ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಯಾನೈಶ್ಚ ಮುಖ್ಯೈಃ ಪರಿಚಾರಕೈಶ್ಚ ಸುಸಂವೃತಾ ಗಚ್ಛತು ರಾಜಪುತ್ರೀ |
ವಸ್ತ್ರೈಶ್ಚ ಸರ್ವೈಃ ಸಹಿತೈರ್ವಿಧಾನೈರ್ನೇಯುಂ ವೃತಾ ತೇ ವರಸಂಪ್ರದಾನೇ ‖೩೬‖

“ಎಲೈ ರಾಜಕನ್ಯೆಯೇ, ಒಬ್ಬ ರಾಮನಿಗೆ ವನವಾಸವೆಂದು ನೀನು ಬೇಡಿ
ಕೊಂಡಿರುವೆಯಾದ್ದರಿಂದ ಈ ಸೀತೆಯು ನಿತ್ಯಾಲಂಕಾರಭುಷಿತಳಾಗಿ
ರಾಮನೊಡನೆ ಕಾಡಿನಲ್ಲಿ ವಾಸವಿರಲಿ; ಉತ್ಕೃಷ್ಟ ವಾಹನಗಳು, ಸೇವಕರು,
ಎಲ್ಲ ಉಡಿಗೆತೊಡಿಗೆ ಪಾತ್ರೆಪಡಗಗಳ ಸಹಿತವಾಗಿ ಈ ರಾಜಕನ್ಯೆಯು ಒಳ್ಳೆಯ
ಏರ್ಪಾಟಿನಿಂದ ಹೋಗಲಿ! ಏಕೆಂದರೆ ನೀನು ವರವನ್ನು ಬೇಡಿದಾಗ ಇವಳ
ಪ್ರಸ್ತಾಪ ಬಂದಿಲ್ಲ.”

ದಶರಥ

ಅಯೋಧ್ಯಾಕಾಂಡ/೩೪

ವನವಾಸಕ್ಕೆ ನಡೆದ ರಾಮನು ದಶರಥನಿಗೆ 'ಹೋಗಿಬರುವೆ'ನೆಂದು ಹೇಳಲು
ಬಂದಾಗ ದಶರತನು ಈ ರೀತಿ ಅಂದನು-
ಅಹಂ ರಾಘವ ಕೈಕೇಯ್ಯಾ ವರದಾನೇನ ಮೋಹಿತಃ |
ಅಯೋಧ್ಯಾಯಾಂ ತ್ವಮೇವಾದ್ಯ ಭವ ರಾಜಾ ನಿಗೃಹ್ಯ ಮಾಮ್ ‖೨೬‖

“ಹೇ ರಾಘವನೇ, ಕೈಕೇಯಿಯು ಈ ವರದಾನದಿಂದ ನನ್ನನ್ನು ಮೋಹಿತ
ಗೊಳಿಸಿದ್ದಾಳೆ; ಆದ್ದರಿಂದ ನೀನು ನನ್ನನ್ನು ಬಂಧಿಸಿ ಅಯೋಧ್ಯೆಯ ರಾಜನಾಗು!”
ಆಗ ರಾಮನು ದಶರಥನಿಗೆ ನುಡಿದದ್ದೇನೆಂದರೆ- “ನನಗೆ ರಾಜ್ಯದಾಸೆ ಇಲ್ಲ.
ತಾವು ಸಾವಿರಾರು ವರ್ಷಗಳವರೆಗೆ ಪೃಥ್ವೀಪರಿಯಾಗಿರಬೇಕು. ನಾನು ಅರಣ್ಯದಲ್ಲಿ
ವಾಸಿಸುವೆ. ವನವಾಸದ ಹದಿನಾಲ್ಕು ವರ್ಷಗಳು ಕಳೆದನಂತರ ಪ್ರತಿಜ್ಞೆಯು
ಪೂರ್ತಿಯಾದನಂತರ ನಾನು ತಮ್ಮ ಚರಣಸೇವೆಗಾಗಿ ಬರುವೆನು.”
ಆ ದಿನವೇ ರಾಮನು ವನಕ್ಕೆ ತೆರಳಬೇಕೆಂದು ಕೈಕೇಯಿಯ ಬಲವಂತವಿತ್ತು;
ಇತ್ತ ದಶರಥನು ದುಃಖಾರ್ತನಾಗಿದ್ದನು. ರಾಮನು ವನವಾಸಕ್ಕೆ ತೆರಳುವದು
ದಶರಥನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. “ನನ್ನ ನಿಶ್ಚಯ ದೃಢವಾದದ್ದು” ಎಂದು
ನುಡಿದು ಶೋಕವನ್ನು ತಡೆದುಕೊಳ್ಳಲು ವಿನಂತಿಸುತ್ತ ಈ ರೀತಿ ಎಂದನು-
ಯಸ್ತು ಯುದ್ಧೇ ವರೋ ದತ್ತಃ ಕೈಕೇಯ್ಯೈ ವರದ ತ್ವಯಾ ‖೪೨‖
ದೀಯತಾಂ ನಿಖಿಲೇನೈವ ಸತ್ಯಸ್ತ್ವಂ ಭವ ಪಾರ್ಥಿವ |