ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಪುನರುಲ್ಲೇಖ

ಅರಣ್ಯಕಾಂಡ/೨

ವಿರಾಧನು ಸೀತೆಯನ್ನೆತ್ತಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡುದನ್ನು
ಕಂಡು ರಾಮನಿಗೆ ಅತೀವ ದುಃಖವಾಯಿತು. ತನಗಾದ ವ್ಯಥೆಯನ್ನು ಲಕ್ಷ್ಮಣನ
ಎದುರು ಹೀಗೆ ವ್ಯಕ್ತಪಡಿಸಿದನು-
ಯದಭಿಷ್ರೇತಮಸ್ಮಾಸು ಪ್ರಿಯಂ ವರವೃತಂ ಚ ಯತ್ ‖೧೮‖
ಕೈಕೇಯ್ಯಾಸ್ತು ಸುಸಂವೃತ್ತಂ ಕ್ಷಿಪ್ರಮದ್ಯೈವ ಲಕ್ಷಣ |
ಯಾ ನ ತುಷ್ಯತಿ ರಾಜ್ಯೇನ ಪುತ್ರಾರ್ಥೇ ದೀರ್ಘದರ್ಶಿನೀ ‖೧೯‖
ಯಯಾಹಂ ಸರ್ವಭೂತಾನಾಂ ಪ್ರಿಯಂ ಪ್ರಸ್ಥಾಪಿತೋ ವನಮ್ |
ಅದ್ಯೇದಾನೀಂ ಸಕಾಮಾ ಸಾ ಯಾ ಮಾತಾ ಮಧ್ಯಮಾ ಮಮ ‖೨೦‖

“ಲಕ್ಷ್ಮಣನೇ, ಕೈಕೇಯಿಯಾದರೋ ವನದಲ್ಲಿ ನಾವು ಕಷ್ಟಪಡಬೇಕೆಂದು
ಬಯಸಿದಳು. ಅದೇ ರೀತಿ ವರಗಳನ್ನು ಪಡೆದು ತನಗೆ ಹಿತವಾದುದನ್ನು
ಅಪೇಕ್ಷಿಸಿದಳು; ಅದೆಲ್ಲವೂ ಇಂದು ಅವಳು ಪಡೆದಂತಾಯಿತು. ಅವಳು ಅತಿ
ದೂರದರ್ಶಿಯಾಗಿದ್ದರಿಂದ ತನ್ನ ಮಗನಿಗೆ ರಾಜ್ಯ ದೊರೆತದ್ದು ಸಾಲದೇ,
ಅದು ಆತನಿಗೆ ಚಿರವಾಗಿರಬೇಕೆಂದು ನಮ್ಮ ನಾಶವನ್ನು ಬಯಸುತ್ತಿದ್ದಾಳೆ.”

ಅರಣ್ಯಕಾಂಡ/೪೭

ಬ್ರಾಹ್ಮಣನ ವೇಷದಲ್ಲಿ ಬಂದವನು ರಾವಣನಿರುವನೆಂದು ಸೀತೆಯು
ಗುರುತಿಸಲಿಲ್ಲ. ಅತಿಥಿಯು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದಿದ್ದರೆ
ಆತನು ಶಪಿಸಬಹುದೆಂಬ ಭೀತಿಯಿಂದ ಸೀತೆಯು ರಾವಣನಿಗೆ ತನ್ನ ಎಲ್ಲ
ವೃತ್ತಾಂತವನ್ನೂ ಹೇಳಿದಳು. ಈ ಸಂದರ್ಭದಲ್ಲಿ ಈ ವರದ ಉಲ್ಲೇಖವು
ಬಂದಿದೆ.
ಕೈಕೇಯೀ ನಾಮ ಭರ್ತಾರಂ ಮಮಾರ್ಯಾ ಯಾಚತೇ ವರಮ್ ‖೬‖

ಕೈಕೇಯಿಯು ತನ್ನ ಪತಿಯ ಬಳಿಯಲ್ಲಿ ವರವನ್ನು ಬೇಡಿಕೊಂಡಳು.