ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಆ ಪತಿವ್ರತೆಯರು ಈ ರೀತಿ ನುಡಿದಾಗ ಸ್ವರ್ಗದಲ್ಲಿ ದುಂದುಭಿಗಳು ಮೊಳಗಿದವು, ಪುಷ್ಪವೃಷ್ಟಿಯಾಯಿತು. ಪತಿವ್ರತೆಯರ ಶಾಪದಿಂದ ರಾವಣನ ತೇಜಸ್ಸು, ಪ್ರಭೆ ಇಲ್ಲದಾಗಿ ಕಳಾಹೀನನಾದನು. ಆ ಸ್ತ್ರೀಯರೊಡನೆ ಇರುವದು ಆತನಿಗೆ ಸರಿ ಎನಿಸಲಿಲ್ಲ.

ಯುದ್ಧಕಾಂಡ/೧೧೧

ರಾವಣನ ವಧೆಯನಂತರ ಮಂಡೋದರಿಯ ಶೋಕಾಲಾಪದಲ್ಲಿ ಈ ಶಾಪದ ಉಲ್ಲೇಖವಿದೆ.

            ಯಾಸ್ತ್ವಯಾ ವಿಧವಾ ರಾಜನ್ಕೃತಾ ನೈಕಾಃ ಕುಲಸ್ತ್ರಿಯಃ ‖೬೪‖
            ಪ್ರತಿವ್ರತಾಧರ್ಮರತಾ ಗುರುಶುಶ್ರೂಷಣೇ ರತಾಃ |
            ತಾಭಿಃ ಶೋಕಾಭಿತಪ್ತಾಭಿಃ ಶಪ್ತಃ ಪರವಶಂ ಗತಃ ‖೬೫‖
            ತ್ವಯಾ ವಿಪ್ರಕೃತಾಭಿಶ್ಚ ತದಾ ತಪ್ತಸ್ತದಾಗತಮ್ |
            ಪ್ರವಾದಃ ಸತ್ಯಮೇವಾಯಂ ತ್ವಾಂ ಪ್ರತಿ ಪ್ರಾಯಶೋ ನೃಪಃ ‖೬೬‖


"ಹೇ ರಾಜಶ್ರೇಷ್ಠನೇ, ಯಾವ ಅನೇಕ ಕುಲಸ್ತ್ರೀಯರನ್ನು ನೀನು ವಿಧವೆಯರನ್ನಾಗಿ ಮಾಡಿರುವೆಯೋ ಅವರೆಲ್ಲರೂ ಪತಿವ್ರತೆಯರು, ಧರ್ಮತತ್ಪರರು. ಗುರುಸೇವೆಯಲ್ಲಿ ಸತತ ದಕ್ಷರಾಗಿದ್ದರು. ಶೋಕಾವೇಗದಿಂದ ಆ ಸ್ತ್ರೀಯರು ನಿನ್ನನ್ನು ಶಪಿಸಿದ ಕಾರಣ ನೀನು ಶತ್ರುವಿನ ಅಧೀನನಾದೆ. ನಿನ್ನಿಂದ ಕಾಡಿಸಲ್ಪಟ್ಟ ಪತಿವ್ರತಾಸ್ತ್ರೀಯರು ಅಂದು ಕೊಟ್ಟ ಶಾಪದ ಫಲವು ಸಾಂಪ್ರತು ದೊರಕಿದೆ." 'ಪತಿವ್ರತೆಯರ ಕಣ್ಣೀರು ಅನರ್ಥಕ್ಕಳೆಯದೇ ಭೂಮಿಗೆ ಬೀಳುವುದಿಲ್ಲ' ಎಂಬ ನಾಣ್ಣುಡಿಯು ರಾವಣನ ಸಂದರ್ಭದಲ್ಲಿ ಸತ್ಯವಾಗಿದೆ.

೪೬. ನಲಕೂಬರ < ರಾವಣ

ಉತ್ತರಕಾಂಡ ೨೬

ನಲಕೂಬರನು ರಾವಣನಿಗೆ ಕೊಟ್ಟ ಶಾಪದ ವೃತ್ತಾಂತವನ್ನು ಅಗಸ್ತ್ಯ ಋಷಿಯು ರಾಮನಿಗೆ ವಿವರಿಸುತ್ತಿದ್ದಾನೆ:
ಒಮ್ಮೆ ರಾವಣನು ಕೈಲಾಸಪರ್ವತದಲ್ಲಿ ವಿಹರಿಸುತ್ತಿದ್ದಾಗ, ದಿವ್ಯಭೂಷಣಗಳಿಂದ ಅಲಂಕೃತಳಾದ, ಚಂದ್ರಮುಖಿಯಾದ ರಂಭೆಯು ಆತನ ಕಣ್ಣಿಗೆ ಬಿದ್ದಳು. ಲಾವಣ್ಯವತಿಯಾದ ಅವಳು ಚಂದನದ ಲೇಪನವನ್ನು ಹಚ್ಚಿಕೊಂಡಿದ್ದಳು. ಕಲ್ಪವೃಕ್ಷದ