲ ಧ್ವಂಸಗೊಳಿಸುವೆ” ಎಂದನು. ಆಗ ಆ ಪರ್ವತರಾಜನು ಸೀತೆಯು ಹೋದ ಮಾರ್ಗದ ಕುರುಹುಗಳನ್ನು ಸೂಚಿಸಿದನು. ಪ್ರತ್ಯಕ್ಷದಲ್ಲಿ ಮಾತನಾಡದೆ ಪರ್ವತವು ಸೂಚಿಸಿದೆ. ಆಗ ರಾಮನು ಪರ್ವತವನ್ನುದ್ದೇಶಿಸಿ ಈ ರೀತಿ ಎಂದನು:


          ಮಮ ಬಾಣಾಗ್ನಿನಿರ್ದಗ್ಧೋ ಭಸ್ಮೀಭೂತೋ ಭವಿಷ್ಯಸಿ ‖೩೩‖
          ಅಸೇವ್ಯಃ ಸರ್ವತಶ್ಚೈವ ನಿಸ್ತೃಣದ್ರುಮಪಲ್ಲವಃ ‖೩೪‖


“ನನ್ನ ಬಾಣವು ಅಗ್ನಿಯಾಗಿ ನಿನ್ನನ್ನು ದಹಿಸುವ ಕಾರಣ ನೀನು ಸುಟ್ಟು ಬೂದಿಯಾಗುವೆ. ನಿನ್ನಲ್ಲಿ ಬೆಳೆದ ತೃಣ, ವೃಕ್ಷಪಲ್ಲವಗಳು ಇಲ್ಲವಾಗಿ ನಿನ್ನ ಆಶ್ರಯಕ್ಕೆ ಯಾರೂ ಬರಲಾರರು!”
ಈ ರೀತಿ ನುಡಿದು, ರಾಮನು ಲಕ್ಷ್ಮಣನಿಗೆ ಹೀಗೆ ಹೇಳಿದನು:


          ಇಮಾಂ ವಾ ಸರಿತಂ ಚಾದ್ಯ ಶೋಷಯಿಷ್ಯಾಮಿ ಲಕ್ಷ್ಮಣ ‖೩೪‖
          ಯದಿ ನಾಖ್ಯತಿ ಮೇ ಸೀತಾಮದ್ಯ ಚಂದ್ರನಿಭಾನನಾಮ್ ‖೫೫‖


"ಪೂರ್ಣಚಂದರನಂತೆ ಆಹ್ಲಾದಕರ ಮುಖವುಳ್ಳ ನನ್ನ ಸೀತೆಯು ಎಲ್ಲಿರುವಳೆಂದು ಈ ನದಿಯು ಹೇಳದಿದ್ದರೆ ನಾನು ಈ ನದಿಯನ್ನು ಒಣಗಿಸಿ ಬಿಡುತ್ತೇನೆ.”


೨೮. ಸ್ಥೂಲಶಿರಾ < ಕಬಂಧ

ಅರಣ್ಯಕಾಂಡ/೭೧

ಕಬಂಧನು ರಾಮನಿಗೆ ತನ್ನ ಪೂರ್ವವೃತ್ತಾಂತವನ್ನು ಹೇಳುತ್ತಿದ್ದಾನೆ:
“ಪೂರ್ವದಲ್ಲಿ ನನ್ನ ದೇಹವು ಇಂದ್ರ, ಚಂದ್ರ, ಸೂರ್ಯರ ದೇಹದಂತೆ ದಿವ್ಯವಾಗಿತ್ತು. ನನ್ನಲ್ಲಿ ಪ್ರಚಂಡ ಬಲಶೌರ್ಯಗಳಿದ್ದವು. ಆಗ ನಾನು ಭೀಕರವಾದ ರಾಕ್ಷಸರೂಪವನ್ನು ಧರಿಸಿ ಅರಣ್ಯದಲ್ಲಿದ್ದ ಋಷಿಗಳನ್ನು ಅಂಜಿಸುತ್ತಿದ್ದೆನು. ಒಂದು ಸಲ 'ಸ್ಥೂಲಶಿರಾ' ಎಂಬ ಋಷಿಯು ವನದಲ್ಲಿ ಹಣ್ಣುಹಂಪಲಗಳನ್ನು ಅರಸುತ್ತಿದ್ದಾಗ ನಾನು ಆತನ ಮೇಲೆ ಧಾವಿಸಿದೆ. ಆಗ ಆ ಋಷಿಗೆ ವಿಪರೀತ ಸಿಟ್ಟು ಬಂದಿತು.