ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಪಥ, ಸತ್ಯಕ್ರಿಯೆ

೧೯೯


ಸೀತೆಯಲ್ಲಿ ಆತನಿಗೆ ಅಪಾರಪ್ರೀತಿಯಿದ್ದರೂ ಅವಳು ಅರಮನೆಯಲ್ಲಿರುವದು ಜನನಿಂದೆಯ ವಿಷಯವಾಗಿತ್ತು. ರಾಮನು ರಾಜನಾದ್ದರಿಂದ, ಸೀತೆಯನ್ನು ತ್ಯಜಿಸುವದು ತನ್ನ ಪರಮಕರ್ತವ್ಯವೆಂದು ತಿಳಿದಿದ್ದನು. ಅವಳು ಗರ್ಭಿಣಿಯಿದ್ದರೂ ಅವಳನ್ನು ಬಿಟ್ಟುಕೊಡಲು ನಿರ್ಧರಿಸಿದನು. ತನ್ನ ಈ ಆಚರಣೆಯು, ತನ್ನ ಇಚ್ಛೆಯು ಪ್ರಜೆಗಳಿಗೆ, ನೆಂಟಸ್ಥರಿಗೆ ಹಿಡಿಸಲಿಕ್ಕಿಲ್ಲ ಎಂದು ರಾಮನಿಗೆ ಅನಿಸುತ್ತಿತ್ತು. “ದೇಶದ ಗಡಿಯಾಚೆ ವಾಲ್ಮೀಕಿ ಆಶ್ರಮದ ಬಳಿ, ಗಂಗಾತೀರದೆಡೆ ಸೀತೆಯನ್ನು ಬಿಟ್ಟು ಬಾ!” ಎಂದು ಅತಿಕಠೋರ ಶಬ್ದಗಳಲ್ಲಿ ರಾಮನು ಲಕ್ಷ್ಮಣನಿಗೆ ಅಪ್ಪಣೆಯಿತ್ತನು. ಸೀತೆಯ ಪರವಾಗಿ ಯಾವ ಹೇಳಿಕೆಯನ್ನೂ ಕಿವಿಗೆ ಹಾಕಿಕೊಳ್ಳಲು ರಾಮನು ಸಿದ್ಧನಿರಲಿಲ್ಲ. ತನ್ನ ನಿರ್ಣಯದ ವಿರುದ್ಧವಾಗಿ ಯಾರೂ ನಿಲ್ಲಬಾರದೆಂದು ಆತನು ಈ ರೀತಿ ಶಪಥ ಮಾಡಿದನು-

ಶಾಪಿತಾ ಹಿ ಮಯಾ ಯೂಯಂ ಪಾದಾಭ್ಯಾಂ ಜೀವಿತೇನ ಚ |
ಯೇ ಮಾಂ ವಾಕ್ಯಾಂತರೇ ಬ್ರೂಯುರನುನೇತುಂ ಕಥಂಚನ ‖೨೧‖
ಅಹಿತಾ ನಮ ತೇ ನಿತ್ಯಂ ಮದಭೀಷ್ಟವಿಘಾತನಾಳ್ ‖೨೨‖


“ನಾನು ನನ್ನ ಪಾದಗಳ ಮತ್ತು ನನ್ನ ಪ್ರಾಣದ ಶಪಥವನ್ನು ಹಾಕಿದ್ದೇನೆ, ನನ್ನ ಹೇಳಿಕೆಯ ವಿರುದ್ಧ ನನ್ನನ್ನು ಸಮಾಧಾನಪಡಿಸಲು ಯಾರಾದರೂ ಯಾವ ಮಾತುಗಳನ್ನಾಡಿದರೂ ಅದರಿಂದ ನನ್ನ ಇಷ್ಟಾರ್ಥಕ್ಕೆ ಆತಂಕವಾಗುವದರಿಂದ ಅವರು ಸದಾ ಕಾಲವೂ ನನಗೆ ಶತ್ರುಗಳಂತಾಗುವರು.”
ರಾಮನ ಈ ಶಪಥದಿಂದ ಲಕ್ಷ್ಮಣ ಹಾಗೂ ಇತರರೆಲ್ಲರೂ ಉತ್ತರಿಸದಂತಾದರು. ಒಂದಕ್ಷರವನ್ನು ನುಡಿಯಲು ಕೂಡ ಯಾರಿಗೂ ಅವಕಾಶವನ್ನು ಕೊಡಲಿಲ್ಲ.

೬. ಸೀತೆಯು ಪರಿಶುದ್ಧಳಿದ್ದ ಬಗ್ಗೆ ವಾಲ್ಮೀಕಿಯ ಶಪಥ

ಉತ್ತರಕಾಂಡ/೬೫

ರಾಮನ ಅಶ್ವಮೇಧ ಯಜ್ಞ ನಡೆದ ಸಮಯದಲ್ಲಿ, ವಾಲ್ಮೀಕಿಯು ಲವಕುಶರಿಗೆ ರಾಮಾಯಣವನ್ನು ಹಾಡಲು ಆಜ್ಞಾಪಿಸಿದನು. ಋಷಿವೃಂದದ, ರಾಜರುಗಳ, ವೇದಜ್ಞರ ಸಮ್ಮುಖದಲ್ಲಿ, ಆ ಬಾಲಕರು ರಾಮಾಯಣದ ಇಪ್ಪತ್ತು ಸರ್ಗಗಳನ್ನು ಇಂಪಾದ ಸ್ವರದಲ್ಲಿ ತಾಲ-ಲಯಬದ್ಧವಾಗಿ ಹಾಡಿದರು. ರಾಮನ ಸಹಿತ ಸಭಿಕರೆಲ್ಲರೂ ಅದನ್ನು ಕೇಳಿ ಆಶ್ಚರ್ಯಭರಿತರಾದರು ಪ್ರೋತ್ಸಾಹಿಸಲೆಂದು ಈ