ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸುಗ್ರೀವನ ದೂತನೆಂದು ಪರಿಚಯವನ್ನು ಮಾಡಿಕೊಟ್ಟ ಕಾರಣ, ದೂತನನನ್ನು ವಧಿಸುವದು ಉಚಿತವಲ್ಲವೆಂದು ವಿಭೀಷಣನು ರಾವಣನಿಗೆ ಸಲಹೆಯಿತ್ತು. ಆ ವಿಚಾರದಿಂದ ಪರಾವೃತ್ತಗೊಳಿಸಿದನು. ಆಗ ರಾವಣನು ಹನುಮಂತನನ್ನು ಹೆಡಮುರಿಗೆ ಕಟ್ಟಿ ಆತನ ಬಾಲಕ್ಕೆ ಬೆಂಕಿ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆತನನ್ನು ಸುತ್ತಿಸಬೇಕೆಂದು ರಾಕ್ಷಸರಿಗೆ ಆಜ್ಞೆಯಿತ್ತನು. ರಾಕ್ಷಸರು ಆತನ ಬಾಲಕ್ಕೆ ಚಿಂದಿ-ಬಟ್ಟೆಗಳನ್ನು ಸುತ್ತಿ ಅದರ ಮೇಲೆ ಎಣ್ಣೆ ಸುರಿದು ಅದಕ್ಕೆ ಬೆಂಕಿ ಅಂಟಿಸಿದರು. ರಾಕ್ಷಸರನ್ನು ಸದೆಬಡೆಯುವದು ಹನುಮಂತನಿಗೆ ಅಸಾಧ್ಯವಿರಲಿಲ್ಲ; ಆದರೆ, ತಾನು ಬಂದ ಕಾರ್ಯ-ಉದ್ದೇಶವನ್ನು ಗಮನಿಸಿ ತನಗೆ ನಡೆದ ಅವಮಾನವನ್ನು ತೆಪ್ಪಗೆ ಸಹಿಸಿಕೊಂಡನು. ಲಂಕೆಯು ಸೂಕ್ಷ್ಮನಿರೀಕ್ಷಣೆಯು ಆತನಿಗೆ ಬೇಕಿತ್ತು; ಅದು ಈ ಕಾರಣದಿಂದ ಈಡೇರಿತು. ಬಾಲವನ್ನು ಹೊತ್ತಿಸಿದ್ದರಿಂದ ಯಾವ ಅಪಾಯವೂ ಹನುಂಮತನಿಗೆ ಆಗಲಿಲ್ಲ; ಆದರೆ ಲಂಕೆಯು ಸುಟ್ಟುಹೋಯಿತು. ಅಪ್ರಿಯವಾದ ಈ ವಾತೆಯನ್ನು ರಾಕ್ಷಸರಿಂದ ಅರಿತ ಸೀತೆಗೆ ಅತೀವದುಃಖ ವಾಯಿತು. ಹನುಮಂತನ ಭೇಟಿಯಿಂದ ಆತನು ನಿಜವಾಗಿ ರಾಮನ ದೂತನೆಂದು ಸೀತೆಯ ಮನವರಿಕೆಯಾಯಿತ್ತು. ಆ ಮಹಾಕವಿಯ ಹಿತವನ್ನು ಮನಃಪೂರ್ವಕ ವಾಗಿ ಬಯಸಿ ಅವಳು ಅಗ್ನಿ ದೇವತೆಯನ್ನು ಪ್ರಾರ್ಥಿಸಿದಳು-
ಯುದ್ಯಸ್ತಿ ಪತಿಶುತ್ತೂಷಾ ಯದ್ಯಸ್ತಿ ಚರಿತಂ ತಪಃ |
ಯದಿ ವಾ ತ್ವೇಕಪತ್ನೀತ್ವಂ ಶೀತೋ ಭವ ಹನೂಮತಃ ‖೨೭‖

“ನಾನು ನನ್ನ ಪತಿಗೆ ಸೇವೆ ಸಲ್ಲಿಸಿದ್ದಾರೆ. ತಪಸ್ಸನ್ನು ಆಚರಿಸಿದ್ದರೆ, ಪತಿವ್ರತೆಯಾಗಿ, ಹೇ ಅಗ್ನಿದೇವತೆಯೇ, ನೀನು ಹನುಮಂತನಿಗಾಗಿ ಶೀತಲನಾಗು!”
ಇದು ಸತ್ಯಕ್ರಿಯೆಯಿದೆ.
ಗೋರಖಪುರದ ಪ್ರತಿಯಲ್ಲಿ ಇನ್ನೂ ಕೆಳಗಿನ ಮೂರು ಶ್ಲೋಕಗಳಿವೆ:
ಯದಿ ಕಿಂಚಿದನುಕ್ರೋಶಸ್ತಸ್ಯ ಮಯ್ಯಸ್ತಿ ಧೀಮತಃ |
ಯದಿ ವಾ ಭಾಗ್ಯಶೇಷೋ ಮೇ ಶೀತೋ ಭವ ಹನೂಮತಃ ‖
ಯದಿ ಮಾಂ ವೃತ್ತಸಂಪನ್ನಾಂ ತತ್ಸಮಾಗಮಲಾಲಸಾಮ್ |
ವಿಜಾನಾತಿ ಧರ್ಮಾತ್ಮಾ ಶೀತೋ ಭವ ಹನೂಮತಃ |
ಯದಿ ಮಾಂ ತಾರಯೇದಾರ್ಯಃ ಸುಗ್ರೀವಃ ಸತ್ಯಸಂಗರಃ |
ಅಸ್ಮಾದ್ ದುಕಾಂಬುಸಂರೋಧ್ಯಾಚ್ಛೀತೋ ಭವ ಹನೂಮತಃ ‖