ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೩೦. ? < ದನು

ಕಿಷ್ಕಿಂಧಾಕಾಂಡ/೪

ರಾಮಲಕ್ಷ್ಮಣರ ಭೇಟಿಯನಂತರ ಮಹಾತ್ಮನಾದ ಸುಗ್ರೀವನಿಗೆ ಸಹಕಾರ
ದೊರೆತು ರಾಜ್ಯ ಪ್ರಾಪ್ತಿಯಾಗುವದೆಂಬ ಭರವಸೆ ಹನುಮಂತನಿಗಾಯಿತು.
ಅವರೊಡನೆ ಮಿತ್ರತ್ವವನ್ನು ಬೆಳೆಸುವದು ಉಚಿತವೆನಿಸಿತು. ವಿವಿಧ ಪ್ರಕಾರದ
ಹಿಂಸೆ ಪ್ರಾಣಿಗಳಿದ್ದ ಈ ಘೋರ ಅರಣ್ಯಕ್ಕೆ ರಾಮಲಕ್ಷ್ಮಣರು ಯಾವ ಕಾರ್ಯಕ್ಕಾಗಿ
ಬಂದಿದ್ದಾರೆಂಬುದನ್ನು ಹನುಮಂತನು ಕೇಳಿದನು. ಆಗ ರಾಮನು ಅದನ್ನು
ವಿವರಿಸಲು ಲಕ್ಷ್ಮಣನಿಗೆ ಹೇಳಿದನು. ಆಗ ಲಕ್ಷ್ಮಣನು ತಾವಿಬ್ಬರೂ ದಶರಥ
ರಾಜನ ಪುತ್ರರೆಂದು ಹೇಳಿ, ದಶರಥರಾಜನ ಬಗ್ಗೆ, ರಾಮನ ಬಗ್ಗೆ ಮತ್ತು ತಮ್ಮ
ವನವಾಸದ ವೃತ್ತಾಂತವನ್ನು ವಿವರಿಸಿದನು. ರಾಮನ ಪತ್ನಿಯಾದ ಸೀತೆಯು ಒಂಟಿ
ಯಾಗಿದ್ದುದನ್ನು ಕಂಡು ಯಾವನೊಬ್ಬ ರಾಕ್ಷಸನಂ ಆಕೆಯನ್ನು ಅಪಹರಿಸಿದ್ದಾನೆ,
ಆ ರಾಕ್ಷಸನು ಯಾರೆಂಬುದು ನಮಗೆ ಗೊತ್ತಿಲ್ಲ. ಸೀತೆಯನ್ನು ಹುಡುಕುತ್ತ
ಅಲೆದಾಡುತ್ತಿದ್ದ ನಾವು ಸಾಂಪ್ರತ ಇಲ್ಲಿಗೆ ಬಂದಿದ್ದೇವ. ಏಕೆಂದರೆ-
ದನುರ್ನಾಮ ದಿತೇಃ ಪುತ್ರಃ ಶಾಪಾದ್ರಾಕ್ಷಸತಾಂ ಗತಃ |
ಆಖ್ಯಾತಸ್ತೇನ ಸುಗ್ರೀವಃ ಸಮರ್ಥೋ ವಾನರಾಧಿಪಃ ‖೧೫‖
ಸ ಜ್ಞಾಸ್ಯತಿ ಮಹಾವಿರ್ಯಸ್ತವ ಭಾರ್ಯಾಪಹಾರಿಣಮ್ |
ಏವಮುಕ್ತ್ವಾ ದನುಃ ಸ್ವರ್ಗಂ ಭ್ರಾಜಮಾನೋ ದಿವಂಗತಃ ‖೧೬‖

“ದಿತಿಯ ಮಗನಾದ 'ದನು' ಎಂಬಾತನು ಶಾಪದಿಂದ ರಾಕ್ಷಸನಾಗಿದ್ದನು.
ಆತನಿಂದ ನಮಗೆ ವಾನರರಾಜನಾದ ಸುಗ್ರೀವನು ಶಕ್ತಿಶಾಲಿಯೂ ಸಮರ್ಥನೂ
ಇರುವನೆಂದು ತಿಳಿಯಿತು. 'ಆ ಮಹಾವೀರನಾದ ಸುಗ್ರೀವನು ನಿನ್ನ ಪತ್ನಿಯನ್ನು
ಅಪಹರಿಸಿದವನನ್ನು ಕಂಡುಹಿಡಿಯುವವನು' ಎಂದು ಹೇಳಿ ತೇಜಸ್ವಿಯಾದ
ದನುವು ಸ್ವರ್ಗಕ್ಕೆ ಹೋಗುವಾಗ ಆಕಾಶಮಾರ್ಗದಿಂದ ಹೊರಟುಹೋದನು.”
ಈ ಶಾಪವನ್ನು ಕೊಟ್ಟವರು ಯಾರು? ಯಾವ ತಪ್ಪಿಗಾಗಿ ಕೊಟ್ಟರು?
ಶಾಪವು ಯಾವ ಬಗೆಯದಿತ್ತು? ಇತ್ಯಾದಿಗಳ ಬಗ್ಗೆ ಬಹಳ ಸಂದಿಗ್ಧತೆ ಇದೆ.
ಇಲ್ಲಿ ಕೇವಲ ಶಾಪದ ಉಲ್ಲೇಖ ಮಾತ್ರವಿದೆ.
ಅರಣ್ಯಕಾಂಡ ೭೧- ನೋಡಿರಿ.