ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧c ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಅಭಿಷೇಕ ಸಮಾರಂಭೋ ರಾಘವಸ್ಕೋಪಕಲ್ಪಿತಃ ೨೪|| ಅನೇನೈವಾಭಿಷೇಕೇಣ ಭರತೋ ಮೇ ಅಭಿಷಿಚ್ಯತಾಮ್ || ಯೋ ದ್ವಿತೀಯೋ ವರೋ ದೇವ ದತ್ತು ಪ್ರೀತೇನ ಮೇ ತ್ವಯಾ ೨೫॥ ತದಾ ದೇವಾಸುರೇ ಯುದ್ದೇ ತಸ್ಯ ಕಾಲೋsಯಮಾಗತಃ | ನವ ಪಂಚ ಚ ವರ್ಷಾಣಿ ದಂಡಕಾರಣ್ಯಮಾಶ್ರಿತಃ |೨೬|| ಚೀರಾಜಿನಧರೋ ಧೀರೋ ರಾಮೋ ಭವತು ತಾಪಸಃ | ಭರತೋ ಭಜತಾಮದ್ಯ ಯೌವರಾಜ್ಯಮಕಂಟಕಮ್ |೨೭| “ಹೇ ಭೂಪತಿಯೇ, ಆಗ ಕೊಡಬಯಸಿದ ವರಗಳನ್ನು ಇಂದು ನನಗೆ ಕೊಡಬೇಕು! ಇಂದೇ ನಾನು ಬೇಡಿಕೊಳ್ಳುತ್ತಿದ್ದೇನೆ. ನನ್ನ ಮಾತುಗಳನ್ನು ಕೇಳಿಕೊಳ್ಳಿ ರಾಮನ ಅಭಿಷೇಕಕ್ಕಾಗಿ ಏರ್ಪಡಿಸಿದ ಈ ಸಮಾರಂಭವು ಭರತನ ಅಭಿಷೇಕದ ಸಮಾರಂಭವಾಗಲಿ!" ಹೇ ರಾಜನೇ, ಅಂದು ಸುರಾಸುರರಲ್ಲಿ ನಡೆದ ಯುದ್ಧದ ಸಮಯದಲ್ಲಿ ನೀವು ಪ್ರಸನ್ನರಾಗಿ ನನಗೆ ಯಾವ ವರವನ್ನು ಕೊಡಬಯಸಿದಿರೋ ಅದನ್ನು ಬೇಡಿಕೊಳ್ಳುವ ಸಮಯವು ಈಗ ಒದಗಿದೆ. ರಾಮನು ವಲ್ಕಲಗಳನ್ನುಟ್ಟು ಜಿಂಕೆಯ ಚರ್ಮವನ್ನು ಹೊದ್ದುಕೊಂಡು, ಜ್ಞಾನವಂತನಾದ ಆತನು ತಾಪಸಿಯಂತೆ ಹದಿನಾಲ್ಕು ವರ್ಷಗಳ ಪರ್ಯಂತ ದಂಡಕಾರಣ್ಯದಲ್ಲಿ ವಾಸವಿರಬೇಕು; ಮತ್ತು ಭರತನು ನಿಷ್ಕಂಟಕವಾದ ಯುವರಾಜ್ಯವನ್ನು ಸ್ವೀಕರಿಸಬೇಕು. ಇದೇ ನನ್ನ ಮುಖ್ಯ ಆಸೆಯಾಗಿದೆ.” ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅವಳು ನಿಖರವಾಗಿ- 'ದತ್ತಮೇವ ವರ ವೃಣೇ” “ನೀವು ದಯಪಾಲಿಸಿದ ವರವನ್ನೇ ನಾನು ಬೇಡಿಕೊಳ್ಳುತ್ತಿದ್ದೇನೆ” ಎಂದು ಹೇಳಿದಳು. ಅಯೋಧ್ಯಾಕಾಂಡ/೧೨ ಕೈಕೇಯಿಯ ವರದಾಚನೆಯು ಕಿವಿಗೆ ಬೀಳುತ್ತಲೇ ದಶರಥರಾಜನು ಬಹಳ ಕುಪಿತ ಆದನು. ಶೋಕಾಕುಲತೆಯಿಂದ ಆತನು ಮೂರ್ಛ ಹೋದನು. ಮೂರ್ಛಯಿಂದ ಎಚ್ಚೆತ್ತಾಗ ಆತನು ಕೈಕೇಯಿಯನ್ನು ತೀಕ್ಷಶಬ್ದಗಳಿಂದ ನಿಂದಿಸಿದನು; ತಿಳಿಸಿ ಹೇಳಲು ಯತ್ನಿಸಿದನು; ಇಷ್ಟೇ ಅಲ್ಲದೇ, ತನ್ನ ಹಟವನ್ನು ಬಿಡಬೇಕೆಂದು ದೀನನಾಗಿ ಬೇಡಿಕೊಂಡನು. ಆಗ ದುಃಖದಿಂದ ವ್ಯಾಕುಲನಾದ, ಶೋಕದಲ್ಲಿ ಮುಳುಗಿದ, ಮೂರ್ಛಿತಾವಸ್ಥೆಯ, ಕಂಪಿಸುತ್ತಿದ್ದ ದಶರಥನು