ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೨೫



ಪರಿಗೃಹ್ಯ ತು ಕೈಕೇಯೀ ಶ್ವಶುರಂ ಸುಕೃತೇನ ಮೇ |
ಮಮ ಪ್ರವ್ರಾಜನಂ ಭರ್ತುರ್ಭರತಸ್ಯಾಭಿಷೇಚನಮ್ ‖೭‖
ದ್ವಾವಯಾಚತ ಭರ್ತಾರಂ ಸತ್ಯಸಂಧಂ ನೃಪೋತ್ತಮಮ್ ‖೮‖

“ನನ್ನ ಮಾವನಿಗೆ ಅವಳು ಧರ್ಮದ ಶಪಥವನ್ನಿಟ್ಟಳು; ಅನಂತರ ನನ್ನ
ಪತಿಗೆ ವನವಾಸ ಮತ್ತು ಭರತನಿಗೆ ಅಭಿಷೇಕ ಎಂಬ ಎರಡು ವರಗಳನ್ನು
ಕೈಕೇಯಿಯು ಸತ್ಯ ವಚನಿಯಾದ, ನೃಪಶ್ರೇಷ್ಠನಾದ ತನ್ನ ಗಂಡನಿಂದ (ದಶರಥನಿಂದ)
ಬೇಡಿಕೊಂಡಳು.
“ಕೊಟ್ಟ ವಚನವನ್ನು ಈಡೇರಿಸದಿದ್ದಲ್ಲಿ ಅಸುನೀಗುವ ಭಯವನ್ನು
ತೋರಿಸಿದಳು.”

ಕಿಷ್ಕಿಂಧಾಕಾಂಡ/೫೯

ವಿಂಧ್ಯಪರ್ವತದಲ್ಲಿಯ ಗುಹೆಯಿಂದ ಹೊರಬಂದ ವಾನರರನ್ನು ಕಂಡು
ಗೃಧ್ರರಾಜನಾದ ಸಂಪಾತಿಗೆ ಆನಂದವಾಯಿತು. ಪ್ರಾಯೋಪವೇಶನ ಮಾಡಲಿರುವ
ಒಂದೊಂದು ಕಪಿಯು ಮೃತವಾದಂತೆ ಅದನ್ನು ತಾನು ಭಕ್ಷಿಸಬಹುದಾದ
ಸಂಧಿಯನ್ನು ಕಂಡು ಆತನಿಗೆ ಸಂತೋಷವಾಗಿತ್ತು. ಈ ಸಂಪಾತಿಯನ್ನು
ನೋಡಿದ ನಂತರ ಅಂಗದನು ಹನುಮಂತನಿಗೆ ಇಂತೆಂದನು- “ಈ ಗೃಧ್ರರಾಜನು
ವಾನರರ ನಾಶಕ್ಕಾಗಿಯೇ ಇಲ್ಲಿ ಬಂದಂತಿದೆ. ಜಟಾಯುವಿನ ಮರಣ, ದಶರಥನ,
ಮರಣ, ಮತ್ತು ಸೀತೆಯ ಅಪಹರಣ- ಇವುಗಳಿಂದ ವಾನರರು ಸಂಕಟದಲ್ಲಿ
ಸಿಲುಕಿದ್ದಾರೆ.”
ಸೀತೆಯ ಸಹಿತವಾಗಿ ರಾಮಲಕ್ಷ್ಮಣರ ಅರಣ್ಯದಲ್ಲಿಯ ವಾಸ್ತವ್ಯ, ರಾಮನ
ಬಾಣದಿಂದ ವಾಲಿಯ ವಧೆ, ಮತ್ತು ರಾಮನ ಕೋಪದಿಂದ ಎಲ್ಲ ರಾಕ್ಷಸರ
ವಧೆ ಇತ್ಯಾದಿ-
ಕೈಕೇಯ್ಯಾ ವರದಾನೇನ ಇದಂ ಚ ವಿಕೃತಂ ಕೃತಮ್ ‖೧೬‖

ಈ ಎಲ್ಲ ಅನರ್ಥಗಳು ದಶರಥರಾಜನು ಕೈಕೇಯಿಗೆ ವರ ಕೊಟ್ಟ ಕಾರಣ
ದಿಂದಾಗಿವೆ.