ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೮೫


ಬ್ರಾಹ್ಮಣನು ಬಂದನು. ನೂರು ವರ್ಷಗಳಿಂದ ಹಸಿದಿದ್ದ ಆ ಬ್ರಾಹ್ಮಣನಿಗೆ
ಊಟ ಮಾಡುವದಿತ್ತು. ಬ್ರಹ್ಮದತ್ತ ರಾಜನು ಅರ್ಘ್ಯಪಾದ್ಯಾದಿಗಳಿಂದ ಆತನನ್ನು
ಸ್ವಾಗತಿಸಿ ಊಟಕ್ಕೆ ಏಳುವಂತೆ ವಿನಂತಿಸಿದನು. ಆದರೆ
ಮಾಂಸಮತ್ಸ್ಯಾ ಭವತ್ತತ್ರ ಆಹಾರೇ ತು ಮಹಾತ್ಮನಃ |
ಅಥ ಕ್ರುದ್ಧೇನ ಮುನಿನಾ ಶಾಪೋ ದತ್ತೋsಸ್ಯ ದಾರೂಣಃ ‖೫೯‖
ಗೃಧ್ರಸ್ತ್ವಂ ಭವ ವೈ ರಾಜನ್ಮಾಮೈನಂ ಹ್ಮಥ ಸೋsಬ್ರವೀತ್ |
ಪ್ರಸಾದಂ ಕುರು ಧರ್ಮಜ್ಞ ಆಜ್ಞಾನಾನ್ಮೇ ಮಹಾವ್ರತ ‖೬೦‖
ಶಾಪಸ್ಯಾಂತಂ ಕೃತಂ ಮುತ್ವಾರಾಚಾನಂ ಮುನಿರಬ್ರವೀತ್ ‖೬೧‖
ಉತ್ಪಸ್ಯತಿ ಕುಲೇ ರಾಜ್ಞಾಂ ರಾಮೋ ನಾಮ ಮಹಾಯಶಃ |
ಇಕ್ಷ್ವಾಕೂಣಾಂ ಮಹಾಭಾಗೋ ರಾಜಾ ರಾಜೀವಲೋಚನಃ ‖೬೨‖
ತೇನ ಸ್ಪೃಷ್ಟೋ ವಿಪಾಪಸ್ತ್ವಂ ಭವಿತಾ ನರಪುಂಗವ ‖೬೩‖

ಅಂದು ಆ ಮಹಾತ್ಮನ ಭೋಜನಕ್ಕಾಗಿ ಮಾಂಸವು ಸಿದ್ಧವಾಗಿತ್ತು. ಆಗ
ಮುನಿಯು ರೇಗಿ “ರಾಜನೇ, ನೀನು ರಣಹದ್ದಾಗು” ಎಂದು ಶಪಿಸಿದನು. ಈ
ರೀತಿ ಮಾಡಬಾರದೆಂದು ಕೇಳಿಕೊಂಡು ಆ ರಾಜನು ಮುನಿಗೆ ಈ ರೀತಿ ಎಂದನು:
“ಹೇ ಧರ್ಮಜ್ಞನೇ, ಹೇ ಮಹಾತಪಸ್ವಿಯೇ, ಅಜ್ಞಾನದಿಂದ ನಡೆದ ಅಪರಾಧವನ್ನು
ಕ್ಷಮಿಸು; ಹೇ ಮುನಿವರ್ಯ, ನನಗೆ ಬಂದ ಶಾಪವನ್ನು ನಿವಾರಿಸು.”
ಈ ಅಪರಾಧವು ಅಜ್ಞಾನದಿಂದಾಗಿದೆ ಎಂದು ತಿಳಿದಾಗ ಆ ಮುನಿಯು
ರಾಜನಿಗೆ ಇಂತೆಂದನು: “ಇಕ್ಷ್ವಾಕುರಾಜವಂಶದಲ್ಲಿ ಮಹಾತಪಸ್ವಿ, ಮಹಾಭಾಗ್ಯ
ಶಾಲಿಯಾದ, ಕಮಲನಯನನಾದ 'ರಾಮ' ಎಂಬ ರಾಜನು ಜನಿಸುವನು. ಹೇ
ಪುರುಷ ಶ್ರೇಷ್ಠನೇ, ಆತನ ಸ್ಪರ್ಶದಿಂದ ನೀನು ಶಾಪಮುಕ್ತನಾಗುವೆ.”
ರಾಮನು ರಣಹದ್ದನ್ನು ಸ್ಪರ್ಶಿಸುತ್ತಲೇಆ ದೇಹವು ಇಲ್ಲದಾಗಿ ಚಂದನ ಲೇಪಿತ
ಮಾನವದೇಹವು ಅದಕ್ಕೆ ದೊರೆಯಿತು. “ನೀನು ನನ್ನ ಶಾಪವನ್ನು ನಿವಾರಿಸಿದ್ದ
ರಿಂದ ಘೋರ ನರಕದಿಂದ ನಾನು ಪಾರಾಗಿದ್ದೇನೆ” ಎಂದು ಆತನು
ಹೇಳಿದನು.
ಇದು ಯಾಚಿತ ಉಃಶಾಪವಾಗಿದೆ.
ಈ ಪ್ರಕ್ಷಿಪ್ತವಾದ ಸ್ವರ್ಗವು ಗೋರಖಪುರದ ಪ್ರತಿಯಲ್ಲಿಲ್ಲ.