ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಪಥ, ಸತ್ಯಕ್ರಿಯೆ ೨೩ ಕಾಯಾ ವಾಚಾ ಮನಸಾ ನಾನು ರಾಮನನ್ನೇ ಅರ್ಚಿಸಿದ್ದರೆ ಈ ವಿಷ್ಣು ಮತಿಯಾದ ಭೂದೇವಿಯು ನನಗೆ ಬಾಗಿಲನ್ನು ತೆರೆಯಲಿ! ರಾಮನನ್ನು ಬಿಟ್ಟು ಬೇರೆ ಪುರುಷನ ಪರಿಚಯವೂ ನನಗಿಲ್ಲವೆಂಬುದು ನಿಜವಿದ್ದರೆ ವಿಷ್ಣುಪತ್ನಿಯಾದ ಈ ಭೂದೇವಿಯು ನನಗೆ ಪ್ರವೇಶವನ್ನು ಕೊಡಲಿ!” ಸೀತೆಯು ಈ ಶಪಥವನ್ನು ಉಚ್ಚರಿಸುತ್ತಲೇ ಭೂಮಿಯಿಂದ ಒಂದು ದಿವ್ಯ ಸಿಂಹಾಸನವು ಮೇಲೆ ಬಂದಿತು. ಆ ಸಿಂಹಾಸನದಲ್ಲಿ ಪ್ರತ್ಯಕ್ಷ ಭೂದೇವಿಯೇ ಇದ್ದಳು. ಅವಳು ಸೀತೆಯನ್ನು ಕೈಗಳಿಂದ ಎತ್ತಿಕೊಂಡಳು. ಅವಳನ್ನು ಅಭಿವಂದಿಸಿ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡಳು. ಸಿಂಹಾಸನಾರೂಢ ಸೀತೆಯು ಪಾತಾಳವನ್ನು ಪ್ರವೇಶಿಸುತ್ತಿದ್ದಂತೆ ಅವಳ ಮೇಲೆ ದಿವ್ಯಪುಷ್ಪವೃಷ್ಟಿಯಾಯಿತು. ಜನರು “ಭಲೆ! ಭಲೆ?” ಎಂದು ಉದ್ಗರಿಸಿದರು. ಇದು ಸತ್ಯಕ್ರಿಯೆ ಇದೆ.