ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೮೭


“ರಾಜನೆ, ಇಂಥ ಭೋಜನವನ್ನು ನನಗೆ ಕೊಡಲು ಬಯಸಿದೆ; ಅದಕ್ಕಾಗಿ
ಖಚಿತವಾಗಿ ಇದೇ ನಿನ್ನ ಭೋಜನವಾಗಿ ಪ್ರಾಪ್ತವಾಗುತ್ತದೆ.”
ವಸಿಷ್ಠನ ಈ ಶಾಪವನ್ನು ಕೇಳಿ, ಆತನಿಗೆ ಪ್ರತಿಶಾಪವನ್ನು ಕೊಡಬಯಸಿದ
ಸೌದಾಸ ರಾಜನನ್ನು, ಅವನ ಪತ್ನಿಯು ಸಮಾಧಾನ ಹೇಳಿ ತಡೆದಳು.
ಸೌದಾಸ < ವಸಿಷ್ಠ ಶಾಪ ಕ್ರ. ೫೮ ನೋಡಿರಿ.

೫೮. ಸೌದಾಸ < ವಸಿಷ್ಠ

ಉತ್ತರಕಾಂಡ/೬೫

ವಸಿಷ್ಠನು ಸೌದಾಸರಾಜನಿಗೆ ಕೊಟ್ಟ ಶಾಪವನ್ನು ಈ ಮೊದಲು
ಹೇಳಿಯಾಗಿದೆ.
ಸೌದಾಸರಾಜನು ವಸಿಷ್ಠನ ಶಾಪವನ್ನು ಅರಿತು ಅತ್ಯಂತ ಕ್ರೋಧಾವಿಷ್ಠ
ನಾದನು. ವಸಿಷ್ಠನೇ ಮಾಂಸಹಾರವನ್ನು ಬೇಡಿದ್ದನೆಂದು ರಾಜನ ತಿಳುವಳಿಕೆಯಿತ್ತು.
ರಾಕ್ಷಸನು ವಸಿಷ್ಠನ ರೂಪವನ್ನು ಧರಿಸಿದ ಸಂಗತಿಯಾಗಲೀ ನಂತರ ಅದೇ
ರಾಕ್ಷಸನು ಅಡಿಗೆಯವನಾಗಿ ನರಮಾಂಸವನ್ನು ಸಿದ್ಧಗೊಳಿಸಿದ ಸಂಗತಿಯಾಗಲೀ
ನಂತರ ಅದೇ ರಾಕ್ಷಸನು ಅಡಿಗೆಯವನಾಗಿ ನರಮಾಂಸವನ್ನು ಸಿದ್ಧಗೊಳಿಸಿದ
ಸಂಗತಿಯಾಗಲೀ ಸೌದಾಸನಿಗೆ ಗೊತ್ತಿರಲಿಲ್ಲವಾದ್ದರಿಂದ, ತನ್ನ ಅಪರಾಧವೇ
ನೆಂಬುದೇ ಅವನಿಗೆ ಗೊತ್ತಿರಲಿಲ್ಲ. ವಸಿಷ್ಠನು ವಿನಾಕಾರಣವಾಗಿ ಶಪಿಸಿದ್ದರಿಂದ,
ಆತನಿಗೆ ಪ್ರತಿಶಾಪವನ್ನು ಕೊಡಲು ರಾಜನು ಕೈಯಲ್ಲಿ ಉದಕವನ್ನು ಹಿಡಿದು
ಸಿದ್ದನಾದನು; ಆದರೆ ರಾಣಿಯಾದ ಮದಯಂತಿಯು ರಾಜನಿಗೆ ಅದನ್ನು
ಮಾಡಗೊಡಲಿಲ್ಲ. ಅವಳು ರಾಜನಿಗೆ ತಿಳಿಸಿ ಈ ರೀತಿ ಎಂದಳು-
ರಾಜನ್ಪ್ರಭುರ್ಯತೋಸ್ಮಾಕಂ ವಸಿಷ್ಠೋ ಭಗವಾನೃಪಿಃ |
ಪ್ರತಿಶಪ್ತುಂ ನ ಶಕ್ತಸ್ತ್ವಂ ದೇವತುಲ್ಯಂ ಪುರೋಧಸಮ್ ‖೩೦‖

“ಭಗವಾನ್ ವಸಿಷ್ಠ ಋಷಿಗಳು ನಮ್ಮ ಪ್ರಭುಗಳಿದ್ದಾರೆ. ಆ ದೇವ
ಸಮಾನರಾದ ಪುರೋಹಿತರನ್ನು ಶಪಿಸುವುದು ನಿನಗೆ ತರವಲ್ಲ.” ಈ ರೀತಿಯ
ಪತ್ನಿಯ ಉಪದೇಶವನ್ನು ಆತನು ಮನ್ನಿಸಿದನು.
ಕೈಯಲ್ಲಿದ್ದ ತೇಜಸ್ಸು ಮತ್ತು ಬಲಪೂರಿತ ಉದಕವನ್ನು ತನ್ನ ಪಾದಗಳ
ಮೇಲೆ ಸುರಿದುಕೊಂಡನು. ಕೂಡಲೇ ಆತನ ಪಾದಗಳೆರಡೂ ಚಿತ್ರ ವಿಚಿತ್ರ