ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ವಾಲ್ಮೀಕಿಯು ರಾಮನಿಗೆ ಈ ರೀತಿ ಮುಂದುವರೆಸಿ ಹೇಳಿದನು- “ಲೋಕಾಪವಾದಕ್ಕೆ ಭಯಪಟ್ಟ ನಿನಗೆ ಇವಳು ಮನದಟ್ಟು ಮಾಡಿಕೊಡುವಳು. ಇವಳು ಅಂತಃಕರಣವು ಶುದ್ಧವಿದೆಯೆಂದು ನನಗೆ ದಿವ್ಯಜ್ಞಾನದಿಂದ ತಿಳಿದಿದೆ. ನಿನಗೆ ಕೂಡ ಅದು ಗೊತ್ತಿದೆ; ಆದರೆ, ಲೋಕಾಪವಾದದಿಂದ ನಿನ್ನ ಮನಸ್ಸು ಕಲುಷಿತವಾದ ಕಾರಣ ನೀನು ಅವಳನ್ನು ತ್ಯಜಿಸಿರುವೆ.”
ಇದು ಸತ್ಯಕ್ರಿಯೆಯಾಗಿದೆ.

೭. ಸೀತೆಯ ಶಪಥ

ಉತ್ತರಕಾಂಡ/೯೭

ಸೀತೆಯು ಶುದ್ಧಳೆಂಬ ಬಗ್ಗೆ ವಾಲ್ಮೀಕಿಯ ಶಪಥವನ್ನು ಗಮನಿಸಬೇಕು. ಸೀತೆಯು ಶುದ್ಧಳಿರುವ ಬಗ್ಗೆ ವಾಲ್ಮೀಕಿಯು ಶಪಥಮಾಡಿ ಹೇಳಿದ ಕಾರಣ ರಾಮನಿಗೂ ವಿಶ್ವಾಸವಾಯಿತು. ರಾಮನು ನುಡಿದದ್ದೇನೆಂದರೆ: 'ಈ ಮೊದಲು ದೇವತೆಗಳ ಸಾನ್ನಿಧ್ಯದಲ್ಲಿ ಸೀತೆಯು ಶಪಥ ಮಾಡಿ ಮನವರಿಕೆ ಮಾಡಿಕೊಟ್ಟಿದ್ದಾಳೆ; ನಂತರವೇ ನಾನು ಅವಳ ಗೃಹಪ್ರವೇಶಕ್ಕೆ ಅನುಮತಿಯನ್ನು ಕೊಟ್ಟಿರುವೆ; ಹೀಗಿದ್ದರೂ ಲೋಕಾಪವಾದವು ಬಲು ದುಸ್ತರವಾದ್ದರಿಂದ ನಾನು ಮೈಥಿಲಿಯನ್ನು ತ್ಯಜಿಸಿದ್ದೆನೆ. ಈ ಅಪರಾಧಕ್ಕಾಗಿ ತಾವು ನನ್ನನ್ನು ಕ್ಷಮಿಸಬೇಕು! ಈ ಅವಳಿಜವಳಿ ಕುಶ-ಲವರು ನನ್ನ ಮಕ್ಕಳೆಂಬುದು ನಾನು

ಬಲ್ಲೆನು. ಈ ಪ್ರಪಂಚದಲ್ಲಿ ಶುದ್ಧಳೆನಿಸಿಕೊಂಡ ಸೀತೆಯಲ್ಲಿ ನನ್ನ ಪ್ರೀತಿಯಿರಲಿ!” ಸೀತೆಯು ಕಾಷಾಂಯವಸ್ತ್ರವನ್ನು ಧರಿಸಿದ್ದಳು. ಅಲ್ಲಿ ಕೂಡಿದ ಜನ ಸಮೂಹವನ್ನವಲೋಕಿಸಿ ಅವಳು ಈ ರೀತಿ ಅಂದಳು: ಯಥಾಹಂ ರಾಘವಾದನ್ಯಂ ಮನಸಾಪಿ ನ ಚಿಂತಯೇ | ತಥಾ ಮೇ ಮಾಧವೀದೇವೀ ವಿವರಂ ದಾತುಮರ್ಹತಿ ||೧೪|| ಮನಸಾ ಕರ್ಮಣಾ ವಾಚಾ ಯಥಾ ರಾಮಂ ಸಮರ್ಚಯೇ | ತಥಾ ಮೇ ಮಾಧವೀದೇವೀ ವಿವರಂ ದಾತುಮರ್ಹತಿ IX೧೫॥ ಯಥೈ ತತೃತ್ಯಮುಕ್ತಂ ಮೇ ವೇ ರಾಮಾತ್ಪರಂ ನ ಚ | ತಥಾ ಮೇ ಮಾಧವೀದೇವೀ ವಿವರಂ ದಾತುಮರ್ಹತಿ ೧೬|| “ರಘುತ್ತಮನಾದ ರಾಮನ ಹೊರತಾಗಿ ಇನ್ನೊಬ್ಬ ಪುರುಷನನ್ನು ನಾನು ಮನಸ್ಸಿನಲ್ಲಿ ಕೂಡ ತಂದಿರದಿದ್ದರೆ, ವಿಷ್ಣುಪತ್ನಿಯಾದ ಈ ಭೂದೇವಿಯು ತನ್ನ ಒಡಲಿನಲ್ಲಿ ನನಗೆ ಸ್ನಾನ ಕೊಡಲಿ!