ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


          ತೇನಾಹಮುಕ್ತಃ ಪ್ರೇಕ್ಷ್ಯೇವಂ ಘೋರಶಾಪಾಭಿಧಾಯಿನಾ ‖೪‖
          ಏತದೇವಂ ನೃಶಂಸಂ ತೇ ರೂಪಮಸ್ತು ವಿಗರ್ಹಿತಮ್ |
          ಸ ಮಯಾ ಯಾಚಿತಃ ಕ್ರುದ್ಧಃ ಶಾಪಸ್ಯಾಂತೋ ಭವೇದಿತಿ ‖೫‖
          ಅಭಿಶಾಪಕೃತಸ್ಯೇತಿ ತೇನೇದಂ ಭಾಷಿತಂ ವಚಃ |
          ಯದಾ ಛಿತ್ತ್ವಾ ಭುಜೌ ರಾಮಸ್ತ್ವಾಂ ದಹೇದ್ವಿಜನೇ ವನೇ ‖೬‖
          ತದಾ ತ್ವಂ ಪ್ರಾಪ್ಸ್ಯಸೇ ರೂಪಂ ಸ್ವಮೇವ ವಿಪುಲಂ ಶುಭಮ್ ‖೭‖


'ನಿನ್ನ ಶರೀರವು ಇದೇ ತರಹ ನಿಂದಾಸ್ಟದವಾಗಲಿ!' ಎಂಬ ಘೋರ ಶಾಪವನ್ನು ಋಷಿಯು ನುಡಿದನು. ನಾನು ಆಗ 'ನಿಮ್ಮ ಮೇಲೇರಿಬಂದ ಕಾರಣ ನೀವು ಶಪಿಸಿದ್ದೀರಿ; ಆ ಶಾಪವು ಇಲ್ಲದಾಗಲಿ' ಎಂದು ಪ್ರಾರ್ಥಿಸಿದೆ. ಆಗ ಸ್ಥೂಲಶಿರಾ ಋಷಿಯು ಈ ರೀತಿ ಹೇಳಿದನು: “ಶ್ರೀರಾಮನು ನಿರ್ಜನವಾದ ಈ ವನಕ್ಕೆ ಬಂದು ನಿನ್ನ ಭುಜಗಳನ್ನು ಕತ್ತರಿಸಿ ನಿನ್ನನ್ನು ಸುಟ್ಟುಹಾಕುವನು. ಆಗ ಪುನಃ ನಿನ್ನ ಶುಭವಾದ ಭವ್ಯವಾದ ಸ್ವರೂಪವು ನಿನಗೆ ಪ್ರಾಪ್ತವಾಗುತ್ತದೆ.”
ಈ ಶಾಪದ ಉತ್ತರಾರ್ಧದಲ್ಲಿ ಉಃಶಾಪವಿದ್ದು ಅದು 'ಯಾಚಿತ'ವಾಗಿದೆ.


೨೯. ಇಂದ್ರ < ಕಬಂಧ

ಅರಣ್ಯಕಾಂಡ/೭೧

ಕಬಂಧನು ಇಂದ್ರನಿಂದ ಪಡೆದ ಶಾಪದ ವೃತ್ತಾಂತವನ್ನು ರಾಮನಿಗೆ ವಿವರಿಸುತ್ತಾನೆ:
“ನನಗೆ ರಾಕ್ಷಸರೂಪವು ದೊರೆತನಂತರ ನಾನು ಉಗ್ರತಪಸ್ಸನ್ನು ಆಚರಿಸಿ ಬ್ರಹ್ಮದೇವನನ್ನು ಸಂತುಷ್ಟಗೊಳಿಸಿದೆ. ಆಗ ಬ್ರಹ್ಮದೇವನು ನನಗೆ ದೀರ್ಘಾಯುಸ್ಸನ್ನು ದಯಪಾಲಿಸಿದನು. ಅದರಿಂದ ನನಗೆ ಅಹಂಕಾರ ಉಂಟಾಯಿತು. ನಾನು ದೀರ್ಘಾಯುವಾದ್ದರಿಂದ ಇಂದ್ರನು ನನ್ನನ್ನು ಯಾವ ರೀತಿಯಿಂದಲೂ ವಧಿಸಲಾರನೆಂದು ಇಂದ್ರನ ಮೇಲೆ ಏರಿಹೋದೆನು. ಆಗ ಇಂದ್ರನು ಸಹಸ್ರ ಮೊನೆಗಳಿದ್ದ ವಜ್ರಾಯುಧವನ್ನು ನನ್ನ ಮೇಲೆ ಎಸೆದನು. ಆ ಆಘಾತದಿಂದ ನನ್ನ ಎರಡೂ ತೊಡೆಗಳು ಮತ್ತು ನನ್ನ ಶಿರವು ದೇಹದಲ್ಲಿ ಹತ್ತಿಕ್ಕಲ್ಪಟ್ಟವು. ಇಂದ್ರನು ನನ್ನನ್ನು ಕೊಲ್ಲಲಿಲ್ಲ; ಬ್ರಹ್ಮದೇವನ ಮಾತು ಸತ್ಯವಾಗಲಿ” ಎಂದು ನುಡಿದನು. ಹೀಗೆ ಮುಖ ಪುಸ್ತಕಗಳು ಭಗ್ನವಾದ ನಂತರ ಆಹಾರವನ್ನು ಸೇವಿಸುವದು ಹೇಗೆ? ದೀರ್ಘಕಾಲ ಜೀವಿಸಿರುವುದು ಹೇಗೆ?” ಎಂದು ಅಳುಕುತ್ತ ನಾನು ಕೇಳಿದಾಗ,