ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಜೀವಿಸಿರುವ ಆಸೆ ಇಲ್ಲ, ಎಲೈ ರಾಕ್ಷಸನೇ, ನಿನ್ನ ಎದುರೇ ನಾನು ಅಗ್ನಿಪ್ರವೇಶ ಮಾಡುತ್ತೇನೆ."

            ಯಸ್ಮಾತ್ತು ಘರ್ಷಿತಾ ಚಾಹಂ ತ್ವಯಾ ಪಾಪತ್ಮನಾ ವನೇ ‖೩೧‖
            ತಸ್ಮಾತ್ತವ ವಧಾರ್ಥಂ ಹಿ ಸಮುತ್ಪತ್ಸ್ಯೇ ಹ್ಯಹಂ ಪುನಃ |
            ನ ಹಿ ಶಕ್ಯಂ ಸ್ತ್ರಿಯಾ ಹಂತುಂ ಪುರುಷಃ ಪಾಪನಿಶ್ಚಯಃ ‖೩೨‖
            ಶಾಪೇ ತ್ವಯಿ ಮಯೋತ್ಸೃಷ್ಟೇ ತಪಸಶ್ಚ ವ್ಯಯೋ ಭವೇತ್ |
            ಯದಿ ತ್ವಸ್ತಿ ಮಯಾ ಕಿಂಚಿತ್ಕೃತಂ ದತ್ತಂ ಹುತಂ ತಥಾ ‖೩೩‖
            ತಸ್ಮಾತ್ತ್ವನಯೋನಿಜಾ ಸಾಧ್ವೀ ಭವೇಯಂ ಧರ್ಮಿಣಃ ಸುತಾ ‖೩೪‖


"ದುರಾತ್ಮನಾದ ನೀನು ಕಾಡಿನಲ್ಲಿ ನನ್ನನ್ನು ಎಳೆದಾಡಿದ್ದೀಯಾ! ನಿನ್ನ ವಧೆಗಾಗಿ ನಾನು ಈ ಭೂಮಿಯಲ್ಲಿ ಮರಳಿ ಜನ್ಮತಾಳುವೆ. ಪಾಪಾತ್ಮ ಪುರುಷನ ವಧೆಯು ನನ್ನಂತಹ ಸ್ತ್ರೀಯಿಂದಾಗದು. ನಾನು ನಿನಗೆ ಶಾಪ ಕೊಟ್ಟರೆ ನನ್ನ ತಪಸ್ಸು ಕ್ಷೀಣಿಸುವದು. ಈವರೆಗೆ ನಾನು ತಪಸ್ಸನ್ನಾಚರಿಸಿದ್ದರೆ, ದಾನ, ಹವನ ಕರ್ಮಗಳನ್ನು ಆಚರಿಸಿದ್ದರೆ, ಆ ಪುಣ್ಯಪ್ರಭಾವದಿಂದ ನಾನು ಒಬ್ಬ ಧರ್ಮನಿಷ್ಠನ 'ಅಯೋನಿಜಾತ' ಸಾಧುಕನ್ಯೆಯಾಗುವೆ."
ಹೀಗೆ ಉಚ್ಚರಿಸಿ ಅವಳು ಪ್ರಜ್ವಲಿತ ಅಗ್ನಿಯಲ್ಲಿ ಧುಮುಕಿದಳು. ಆಗ ಆಕಾಶದಿಂದ ಪುಷ್ಪವೃಷ್ಟಿಯಯಿತು.

ಯುದ್ಧಕಾಂಡ/೬೦

ರಾಮನ ಬಾಣಗಳ ಭೀತಿಯಿಂದ ಗ್ರಸ್ತನಾದ ರಾವಣನಿಗೆ, ಅಗ್ನಿಪ್ರವೇಶ ಮಾಡುವಾಗ ವೇದವತಿಯು ತೆಗೆದ ಉದ್ಗಾರಗಳ ಸ್ಮರಣೆಯಾಯಿತು.

            ಶಪ್ತೊsಹಂ ವೇದವತ್ಯಾ ಚ ಯಥಾ ಸಾ ಘರ್ಷಿತಾ ಪುರಾ ‖೧೦‖
            ಸೇಯಂ ಸೀತಾ ಮಹಾಭಾಗಾ ಜಾತಾ ಜನಕನಂದಿನೀ ‖೧೧‖


"ಹಿಂದೆ ವೇದವತಿಯನ್ನು ಬಲಾತ್ಕರಿಸಿದ್ದರಿಂದ ಅವಳು ಶಾಪವನ್ನು ಕೊಟ್ಟಿದ್ದಾಳೆ. ಆ ವೇದವತಿಯೇ ಮಹಾಭಾಗ್ಯವತಿಯಾದ, ಜನಕಕನ್ಯೆಯಾದ ಸೀತೆಯಾಗಿದ್ದಾಳೆ."
ಉತ್ತರಕಾಂಡದಲ್ಲಿಯ ವೇದವತಿಯ ಉದ್ಗಾರಗಳು ಶಾಪದಂತಿದ್ದರೂ ಸಂಪಾದಿಸಿದ ತಪಸ್ಸಿನ ಫಲವು ವ್ಯಯವಾಗಬಾರದೆಂದು ಅವಳು ಶಾಪ