ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


"ಎಲೈ ಕಲ್ಯಾಣೀ, ನಿನ್ನ ಇಚ್ಛೆಯಿರದಾಗ ಅವನು ನಿನ್ನನ್ನು ಬಲಾತ್ಕಾರದಿಂದ ಭೋಗಿಸಿದ್ದಾನೆ; ಇನ್ನು ಮುಂದೆ ಪುನಃ ಎಂದೂ ಸಮ್ಮತಿ ಇಲ್ಲದ ತರುಣಿಯೊಡನೆ ಆತನು ಸಮಾಗಮ ನಡೆಸಲಾರನು; ಕಾಮಪೀಡಿತನಾಗಿ ಇವನು ಇಚ್ಛೆ ಇಲ್ಲದ ಸ್ತ್ರೀಯ ಮೇಲೆ ಬಲಾತ್ಕಾರ ನಡೆಯಿಸಿದರೆ ಈತನ ತಲೆ ಸಿಡಿದು ಏಳು ಹೋಳಾಗುವುದು!" ಎಂದು ನಲಕೂಬರನು ರಾವಣನಿಗೆ ಶಾಪವನ್ನು ಕೊಟ್ಟನು.
"ನಾನು ವೈಶ್ರವಣಪುತ್ರನಾದ ನಲಕೂಬರನೊಡನೆ ಕ್ರೀಡೆಯ ಸಂಕಲ್ಪವನ್ನು ಮಾಡಿರುವದರಿಂದ ಇಂದು ನಾನು ಆತನ ಭಾರ್ಯೆಯಾಗಿದ್ದೇನೆ. ಆದ್ದರಿಂದ ನಾನು ನಿಮ್ಮ ಸೊಸೆ." ರಂಭೆಯ ನುಡಿಯ ಈ ಉಲ್ಲೇಖವು ಶ್ರೀರಾಮಕೋಶ, ಖಂಡ ೧, ಭಾಗ ೧, ಪೃಷ್ಟಸಂಖ್ಯೆ ೬೮ರಲ್ಲಿದೆ. 'ನಾನು ಇಂದು ಅವನ ಭಾರ್ಯೆ' ಎಂಬ ಉಲ್ಲೇಖವನ್ನು ವಾಲ್ಮೀಕಿಯು ಮಾಡಿಲ್ಲ.
ಧಮ್ತಸ್ತೇ ಸುತಸ್ಯಾಹಂ ಭಾರ್ಯಾ... ನಾನು ಧರ್ಮದಿಂದ ನಿಮ್ಮ ಮಗನ ಭಾರ್ಯೆಯಾಗಿದ್ದೇನೆ.

            ಯಥಾ ತಸ್ಯ ಹಿ ನಾನ್ಯಸ್ಯ ಭಾವೋ ಮಾಂ ಪ್ರತಿನಿಷ್ಠತಿ ‖


ಅವನನ್ನು ಪ್ರೀತಿಸುವಂತೆ ನಾನು ಬೇರೆ ಯಾರನ್ನೂ ಪ್ರೀತಿಸುವದಿಲ್ಲ. ಇದು ಸತ್ಯವಾದದ್ದು. ಶ್ಲೋಕದ ಈ ಚರಣಗಳನ್ನು ಗಮನಿಸಿದರೆ ಶ್ರೀರಾಮ ಕೋಶಕಾರರು ಯೋಜಿಸಿದ 'ಇಂದು' ಎಂಬ ಶಬ್ದದ ಬಳಕೆಯು ಸೂಕ್ತವೆನಿಸದು.

೪೭. ಮುನಿಗಳು < ಹನುಮಾನ

ಉತ್ತರಕಾಂಡ/೩೬

ಹನುಮಂತನ ಗತಿ, ಮಂತಿ ಮತ್ತು ಬಲಕ್ಕೆ ಸರಿಸಮಾನರಾದವರು ಯಾರೊಬ್ಬರೂ ಇರಲಿಲ್ಲ. ಹೀಗಿದ್ದರೂ, ತನ್ನ ಬಲದ ಅರಿವು ಆತನಿಗೆ ಇರಬಾರದೆಂದು ಮುನಿಗಳು ಶಾಪವನ್ನು ಕೊಟ್ಟಿದ್ದಾರೆ. ಈ ಕಥೆಯನ್ನು ಅಗಸ್ತ್ಯ ಋಷಿಯು ರಾಮನಿಗೆ ಹೇಳುತ್ತಾನೆ.
ವರದಿಂದ ದೊರೆತ ಬಲದಿಂದ ಹನುಮಂತನು ಅಪಾರ, ಅಗಾಧ ಸಮುದ್ರದಂತಿದ್ದಾನೆ. ಆತನ ವೇಗವು ದಿನದಿನಕ್ಕೆ ವರ್ಧಿಸುತ್ತಿದೆ. ಮಹರ್ಷಿಗಳ ಆಶ್ರಮದಲ್ಲಿ ನಿಸ್ಸಂಕೋಚವಾಗಿ ಸಂಚರಿಸಿ ಈತನು ಯಜ್ಞಪಾತ್ರಗಳನ್ನು, ಅಗ್ನಿ,