ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೫೩


            ಯಾಂ ಚ ರಾತ್ರಿ ಮರಿಷ್ಯಾಮಿ ಜಾಯೇ ರಾತ್ರಿಂ ಚ ಯಮಹಮ್ |
            ಏತಸ್ಮಿನ್ನಂತರೇ ಕಲೇ ಯನ್ಮಯಾ ಹ್ಯಶುಭಂ ಕೃತಮ್ |
            ಸರ್ವಂ ತದುಪಪದ್ಯೇಥಾ ಜಹ್ಯಾಂ ಚೇದ್ಯದಿ ಜೀವಿತಮ್ ‖೩೩‖


"ನನ್ನ ಹುಟ್ಟಿನಿಂದ ಸಾಯುವವರೆಗೆ ನನ್ನಿಂದ ನಡೆದ ಪಾತಕಗಳು, ನಾನು ಇಲ್ಲಿ ಸತ್ತರೆ, ನಿನಗೆ ಅಂಟಿ" ಎಂದನು.
ಆತನ ಆಕ್ರೋಶವನ್ನು ಕೇಳಿ ರಾಮನಿಗೆ ಕನಿಕರವೆನಿಸಿತು. "ಆಗಮಿಸಿದ ದೂತನನ್ನು ಬಿಡುಗಡೆ ಮಾಡಿರಿ" ಎಂದು ವಾನರರಿಗೆ ಆಜ್ಞಾಪಿಸಿದನು.
ಇದು ಶಾಪವೋ? ಕಳವಳದ ಉದ್ಗಾರವೋ? ಶಾಪವಿದ್ದರೆ ಅದನ್ನು ಕಟ್ಟಳೆಯದೆನ್ನಬಹುದು. ಅದನ್ನು ಕೊಡುವ ಸಿದ್ಧಿಯು ಶುಕನಿಗೆ ಎಲ್ಲಿಂದ ಬಂದಿತು? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

೩೭. ಬ್ರಹ್ಮದೇವ < ಕುಂಭಕರ್ಣ

ಯುದ್ಧಕಾಂಡ/೬೧

ರಾಮನ ವಿನಂತಿಯ ಮೇರೆಗೆ ವಿಭೀಷಣನು ಕುಂಭಕರ್ಣನ ಬಗ್ಗೆ ಹೇಳುತ್ತಾನೆ:
ಕುಂಭಕರ್ಣನು ವಿಶ್ರವಸನ ಪರಾಕ್ರಮಿಯಾದ ಪುತ್ರನು; ಬೇರೆ ಯಾವ ರಾಕ್ಷಸನೂ ಆತನಿಗೆ ಸಾಟಿಯಲ್ಲ; ಆತನು ಸಂಗ್ರಾಮದಲ್ಲಿ ದೇವದಾನವರನ್ನು, ಭುಜಂಗ, ರಾಕ್ಷಸ, ಯಕ್ಷ, ಗಂಧರ್ವ, ಪನ್ನಗ, ವಿದ್ಯಾಧರ ಆದಿ ಎಲ್ಲವನ್ನೂ ಸೋಲಿಸಿದ್ದಾನೆ. ಕುಂಭಕರ್ಣನನ್ನು ವಧಿಸುವದು ದೇವತೆಗಳಿಗೂ ಸಾಧ್ಯವಾಗಿಲ್ಲ. ರಾಕ್ಷಸರಲ್ಲಿ ಆತನು ಅತ್ಯಂತ ತೇಜಸ್ವಿಯೂ, ವರಪ್ರಾಪ್ತಿಯಿಂದ ತುಂಬಾ ಬಲಶಾಲಿಯೂ ಆಗಿದ್ದಾನೆ. ರಣರಂಗದಲ್ಲಿ ಆತನು ಇಂದ್ರನ ಐರಾವತದ ದಂತವನ್ನು ಮುರಿದಿದ್ದಾನೆ. ಸಾವಿರಾರು ಜನರನ್ನು ಆತನು ಭಕ್ಷಿಸಲು ಪ್ರಾರಂಭಿಸಿದಾಗ ಭಯಗೊಂಡ ಪ್ರಜೆಗಳು ಇಂದ್ರನಿಗೆ ಮೊರೆಹೋದರು. ಇಂದ್ರನು ವಜ್ರಪ್ರಹಾರವನ್ನು ಮಾಡಿದರೂ, ಪ್ರಜೆಗಳಿಗೆ ಇನ್ನೂ ಅಧಿಕ ತಾಪವನ್ನು ಕೊಡಲಾರಂಭಿಸಿದನು. ಇಂದ್ರನನ್ನೂ ಹತಬಲನನ್ನಾಗಿ ಮಾಡಿದನು. ಆಗ ಇಂದನು, ದೇವದಾನವರ ಸಮೇತ ಬ್ರಹ್ಮದೇವನ ಬಳಿಗೆ ಹೋದನು. ಕುಂಭಕರ್ಣನ ನೀಚತ್ವ, ಆತನು ನಡೆಯಿಸಿದ ಪ್ರಜೆಗಳ ಸ್ವಾಹಾಕಾರ, ಪರಸ್ತ್ರೀಯರ ಅಪಹರಣ, ಇವೆಲ್ಲ ಸಂಗತಿಗಳನ್ನು ವಿವರಿಸಿದನು. ಇದೇ ರೀತಿ ಮುಂದುವರೆದರೆ ಪ್ರಪಂಚವೇ