ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ

೨೨೭


ಆತನಿಗೆ ತುಂಬ ಕೆಡಕೆನಿಸಿತು. ಈ ಶ್ಲೋಕಬದ್ಧ ಶಾಪವಾಣಿಯು ಆತನ ಮನಸ್ಸಿನಲ್ಲಿ
ತಾಳಹಾಕುತ್ತಿದ್ದ ಸಮಯದಲ್ಲಿಯೇ ಸಾಕ್ಷಾತ್ ಬ್ರಹ್ಮದೇವನು ಆತನ ಭೇಟಿಗೆ
ಬಂದನು. ಅರ್ವ್ಯ, ಪಾದ್ಯ ಆಸನ ವಂದನಾದಿಗಳಿಂದ ವಾಲ್ಮೀಕಿಯು ಬ್ರಹ್ಮ ದೇವನನ್ನು ಯಥಾಯೋಗ್ಯವಾಗಿ ಪೂಜಿಸಿದನು. ಬ್ರಹ್ಮದೇವನು ಅದನ್ನು ಸ್ವೀಕರಿಸಿದನು. ಚಿಂತಾಗ್ರಸ್ತನಾದ ವಾಲ್ಮೀಕಿಗೆ ಬ್ರಹ್ಮದೇವನು ನಗುನಗುತ್ತ ಈ ರೀತಿ ನುಡಿದನು: “ನಿನ್ನಿಂದ ರಚಿತವಾದ ಈ ಶ್ಲೋಕವು ಶಾಪೋದ್ದಾರವಿದ್ದರೂ, ಅದು ಯಶೋರೂಪವಾಗುವದು! ಏಕೆಂದರೆ ನನ್ನ ಪ್ರೇರಣೆಯಿಂದ ಸರಸ್ವತಿಯು ನಿನ್ನಲ್ಲಿ ಪ್ರವೃತ್ತಳಾಗಿದ್ದಾಳೆ. ನಿನ್ನ ವಾಣಿಯು ಯತ್ತಿಂಚಿತವೂ ಸುಳ್ಳಾಗಲಾರದು.” ಹೀಗೆಂದು ಬ್ರಹ್ಮದೇವನು ಈ ರೀತಿ ಆಜ್ಞಾಪಿಸಿದನು:

ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ದಾರಿ ಮನೋರಮಾಮ್ | ಯಾವಾಸ್ಯಂತಿ ಗಿರಿಯ: ಸರಿತಶ್ವ ಮಹೀತಲೇ ೩.೬|| ತಾವದ್ರಾಮಯಣಕಥಾ ಲೋಕೇಷು ಪ್ರಚರಿಷ್ಯತಿ | ಯಾವದ್ರಾಮಸ್ಯ ಚ ಕಥಾ ತತ್ಕತಾ ಪ್ರಚರಿಷ್ಯತಿ ||.೭ ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವಸಿ 11೩೮॥ “ಮನೋಹರವಾದ, ಪುಣ್ಯಕಾರಕವಾದ ಈ ಶ್ಲೋಕಬದ್ದ ರಾಮ ಕಥೆಯನ್ನು ನೀನು ಬಣ್ಣಿಸು! ಗಿರಿನದಿಗಳು ಭೂಲೋಕದಲ್ಲಿರುವವರೆಗೆ ರಾಮ ಕಥೆಯು ಪ್ರಚಾರದಲ್ಲಿ ಉಳಿಯುವದು. ನೀನು ರಚಿಸಿದ ರಾಮಕಥೆಯು ಲೋಕದಲ್ಲಿರುವ ವರೆಗೆ (ನಿನ್ನ ಕ್ರೋಧದ ಕಾರಣದಿಂದ) ಕೆಳಮಟ್ಟದಲ್ಲಿರಲು ಯೋಗ್ಯನಾದ ನೀನು ಎಲ್ಲರಿಗಿಂತ ಉನ್ನತಮಟ್ಟದಲ್ಲಿದ್ದ ನನ್ನ ಲೋಕದಲ್ಲಿ ವಾಸವಾಗುವೆ!” - ಬ್ರಹ್ಮದೇವನ ಆಜ್ಞೆಯನ್ನು ತಲೆಬಾಗಿ ಮನ್ನಿಸಿ, ವಾಲ್ಮೀಕಿಯು ರಾಮಾಯಣವನ್ನು ರಚಿಸಿದನು. ಬ್ರಹ್ಮದೇವನ ಶಬ್ದಗಳು ವರದಾನದಂತಿದ್ದರೂ ಅದರ ಉಲ್ಲೇಖವು 'ವರ'ವೆಂದು ಸ್ಪಷ್ಟವಿಲ್ಲ; ಅದಕ್ಕಾಗಿ ಆ ಶಬ್ದಗಳು ಆಶೀರ್ವಾದದ ಸಮವಾಗಿ 'ಸದಿಚ್ಛೆಯನ್ನು ವ್ಯಕ್ತಪಡಿಸುವಂತಾಗಿವೆ. ಇದನ್ನು ವರವೆಂದು ಬಗೆದರೆ ಇದು “ಅಯಾಚಿತ' ವರವಾಗಿದೆ.