ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೪೩


          -ಶಕೋ ಮೇ ಬಾಹೂ ಯೋಜನಮಾಯತೌ ‖೧೩‖
          ತದಾ ಚಾಸ್ಯಂ ಚ ಮೇ ಕುಕ್ಷೌ ತೀಕ್ಷ್ಣದಂಷ್ಟ್ರಮಕಲ್ಪಯತ್ |
          ಸೊಹಂ ಭುಜಾಭ್ಯಾಂ ದಿರ್ಘಾಭ್ಯಾಂಸಂಕ್ಷಿಪ್ಯಾಸ್ಮಿನ್ವನೇಚರಾನ್ ‖೧೪‖
          ಸಿಂಹದ್ವೀಪಮೃಗವ್ಯಾಘ್ರಾನ್ಬಕ್ಷಯಾಮಿ ಸಮಂತತಃ |
          ಸ ತು ಮಾಮಬ್ರವೀದಿಂದ್ರೋ ಯದಾ ರಾಮಃ ಸಲಕ್ಷ್ಮಣಃ ‖೧೫‖
          ಛೇತ್ಸ್ಯತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯತಿ ‖೧೬‖


“ಇಂದ್ರನು ನನಗೆ ಒಂದು ಯೋಜನದಷ್ಟು ದೀರ್ಘವಾದ ಬಾಹುಗಳನ್ನು ಕೊಟ್ಟನು. ತೀಕ್ಷ್ಣ ಹಲ್ಲುಗಳುಳ್ಳ ಮುಖವನ್ನು ಉದರದಲ್ಲಿ ನಿರ್ಮಿಸಿದನು. ಆ ದಿನದಿಂದ ಈ ಅರಣ್ಯದಲ್ಲಿ ಸಂಚರಿಸುವ ಸಿಂಹ, ಆನೆ, ವ್ಯಾಘ್ರ, ಮೃಗ, ಚಿರತೆಗಳನ್ನು ನನ್ನ ದೀರ್ಘವಾದ ಬಾಹುಗಳಿಂದ ಹಿಡಿದು ಹಿಡಿದು ಭಕ್ಷಿಸುತ್ತಿದ್ದೇನೆ; ಅದಿರಲಿ! 'ಲಕ್ಷ್ಮಣನನ್ನು ಒಡಗೂಡಿ ರಾಮನು ಯುದ್ಧದಲ್ಲಿ ನಿನ್ನ ಭುಜಗಳನ್ನು ತುಂಡರಿಸುವನು; ಆಗ ನೀನು ಸ್ವರ್ಗಕ್ಕೆ ಹೋಗುವೆ!' ಎಂದು ಇಂದ್ರನು ನನಗೆ ಹೇಳಿದ್ದಾನೆ.
'ನಾನು ಅಂದಿನಿಂದ ರಾಮನ ಬರುವಿಕೆಯನ್ನು ಕಾಯುತ್ತಿದ್ದೇನೆ. ರಾಮನು ಯಾರು ಎಂಬುದು ನನಗೆ ಗೊತ್ತಿಲ್ಲ. ಕೈಗೆ ಬಂದುದನ್ನು ಲಪಟಾಯಿಸುವ ಕ್ರಮವನ್ನು ಕೈಕೊಂಡರೆ ಎಂದಾದರೂ ರಾಮನ ಭೇಟಿಯಾಗಬಹುದೆಂಬ ಭರವಸೆ ನನಗಿತ್ತು. ನೀನೇ ಆ ರಾಮನೆಂದು ತಿಳಿದುಬಂದಿದ್ದರಿಂದ ನನಗೆ ಪರಮಾನಂದ ವಾಗಿದೆ. ನನಗೆ ಅಗ್ನಿಯನ್ನು ಕೊಟ್ಟು ಉತ್ತರಕ್ರಿಯಾದಿಗಳನ್ನು ನೀನೇ ನೆರವೇರಿಸು' ಎಂದು ರಾಮನಿಗೆ ಬಿನ್ನವಿಸಿದನು. “ದಹನವಾದ ಮೇಲೆ ನನ್ನ ಪೂರ್ವರೂಪವು ನನಗೆ ಪ್ರಾಪ್ತವಾಗುತ್ತದೆ; ಆಗ ನಿನಗೆ ಯುಕ್ತಿಯ ಮಾತುಗಳನ್ನು ತಿಳಿಸಿ ಗೆಳೆತನವನ್ನು ಸಾರ್ಥಕಗೊಳಿಸುತ್ತೇನೆ. ನಿನ್ನ ಹೊರತು ಯಾರಿಂದಲೂ ನನಗೆ ಸಾವು ಬರುವಂತಿಲ್ಲ; ಆದ್ದರಿಂದ ನನ್ನ ಪ್ರಾಣ ತೆಗೆದು ನನ್ನನ್ನು ಉಪಕರಿಸು” ಎಂದು ಕಬಂಧನು ರಾಮನಿಗೆ ಹೇಳಿದನು.
ಇಂದ್ರನು ಕಬಂಧನ ವಿಕೃತಿಯನ್ನು, ಶಾಪಕೊಟ್ಟು ಮಾಡಿರಲಿಲ್ಲ; ವಜ್ರ ಪ್ರಹಾರದಿಂದ ಮಾಡಿರುವುದರಿಂದ ಇದಕ್ಕೆ ಶಾಪವೆಂದೆನ್ನಲಾಗದು. ಇಂದ್ರನ ಶಾಪೋದ್ಗಾರವು ಕಂಡುಬಂದಿಲ್ಲ. ಶಾಪದ ಮುಕ್ತಿಯ ಉಲ್ಲೇಖವು ಮಾತ್ರ ನಿಚ್ಚಳವಾಗಿದೆ.