ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೧೭


ಅಹಂ ನಿದೇಶಂ ಭವತೋ ಯಥೋಕ್ತಮನುಪಾಲಯನ್ ‖೪೩‖
ಚತುರ್ದಶ ಸಮಾವತ್ಸ್ಯೇ ವನೇ ವನಚರೈಃ ಸಹ |
ಮಾ ವಿಮರ್ಶೋ ವಸುಮತೀ ಭರತಾಯ ಪ್ರದೀಯತಾಮ್ ‖೪೪‖
ನ ಹಿ ಮೇ ಕಾಂಕ್ಷಿತಂ ರಾಜ್ಯಂ ಸುಖಮಾತ್ಮನಿ ವಾ ಪ್ರಿಯಮ್ |
ಯಥಾ ನಿದೇಶಂ ಕರ್ತುಂ ವೈ ತವೈವ ರಘುನಂದನ ‖೪೫‖

“ಹೇ ವರಪ್ರದನೇ, ಕೈಕೇಯಿಗೆ ಯುದ್ದ ಸಮಯದಲ್ಲಿ ಕೊಡಬಯಸಿದ
ವರವನ್ನು ಪೂರ್ಣವಾಗಿ ಕೊಡಿ; ಹೇ ಭೂಪತಿ, ನಿಮ್ಮ ನುಡಿಯು ಸತ್ಯವೆಂದಾಗಲಿ,
ನೀವು ಸತ್ಯವಂತರಾಗಿರಬೇಕು; ನಮ್ಮ ಹೇಳಿಕೆಯನುಸಾರ ನಿಮ್ಮ ಆಜ್ಞೆಯನ್ನು
ಪಾಲಿಸಿ, ವನಚರರೊಂದಿಗೆ ಹದಿನಾಲ್ಕು ವರ್ಷ ಅರಣ್ಯದಲ್ಲಿ ವಾಸಿಸುವೆನು.
ನೀವು ಇನ್ನು ಯಾವ ಯೋಚನೆಯನ್ನೂ ಮಾಡಬೇಡಿ! ಭರತನಿಗೆ ಈ ಪೃಥ್ವಿಯ
ರಾಜ್ಯವನ್ನು ಕೊಟ್ಟುಬಿಡಿರಿ! ಹೇ ರಘುನಂದನ, ನಿಮ್ಮ ಆಜ್ಞೆಯನ್ನು ಪಾಲಿಸುವದು
ನನಗೆ ಪ್ರಿಯವಾದುದು. ಐಹಿಕ ಸುಖದ ಆಸಕ್ತಿ ನನಗಿಲ್ಲ. ರಾಜ್ಯದ ಆಸೆಯೂ
ನನಗಿಲ್ಲ.”

ಅಯೋಧ್ಯಾಕಾಂಡ/೩೬

ರಾಮನು ವನವಾಸಕ್ಕೆ ಹೋಗಬೇಕಾದ ಸಂಗತಿಯು ದಶರಥನಿಗೆ
ಅಸಹನೀಯವಾಗಿತ್ತು. ಕೈಕೇಯಿಯು ಆತನನ್ನು ವಚನಬಂಧನದಲ್ಲಿ
ತೊಡಕಿಸಿದ್ದರಿಂದ ಅತ್ಯಂತ ಕ್ಲೇಶಕರವಾದ ವರವನ್ನು ಕೊಡಬೇಕಾಯಿತು.
ಕೈಕೇಯಿಯ ಮೇಲೆ ಸಾಕಷ್ಟು ಕೋಪ ಬಂದಿದ್ದರೂ ವರವನ್ನು ಕೊಟ್ಟ ಕಾರಣ
ಅಗತಿಕನಾಗಿದ್ದನು. ಸತ್ವವನ್ನು ತೆಗೆದುಹಾಕಿದ ನಂತರ ಅರುಚಿಯಾಗುವ
ಮದ್ಯದಂತೆ, ಧನರಹಿತ ಶೂನ್ಯ ರಾಜ್ಯವನ್ನು ಭರತನು ಸ್ವೀಕರಿಸಲಾರನೆಂದು
ರಾಮನಿಗೆ ಉದ್ದೇಶಿಸಿ ಕೈಕೇಯಿಯು ಆಡಿದ ದುಷ್ಟ ನುಡಿಗಳು, ದಶರಥನ
ಹೃದಯವನ್ನು ತಲ್ಲಣಗೊಳಿಸಿದ್ದವು. ಆಗ ಕ್ರೋಧಗೊಂಡ ದಶರಥನು ಕೈಕೇಯಿಗೆ
ಹೀಗೆಂದನು-
ವಹಂತಂ ಕಿಂ ತುದಸಿ ಮಾಂ ನಿಯುಜ್ಯ ಧುರಿ ಮಾಹಿತೇ |
ಅನಾರ್ಯೇ ಕೃತ್ಯ ಮಾರಬ್ದಂ ಕಿಂ ನ ಪೂರ್ವಮುಪಾರುಧಃ ‖೧೪‖