ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಪಾಪಕ್ಕಾಗಿ ಪಾಪಕರ್ಮದ ಫಲವು ದುರ್ಬುದ್ದಿಯಾದ ರಾಜನಿಗೆ ಪ್ರಾಪ್ತವಾಗುವುದು. ಸ್ವಲ್ಪದರಲ್ಲಿ ಪಾತಕಿಯಾದ ಈ ದುಷ್ಟಬುದ್ದಿಯ ರಾಜನು, ಪುತ್ರ ಸೈನ್ಯ ವಾಹನಗಳ ಸಮೇತ ಏಳು ದಿನಗಳಲ್ಲಿ ವಧೆಯಾಗುವನು.” ಈ ಶಾಪವನ್ನು ನುಡಿದ ನಂತರ ಮುನಿಯು, ಆಶ್ರಮವಾಸಿಗಳಿಗೆ ಆ ರಾಜ್ಯದ ಸೀಮೆಯನ್ನು ಬಿಟ್ಟುಹೋಗಲು ಹೇಳಿದನು. ಏಳು ದಿವಸಗಳಲ್ಲಿ ದಂಡರಾಜನ ರಾಜ್ಯವು, ಸೇವಕರು, ಸೈನ್ಯವು, ವಾಹನಗಳು ಸುಟ್ಟುಬೂದಿ ಯಾದವು. ೬೦. ಭಾರ್ಗವ < ದಂಡಕಾರಣ್ಯ ಉತ್ತರಕಾಂಡ/೮೧ ದಂಡಕಾರಣ್ಯವು ಜನರಹಿತವಾಗಲು ಕಾರಣವಾವುದು? ಎಂದು ರಾಮನು ಪ್ರಶ್ನಿಸಿದಾಗ, ಅಗಸ್ಯನು ಈ ರೀತಿ ತಿಳಿಸುತ್ತಾನೆ. ಭಾರ್ಗವ < ದಂಡ ಶಾಪದ ಬಗ್ಗೆ ಈ ಮೊದಲು ಹೇಳಿಯಾಗಿದೆ. ಶಾಪಕ್ರಮಾಂಕ ೫೯. ಧರ್ಮಯುಕ್ತ ಕೃತಯುಗದಲ್ಲಿ ರಾಜನು ತದ್ವಿರುದ್ಧವಾಗಿ ವರ್ತಿಸಿದ್ದರಿಂದ ಆತನು ವಾಸವಿದ್ದ ಪ್ರದೇಶಕ್ಕೂ-ದಂಡಕಾರಣ್ಯಕ್ಕೂ ಭಾರ್ಗವನು ಶಾಪವನ್ನು ಕೊಟ್ಟನು: ಸಮಂತಾದ್ಯೋಜನಶತು ವಿಷಯಂ ಚಾಸ್ಯ ದುರ್ಮತೇಃ | ಧಕ್ಷ್ಯತೇ ಪಾಂಸುವರ್ಷಣ ಮಹತಾ ಪಾಕಶಾಸನಃ |೮|| ಸರ್ವಸತ್ವಾನಿ ಯಾನೀಹ ಸ್ಥಾವರಾಣಿ ಚರಾಣಿ ಚ | ಮಹತಾ ಪಾಂಸುವರ್ಷಣ ವಿಲಯಂ ಸರ್ವತೋಗಮನ್ ೯. ದಂಡಸ್ಯ ವಿಷಯೋ ಯಾವತ್ತಾವತ್ಸರ್ವಂ ಸಮುಚ್ಚಯಮ್ | ಪಾಂಸುವರ್ಷಮಿವಾಲಕ್ಷ್ಮಿ ಸಪ್ತರಾತ್ರು ಭವಿಷ್ಯತಿ ||೧೦|| “ದುರ್ಬುದ್ದಿಯಾದ ಈ ರಾಜನ ಪ್ರದೇಶದ ಸುತ್ತುಮುತ್ತಲಿನ ನೂರು ಯೋಜನಗಳವರೆಗೆ ಇಂದ್ರನು ಧೂಳಿಯ ವೃಷ್ಟಿಗರೆದು ಆ ಪ್ರದೇಶವನ್ನು ನಾಶಪಡಿಸುವನು. ಈ ಪ್ರದೇಶದಲ್ಲಿಯ ಚರಾಚರಪ್ರಾಣಿಗಳೆಲ್ಲವೂ ಪ್ರಚಂಡ ಧೂಳಿಯ ದೃಷ್ಟಿಯಿಂದ ಸರ್ವತೋಪರಿ ನಾಶಹೊಂದುವವು; ದಂಡರಾಜನ