ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಬಣ್ಣದವಾದವು. ಸೌದಾಸರಾಜನು 'ಕಲ್ಮಾಷಪಾದ'ನಾದನು. ಜನರು ಆತನನ್ನು
ಹಾಗೆಂದು ಕರೆಯಹತ್ತಿದರು.
ರಾಕ್ಷಸನ ಮಾಯಾವೀ ರೂಪದ ಬಗ್ಗೆ ಹಾಗೂ ಆತನು ಸಿದ್ಧಗೊಳಿಸಿದ
ಭೋಜನದ ವಿಷಯವನ್ನು ರಾಠೆನು ವಸಿಷ್ಠನಿಗೆ ತಿಳಿಸಿದನು. ರಾಜನು 'ನಿರಪರಾಧಿ'
ಎಂದು ಅರಿತು ವಸಿಷ್ಠನು ಇಂತೆಂದನು:
ಮಯಾ ರೋಷರೀತೇನ ಯದಿದಂ ವ್ಯಾಹೃತಂ ವಚಃ |
ನೈತಚ್ಛಕ್ಯಂ ವೃಥಾ ಕರ್ತುಂ ಪ್ರದಾಸ್ಯಾಮಿ ಚ ತೇ ವರಮ್ ‖೨೫‖
ಕಾಲೋ ದ್ವಾದಶವರ್ಷಾಣಿ ಶಾಪಸ್ಯಾಂತೋ ಭವಿಷ್ಯತಿ |
ಮತ್ಪ್ರಸಾದಚ್ಚ ರಾಜೇಂದ್ರ ಅತೀತಂ ನ ಸ್ಮರಿಷ್ಯಸಿ ‖೩೬‖

“ನಾನು ಕೋಪಗೊಂಡು ಆಡಿದ ಮಾತುಗಳು ವ್ಯರ್ಥವಾಗುವುದು ಅಸಾಧ್ಯ;
ಆದ್ದರಿಂದ ನಾನು ನಿನಗೆ ವರವನ್ನು ಕೊಡುತ್ತೇನೆ. ಹನ್ನೆರಡು ವರ್ಷಗಳ
ನಂತರ ಈ ಶಾಪವು ಕೊನೆಗೊಳ್ಳುವುದು; ಹೇ ರಾಜೇಂದ್ರನೇ, ನನ್ನ ಪ್ರಸಾದದಿಂದ
ನಿನಗೆ ಪೂರ್ವಸಂಗತಿಯ ಸ್ಮರಣೆ ಉಳಿಯಲಾರದು!”
ಸೌದಾಸನು ಪ್ರತ್ಯಕ್ಷದಲ್ಲಿ ಶಾಪವನ್ನು ನುಡಿಯಲಿಲ್ಲ. ವಸಿಷ್ಠನು ಕಲಾಷ
ಪಾದನಿಗೆ ಕೊಟ್ಟ ಮೇಲಿನ ವರವು ಉಃಶಾಪದಂತಿದೆ.

೫೯. ಭಾರ್ಗವ < ದಂಡ

ಉತ್ತರಕಾಂಡ/೮೧

ಅಗಸ್ತ್ಯಮುನಿಯ ದಂಡರಾಜನ ಶಾಪದ ವೃತ್ತಾಂತವನ್ನು ಹೇಳುತ್ತಿದ್ದಾನೆ:
ಚೈತ್ರಮಾಸದಲ್ಲಿ ಒಮ್ಮೆ ದಂಡರಾಜನು ರಮಣೀಯವಾದ ಭಾರ್ಗವಾ
ಶ್ರಮಕ್ಕೆ ಹೋಗಿದ್ದನು. ಅಲ್ಲಿ ಅತ್ಯಂತ ಲಾವಣ್ಯವತಿಯಾದ ಭಾರ್ಗವ ಕನ್ಯೆಯನ್ನು
ಕಂಡನು. ಅವಳನ್ನು ನೋಡಿದ ಕ್ಷಣವೇ ಮದನಬಾಣಗಳಿಂದ ಕಾಮಪೀಡಿತ
ನಾದನು. ರಾಜನು ಆಕೆಗೆ ಕುಶಲಪ್ರಶ್ನೆಗಳನ್ನು ಕೇಳಿ ತನ್ನ ವ್ಯಥೆಯನ್ನು ಪ್ರಕಟಿಸಿದನು.
ಆಕೆಯು ರಾಜನಿಗೆ ವಿನಯದಿಂದ ಈ ರೀತಿ ನುಡಿದಳು: “ಹೇ ರಾಜನೇ, ನಾನು
ಭಾರ್ಗವರ ಜ್ಯೇಷ್ಠೆ ಕನ್ಯೆ 'ಅರಜಾ'. ನೀವು ನನ್ನನ್ನು ಬಲಾತ್ಕರಿಸಬಾರದು. ನನ್ನ
ತಂದೆಯು ನಿಮ್ಮ ಗುರುವಾಗಿದ್ದು ನೀವು ಆತನ ಶಿಷ್ಯರೆಂಬುದನ್ನು ಮರೆಯ
ಬಾರದು! ಮಹಾತಪಸ್ವಿಯಾದ ನನ್ನ ತಂದೆಯು ರೇಗಿದರ ನಿಮಗೆ ಬಲು
ದುಃಖವುಂಟಾಗಬಹುದು. ನೀವು ನನ್ನನ್ನು ಬಯಸುತ್ತಿದ್ದರೆ, ಯೋಗ್ಯ ರೀತಿಯಲ್ಲಿ