ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ವೇಷವಂ ನವವರ್ಷಾಣಿ ಪಮಚ ಚ ||೩೫|| ಭರತಶ್ಚಾಭಿಷಿಕ್ಕೇತ ಯದೇತದಭಿಷೇಚನಮ್ | ತ್ವದರ್ಥ ವಿಹಿತಂ ರಾಜ್ಞಾತೇನ ಸರ್ವಣ ರಾಘವ 11೩೬l ಸಪ್ತ ಸಪ್ತ ಚ ವರ್ಷಾಣಿ ದಂಡಕಾರಣ್ಯಮಾಶ್ರಿತಹ | ಅಭಿಷೇಕಮಿದು ತ್ಯಕ್ಕಾ ಜಟಾಚೀರಧರೋ ಭವ |೩೭| “ಈ ನಿನ್ನ ತಂದೆಯು ನನಗೆ ಕೊಟ್ಟ ವರಗಳನುಸಾರ 'ನೀನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕು; ಮತ್ತು ನಿನ್ನ ಸಲುವಾಗಿ ಅಭಿಷೇಕಕ್ಕೆಂದು ಸಂಗ್ರಹಿಸಿದ ಎಲ್ಲ ಸಾಮಗ್ರಿಯಿಂದ ಭರತನಿಗೆ ಅಭಿಷೇಕ ನಡೆಯಬೇಕು! ಈ ರಾಜ್ಯಾಭಿಷೇಕವನ್ನು ನೀನು ತ್ಯಜಿಸು; ಜಟಾವಲ್ಕಲಗಳನ್ನು ಧರಿಸಿ ನೀನು ಹದಿನಾಲ್ಕು ವರ್ಷಗಳ ಕಾಲ ದಂಡಕಾರಣ್ಯದ ಆಶ್ರಯದಲ್ಲಿರಬೇಕು.” ಏತತ್ಯುರು ನರೇಂದ್ರಸ್ಯ ವಚನು ರಘುನಂದನ ೪೦ ಇಲ್ಲಿ ಕೈಕೇಯಿಯು 'ವರ' ಎಂಬುದರ ಬದಲು 'ವಚನ' ಶಬ್ದವನ್ನು ಬಳಸಿದ್ದಾಳೆ. ಇದು ಅಯಾಚಿತ ವರವಾಗಿದೆ. ಈ ವರಗಳ ಸಂಬಂಧವಾಗಿ ಬೇರೆ ವ್ಯಕ್ತಿಗಳ ಪ್ರತಿಕ್ರಿಯೆಗಳು ಅಯೋಧ್ಯಾಕಾಂಡ/೨೩ ರಾಮನು ವನಕ್ಕೆ ಹೋಗುವೆನೆಂದು ಪ್ರತಿಜ್ಞೆಯನ್ನು ಮಾಡಿದಾಗ ಲಕ್ಷಣನು ಅದನ್ನು ಸ್ಪಷ್ಟವಾಗಿ ನಿಷೇಧಿಸಿದನು. ತನ್ನ ಅನಿಸಿಕೆಯನ್ನು ತಿಳಿಸಿಕೊಳ್ಳಲು ಆತನು ಹಲವು ರೀತಿಗಳಲ್ಲಿ ಪ್ರಯತ್ನಿಸಿದನು. ಪಿತನ ಆಜ್ಞೆಯ ಉಲ್ಲಂಘವಾದರೆ ಅದು ಧರ್ಮದ ವಿರುದ್ದವಾಗುವದೆಂದು ರಾಮನು ವನಕ್ಕೆ ಹೋಗುವದೆಂದು ನಿಶ್ಚಯಿಸಿದ್ದನು. ರಾಮನ ಈ ನಿರ್ಣಯವು ಲಕ್ಷ್ಮಣನಿಗೆ ಆತುರದ ನಿರ್ಣಯ ವೆಂದೆನಿಸುತ್ತದೆ. ಆ ದುಷ್ಟ ಸ್ತ್ರೀ-ಪುರುಷರ ಬಗ್ಗೆ (ಕೈಕೇಯಿ ಮತ್ತು ದಶರಥ) ರಾಮನಿಗೆ ಸಂದೇಹವೇಕೆ ಉಂಟಾಗುತ್ತಿಲ್ಲ? ಎಂದು ನಿಚ್ಚಳವಾಗಿ ಕೇಳುತ್ತಾನೆ. ಧರ್ಮದ ಮುಸುಕು ಹಾಕಿಕೊಂಡು ಪುರುಷರು ಪಾಪಾಸಕ್ತರಿರುತ್ತಾರೆಂದು