ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೭೩


ಶತ್ರು ಸಮೂಹವನ್ನು ನಾಶಗೊಳಿಸುವ ಆ ವಿಷ್ಣುವಿಗೆ ಭೃಗುವು ಶಾಪ ಕೊಟ್ಟನು: "ಎಲೈ ಜನಾರ್ಧನನೇ, ಅವಧ್ಯಳಾದ ನನ್ನ ಪತ್ನಿಯನ್ನು ನೀನು ಕೋಪಾ ವೇಗದಲ್ಲಿ ವಧಿಸಿರುವೆ: ಅದಕ್ಕಾಗಿ ನೀನು ಮನುಷ್ಯಲೋಕದಲ್ಲಿ ಜನ್ಮತಾಳುವೆ; ಅಲ್ಲಿ ಅನೇಕ ವರುಷಗಳ ಕಾಲ ಪತ್ನಿಯ ವಿಯೋಗದ ದುಃಖವು ಪ್ರಾಪ್ತ ವಾಗುವುದು."
ಶಾಪವನ್ನು ಕೊಟ್ಟ ನಂತರ ಭೃಗುವು ನೊಂದುಕೊಂಡನು. ಆತನು ವಿಷ್ಣುವನ್ನು ಪೂಜಿಸಿ ಸಂತೋಷಿಸಿದನು. ಭಕ್ತವತ್ಸಲನಾದ ವಿಷ್ಣುವು, ಆಗ "ಲೋಕಕಲ್ಯಾಣಕ್ಕಾಗಿ ಈ ಶಾಪವನ್ನು ಅಂಗೀಕರಿಸಲೇಬೇಕು" ಎಂದನು. ದುರ್ವಾಸನು ರಾಜನಿಗೆ "ಸಾಕ್ಷಾತ್ ವಿಷ್ಣುವು ನಿನ್ನ ಪುತ್ರನಾಗಿ 'ರಾಮ'ನೆಂದು ಹುಟ್ಟಿ ಬಂದಿದ್ದಾನೆ. ಆತನು ಮೂರೂ ಲೋಕದಲ್ಲಿ ಖ್ಯಾತಿಗೊಳ್ಳುವನು. ಭೃಗುವಿನ ಶಾಪದ ವಿಪುಲ ಫಲವು ಆತನಿಗೆ ಲಭಿಸುವದು. ಬಹುಕಲದವರೆಗೆ ಅಯೋಧ್ಯಾಪತಿಯಾಗಿ ಬಾಳುವನು; ಹನ್ನೊಂದು ಸಾವಿರ ವರ್ಷಗಳ ಕಾಲ ರಾಜ್ಯವನ್ನಾಳಿ ಆತನು ಬ್ರಹ್ಮಲೋಕಕ್ಕೆ ತೆರಳುವನು. ಅಶ್ಚಮೇಧ ಯಜ್ಞವನ್ನು ಅನೇಕಾವರ್ತಿ ಆಚರಿಸಿ ರಾಜವಂಶದ ಉತ್ಥಾಪನೆಯನ್ನು ಮಾಡುವನು."

            ಅವಧ್ಯಾಂ ಸ್ತ್ರೀತ್ವಾದೃಷಿಪತ್ನೀತ್ವಾಚ್ಚ ವಧಾನರ್ಹಾಮ್ |


೪೯. ಇಬ್ಬರು ಬ್ರಾಹ್ಮಣರು < ನೃಗರಾಜ

ಉತ್ತರಕಾಂಡ/೫೩

ಸೀತೆಯನ್ನು ತ್ಯಜಿಸಬೇಕೆಂದು ನಿಶ್ಚಯಿಸಿದ ನಂತರ ರಾಮನು, ಅವಳನ್ನು ವಾಲ್ಮೀಕಿಯ ಆಶ್ರಮದ ಹತ್ತಿರ ಬಿಟ್ಟುಬರುವ ದುಸ್ತರ ಕಾರ್ಯವನ್ನು ಲಕ್ಷ್ಮಣನಿಗೆ ವಹಿಸಿದನು. ಸೀತೆಯನ್ನು ಕಳುಹಿಸಿ ಮರಳಿದ ಲಕ್ಷ್ಮಣನು ರಾಮನಿಗೆ ಭೇಟಿ ಯಾದಾಗ ಆತನು ಅತ್ಯಂತ ಖಿನ್ನನಾಗಿದ್ದನ್ನು ಕಂಡನು. ಕಳೆದ ನಾಲ್ಕು ದಿನಗಳಲ್ಲಿ ಅವನು ಯಾವ ಪ್ರಜಾಕಾರ್ಯವನ್ನೂ ಮಾಡಿರಲಿಲ್ಲ. ಈ ಸಂಗತಿಯು ರಾಮನಿಗೆ ಕಾಡುತ್ತಿತ್ತು. ಲಕ್ಷ್ಮಣನು ಆತನಿಗೆ ಸಮಾಧಾನಪಡಿಸಿದನು. ಆಗ, ಪುರಜನರ ಕಾರ್ಯಗಳನ್ನು ನೆರವೇರಿಸದೆ ಇರುವ ರಾಜನ ಗತಿ ಏನಾಗುತ್ತದೆ ಎಂಬುದರ ಬಗ್ಗೆ ರಾಮನು ಲಕ್ಷ್ಮಣನಿಗೆ ನೃಗರಾಜನ ಕಥೆಯನ್ನು ಹೇಳಿದನು.
ಪೂರ್ವದಲ್ಲಿ ಮಹಾಯಶಸ್ವಿಯಾದ, ಬ್ರಾಹ್ಮಣಪ್ರಿಯನಾದ, ಸತ್ಯವಚನಿಯಾದ, ಶಬ್ದಾರ್ಥದಿಂದ ಹಾಗೂ ನಿಜಾರ್ಥದಿಂದ 'ಭೂಪಾಲ'ನೆಂದೆನಿಸಿಕೊಳ್ಳುವ,