ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೧೩ ಮಾತಾಪಿತರನ್ನು ವಂದಿಸಿದನು. ದಶರಥನ ಅಂಥ ಅವಸ್ಥೆಯನ್ನು ಕಂಡು ರಾಮನು ಖಿನ್ನನಾದನು. ರಾಜನ ದುಃಖದ ಕಾರಣವನ್ನು ಕೈಕೇಯಿಗೆ ಕೇಳಿದಾಗ ಅವಳು ಈ ರೀತಿ ನುಡಿದಳು: "ರಾಜನು ಕೋಪದಲ್ಲಿಲ್ಲ; ಯಾವ ಸಂಕಟವೂ ಒದಗಿಲ್ಲ; ರಾಜನು ಒಂದು ವಿಷಯವನ್ನು ನಿನಗೆ ಹೇಳಬಯಸುತ್ತಾನೆ. ನೀನು ಅವನಿಗೆ ಅತ್ಯಂತ ಪ್ರಿಯನಾದ್ದರಿಂದ ಅಪ್ರಿಂಯವಾದುದನ್ನು ನಿನಗೆ ಹೇಳಲು ಹಿಂಜರಿಯುತ್ತಿದ್ದಾನೆ. ಆತನು ನನಗೆ ಒಂದು ವಚನವನ್ನು ಕೊಟ್ಟಿದ್ದಾನೆ; ಆ ವಚನದ ಪೂರ್ತಿಯು ನಿನ್ನಿಂದಾಗಬೇಕಾಗಿದೆ. ಏಷ ಮಹ್ಯಂ ವರಂ ದತ್ವಾ ಪುರಾ ಮಾಮಭಿಪೂಜ್ಯ ಚ | ಸ ಪಶ್ಚಾತ್ತಷ್ಯತೇ ರಾಜಾ ಯಥಾನ್ಯ ಪ್ರಾಕೃತಸ್ತಥಾ ||೨೨|| ಅತಿಸೃಜ್ಯ ದದಾನೀತಿ ವರಂ ಮಮ ವಿಶಾಂಪತಿಃ |೨೩|| “ರಾಜನು ನನಗೆ ಮೊದಲು ವರಗಳನ್ನು ನೀಡಿ ಗೌರವಿಸಿದ್ದಾನೆ. ಈಗ ಈ ರಾಜನು ಸಾಮಾನ್ಯರಂತೆ ಪಶ್ಚಾತ್ತಾಪಪಡುವದೆಂದರೆ ನೀರೆಲ್ಲ ಹರಿದು ಹೋದನಂತರ ಬದುವನ್ನು ಹಾಕಿದಂತೆ ನಿರರ್ಥಕವಿರುತ್ತದೆ.” ರಾಜನ ಅನುಮತಿ ಯಂತೆ ತಾನು ಹೇಳುತ್ತಿರುವದನ್ನು ಪೂರೈಸುವ ಪ್ರತಿಜ್ಞೆಯನ್ನು ರಾಮನಿಂದ ಮಾಡಿಸಿ, ಆ ನಂತರ ಕೈಕೇಯಿಯು ರಾಮನಿಗೆ ಈ ರೀತಿ ಎಂದಳು- ಪುರಾ ದೇವಾಸುರೇ ಯುದ್ಧ ಪಿತ್ತಾ ತೇ ಮಮ ರಾಘವ || ರಕ್ಷಿತೇನ ವರ್ ದತ್ ಸಶಕ್ಕೇನ ಮಹಾರಣೇ ||.೨ “ಪೂರ್ವದಲ್ಲಿ ಸುರಾಸುರರ ಯುದ್ದದಲ್ಲಿ ಈತನಿಗೆ ಶಸ್ತ್ರದಿಂದ ಗಾಯ ವಾದಾಗ ಅದನ್ನು ತೆಗೆದು ತಾನು ಇವನನ್ನು ರಕ್ಷಿಸಿದ್ದೇನೆ. ಆಗ ಆ ಮಹಾಯುದ್ಧದಲ್ಲಿ ನಿನ್ನ ತಂದೆಯ ನನಗೆ ಎರಡು ವರಗಳನ್ನು ಕೊಡಬಯಸಿದರು. ತತ್ರ ಮೇ ಯಾಚಿತೋ ರಾಜಾ ಭರತಸ್ಯಾಭಿಷೇಚನಮ್ | ಗಮನಂ ದಂಡಕಾರಣ್ಯ ತವ ಚಾವ ರಾಘವ ||೩೩|| “ಭರತನಿಗೆ ರಾಜ್ಯಾಭಿಷೇಕ ಮತ್ತು ನೀನು ಈ ದಿನವೇ ದಂಡಕಾರಣ್ಯಕ್ಕೆ ಹೊರಟು ಹೋಗಬೇಕು; ಈ ಎರಡು ವರಗಳನ್ನು ಕೊಡಲು ನಾನು ರಾಜನಿಗೆ ಪ್ರಾರ್ಥಿಸಿದ್ದೇನೆ; ಆ ಕಾರಣ ನಿನ್ನ ತಂದೆಯ ಹಾಗೂ ಸ್ವತಃ ನಿನ್ನ ಪ್ರತಿಜ್ಞೆಯನ್ನು ಸತ್ಯಗೊಳಿಸಲು ನೀನು ತತ್ಪರನಾಗು!