ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೮೯


ನನ್ನ ತಂದೆಯ ಹತ್ತಿರ ಮದುವೆಯ ಪ್ರಸ್ತಾಪ ಮಾಡಿರಿ! ಬಹುಶಃ ಅವರು
ಅನುಮತಿಸಬಹುದು.” ಇದನ್ನು ಕೇಳಿಯೂ ಆ ಕಾಮಪರವಶ ಮದೋನ್ಮತ್ತ
ರಾಜನು ಆಕೆಗೆ “ನಿನಗಾಗಿ ನನ್ನ ಜೀವವು ಕಸಿವಿಸಿಗೊಳ್ಳುತ್ತಿದೆ; ಕಾಲಾಪಹರಣವು
ನನ್ನಿಂದ ಸಾಧ್ಯವಿಲ್ಲ; ನಿನ್ನನ್ನು ಪಡೆದನಂತರ, ನನ್ನ ವಧೆಯಾದರೂ ಪರಿವೆಯಿಲ್ಲ;
ಭೀಕರ ಪಾತಕ ತಗುಲಿದರೂ ಚಿಂತೆಯಿಲ್ಲ; ನೀನು ಕೂಡಲೇ ನನಗೆ ವಶಳಾಗು!
ನಾನು ಕಾಮವ್ಯಾಕುಲನಾಗಿದ್ದೇನೆ.” ಹೀಗೆಂದು ರಾಜನು ಆಕೆಯ ಇಚ್ಛೆಯ
ವಿರುದ್ದ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು, ಆಕೆಯು ಚಡಪಡಿಸಿ ಒದ್ದಾಡು
ತ್ತಿದ್ದರೂ ಅವಳನ್ನು ಯಥೇಚ್ಛವಾಗಿ ಭೋಗಿಸಿದನು; ನಂತರ ರಾಜನು ತನ್ನ
ನಗರಕ್ಕೆ ಹೊರಟುಹೋದನು. 'ಅರಜಾ' ಈಕೆಯ ಅತಿಖಿನ್ನಳಾಗಿ ತಂದೆಯ
ಬರುವಿಕೆಯನ್ನು ಕಾಯುತ್ತ ಆಶ್ರಮದ ಬಳಿ ಕುಳಿತುಕೊಂಡಳು (ಉತ್ತರ
ಕಾಂಡ/೮೦)
ಶೋಕಾಕುಲಳಾದ ಮಗಳನ್ನು ಕಂಡ ಕ್ಷಣವೇ ಆ ಮಹಾತೇಜಸ್ವಿಯಾದ
ಭಾರ್ಗವನಿಗೆ ನಡೆದ ಸಂಗತಿಯ ಅರ್ಥವಾಯಿತು. ಆತನು ಸಿಟ್ಟಿನಿಂದ
ಸಿಡಿಮಿಡಿಗೊಂಡನು. ತನ್ನ ಶಿಷ್ಯರಿಗೆ ಈ ರೀತಿ ನುಡಿದನು: (ಉತ್ತರಕಾಂಡ/
೮೧)
ಪಶ್ಯಧ್ವಂ ವಿಪರೀತಸ್ಯ ದಂಡಸ್ಯಾವಿದಿತಾತ್ಮನಃ |
ವಿಪತ್ತಿಂ ಘೋರಸಂಕಾಶಾಂ ಕ್ರುದ್ಧಾದಗ್ನಿಶೀಖಾಮಿವ ‖೪‖
ಕ್ಷಯೋಸ್ಯ ದುರ್ಮತೇಃ ಪ್ರಾಪ್ತಃ ಸಾನುಗಸ್ಯ ದುರಾತ್ಮನಃ |
ಯಃ ಪ್ರದೀಪ್ತಾಂ ಹಂತಾಶ್ಯ ಶಿಖಾಂ ವೈ ಸ್ಪ್ರಷ್ಟುಮರ್ಹತಿ ‖೫‖
ಯಸ್ಮಾತ್ಸ ಕೃತವಾನ್ಪಾಪದಮೀದೃಶಂ ಘೋರಸಂಹಿತಮ್ |
ತಸ್ಮಾತ್ಪ್ರಾಪ್ಸ್ಯತಿ ದುರ್ಮೇಧಾಃ ಫಲ ಪಾಪಸ್ಯ ಕರ್ಮಣಃ ‖೬‖
ಸಪ್ತರಾತ್ರೇಣ ರಾಜಾಸೌ ಸಪುತ್ರಬಲವಾಹನಃ |
ಪಾಪಕರ್ಮಸಮಾಚಾರೋ ವಧಂ ಪ್ರಾಪ್ಸ್ಯತಿ ದುರ್ಮತಿಃ ‖೭‖

“ತನ್ನ ಯೋಗ್ಯತೆಯನ್ನು ಅರಿತುಕೊಂಡಿರದ, ವಿಪರೀತನಾದ ದಂಡರಾಜನು
ನನ್ನ ಕೋಪದಿಂದ ಅಗ್ನಿಜ್ವಾಲೆಯಂತಹ ಭಯಂಕರವಾದ ಅನರ್ಥಕ್ಕೆ ತುತ್ತಾಗುವನು.
ಅದನ್ನು ನೀವು ಅವಲೋಕಿಸಿರಿ! ಈ ಅವಿವೇಕಿ ರಾಜನು ತನ್ನ ಅನುಯಾಯಿಗಳ
ಸಮೇತನಾಗಿ ನಾಶವಾಗುವ ಸಮಯವು ಸಮೀಪಿಸಿದೆ. ಧಗಧಗಿಸುವ ಅಗ್ನಿ
ಜ್ವಾಲೆಯ ಸಮಾಗಮವೇ ಈತನಿಗೆ ತಕ್ಕ ಶಾಸ್ತಿ. ಈತನಿಂದ ನಡೆದ ಘೋರ