ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಪವಾಣಿ ೧೯೧ ಸಮಸ್ತ ಪ್ರದೇಶವು ಧೂಳಿಯ ದೃಷ್ಟಿಯಿಂದ, ಧೂಳಿಯ ರಾಶಿರಾಶಿಗಳಲ್ಲಿ, ಏಳು ದಿನಗಳಲ್ಲಿ ಅಡಗಿಹೋಗುವುದು.” ೬೧. ದುರ್ವಾಸ < ಲಕ್ಷಣ ಉತ್ತರಕಾಂಡ/೧೦೫ ರಾಮನ ಅವತಾರಕಾರ್ಯವು ಮುಗಿಯುತ್ತ ಬಂದಿತ್ತು. ಆತನು ಈ ನಂತರ ಏನು ಮಾಡುವದಿದೆ? ಎಂಬ ಬಗ್ಗೆ ಮಹತ್ವದ ಸಂದೇಶವನ್ನು ಕೊಂಡು ಬ್ರಹ್ಮನ ಆಜ್ಞೆಯಂತೆ ಪ್ರತ್ಯಕ್ಷ ಕಾಲಪುರುಷನು ರಾಮನಿಗೆ ಭೇಟಿಯಾಗಲು ಬಂದಿದ್ದನು. ತಂದ ಸಂದೇಶವನ್ನು ರಾಮನು ಏಕಾಂತದಲ್ಲಿ ಕೇಳಿಕೊಳ್ಳಬೇಕೆಂದು ಕಾಲನು ಸ್ಪಷ್ಟವಾಗಿ ತಿಳಿಸಿದನು. ಆಗ ಅಲ್ಲಿದ್ದ ದ್ವಾರಪಾಲಕರನ್ನು ದೂರವಿರಿಸಿ ಅಲ್ಲಿ ಲಕ್ಷ್ಮಣನಿಗೆ ಕಾಲವು ನಿಲ್ಲಲು ರಾಮನು ಹೇಳಿದನು. ಯಾರನ್ನೂ ಒಳಗೆ ಬಿಡಕೂಡದೆಂದು ಅಪ್ಪಣೆ ಮಾಡಿದನು. ರಾಮ ಮತ್ತು ಕಾಲಪುರುಷ ಇವರಲ್ಲಿಯ ಸಂಭಾಷಣೆಯನ್ನು ಕೇಳಿಕೊಂಡವರಿಗೆ ಮೃತ್ಯು ದಂಡವನ್ನು ವಿಧಿಸುವದಾಗಿ ರಾಮನು ಕಾಲನಿಗೆ ಆಶ್ವಾಸನೆಯನ್ನಿತ್ತನು. - ಲಕ್ಷ್ಮಣನು ರಾಮನ ಆಜ್ಞೆಯನ್ನು ಬಹು ಎಚ್ಚರಿಕೆಯಿಂದ ಪಾಲಿಸುತ್ತಿದ್ದಾಗ, ದುರ್ವಾಸ ಋಷಿಯು ರಾಮನನ್ನು ಕಾಣಬೇಕೆಂದು ಬಂದನು. ಲಕ್ಷ್ಮಣನು ಆತನಿಗೆ ನಮಸ್ಕರಿಸಿ ಸ್ವಲ್ಪ ಸಮಯ ತಡೆಯಲು ಹೇಳಿದನು. ರಾಮನು ಮಹತ್ವದ ಕಾರ್ಯದಲ್ಲಿರುವುದರಿಂದ ಸ್ವಲ್ಪ ಸಮಯ ಕಾಯಬೇಕಾಗಬಹುದೆಂದು ವಿನಂತಿಸಿದನು. ಲಕ್ಷ್ಮಣನ ಈ ಮಾತುಗಳಿಂದ ದುರ್ವಾಸ ಋಷಿಯ ಕೋಪವು ನೆತ್ತಿಗೇರಿತು. ಕೆರಳಿದ ಕಣ್ಣುಗಳಿಂದ ಆತನು ಲಕ್ಷ್ಮಣನಿಗೆ ಇಂತೆಂದನು: ಆಸ್ಟಿನ್ಮಣೇ ಮಾ ಸೌಮಿತ್ತೇ ರಾಮಾಯ ಪ್ರತಿವೇದಯ | ಅಸ್ಮಿನ್ಮಣೇ ಮಾಂ ಸೌಮಿತ್ತೇ ನ ನಿವೇದಯಸೇ ಯದಿ | ವಿಷಯ ತ್ವಾಂ ಪುರಂ ಚೈವ ಶಪಿಷ್ಟೇ ರಾಘವಂ ತಥಾ ||೬| ಭರತಂ ಚೈವ ಸೌಮಿತ್ತೇ ಯುಷ್ಮಾಕಂ ಯಾ ಚ ಸಂತತಿಃ | ನ ಹಿ ಶಕ್ಷಾಮ್ಯಹಂ ಭೂಯೋ ಮನ್ಯುಂ ಧಾರಾಯಿತುಂ ಹೃದಿ 1೭|| “ಎಲೈ ಸುಮಿತ್ರಾ ನಂದನನೇ, ಈ ಕ್ಷಣ ನಾನು ಬಂದಿರುವೆನೆಂದು ರಾಮನಿಗೆ ತಿಳಿಸು! ನಾನು ಬಂದಿರುವದನ್ನು ರಾಮನು ಕೂಡಲೇ ಗಮನಿಸದಿದ್ದರೆ ನಿನಗೆ, ಅಯೋಧ್ಯಾ ನಗರಕ್ಕೆ ಈ ದೇಶಕ್ಕೆ ಮತ್ತು ರಾಮನಿಗೆ ನಾನು ಶಾಪವನ್ನು