ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೩೩


ಋಷೀಣಾಂ ದೇವತಾನಾಂ ಚ ಗಂಧರ್ವಾಪ್ಸರಸಾಂ ತಥಾ |
ನಾಗಾನಾಮಥ ಯಕ್ಷಾಣಾಂ ರಾಜ್ಞಾಂ ಚ ರಜನೀಚರ ‖೬೨‖
ಯಚ್ಚ ಪಾಪಂ ಕೃತಂ ಮೋಹಾದವಲಿಪ್ತೇನ ರಾಕ್ಷಸ |
ನೂನಂ ತೇ ವಿಗತೋ ದರ್ಪಃ ಸ್ವಯಂಭೂವರದಾನಜಃ |
ತಸ್ಯ ಪಾಪಸ್ಯ ಸಂಪ್ರಾಪ್ತಾ ವ್ಯುಷ್ಟಿರದ್ಯ ದುರಾಸದಾ ‖೬೩‖

“ಹೇ ನಿಶಾಚರನೇ, ಬ್ರಹ್ಮದೇವನ ವರದಿಂದ ಮುಕ್ತನಾಗಿದ್ದ ನೀನು,
ಮೂರ್ಖತೆಯಿಂದ ಋಷಿ, ದೇವತೆ, ಗಂಧರ್ವ, ಅಪ್ಸರೆಯರು, ನಾಗ, ಯಕ್ಷ
ಮತ್ತು ರಾಜರುಗಳನ್ನು ಪೀಡಿಸಿರುವೆ. ಬ್ರಹ್ಮದೇವನ ವರದಿಂದ ಉಂಟಾದ
ನಿನ್ನ ಅಹಂಕಾರವು ನಿಜವಾಗಿಯೂ ಇಂದು ನಾಶವಾಗುವದು.”

ಯುದ್ಧಕಾಂಡ/೧೨೩

ಸುಗ್ರೀವ, ವಿಭೀಷಣ, ಅನೇಕ ವಾನರರು, ಋಕ್ಷ (ಕರಡಿ) ಮುಂತಾದವರನ್ನು
ಕೂಡಿಕೊಂಡು, ರಾಮನು ಸೀತೆಯ ಸಹಿತ ಕುಬೇರನ ಪುಷ್ಪಕವಿಮಾನವನ್ನು ಏರಿದನು.
ಆತನ ಅಪ್ಪಣೆಯಂತೆ ಆ ವಿಮಾನವು ಆಕಾಶದಲ್ಲಿ ಸಂಚರಿಸ ಲಾರಂಭಿಸಿತು; ಆಗ
ರಾಮನು ಸೀತೆಯನ್ನು ಕುರಿತು “ವೈದೇಹಿ, ಇತ್ತ ಅವಲೋಕಿಸು! ಕೈಲಾಸಶಿಖರದಂತೆ
ಭಾಸವಾಗುವ ಈ ತ್ರಿಕುಟಾಚಲದ ಶಿಖರದ ಮೇಲೆ, ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ
ಈ ಲಂಕೆಯನ್ನು! ಅದೇ ರೀತಿ ವಾನರರು ಮತ್ತು ರಾಕ್ಷಸರಲ್ಲಿ ನಡೆದ ಘೋರ
ಹತ್ಯಾಕಾಂಡದಿಂದಾದ ರಕ್ತ-ಮಾಂಸಗಳ ಕೆಸರಿನ ಮಡುವುಗಳನ್ನು ಅವಲೋಕಿಸು!
ಏಷ ದತ್ತವರಂ ಶೇತೇ ಪ್ರಮಾಥೀ ರಾಕ್ಷಸೇಶ್ವರಃ |
ತವ ಹೇಗೋರ್ವಿಶಾಲಾಕ್ಷಿ ನಿಹತೋ ರಾವಣೋ ಮಯಾ ‖೫‖

“ಹೇ ವಿಶಾಲನಯನೇ, ವರ ಪಡೆದು ಮಹಾಬಲಾಢ್ಯನಾದ ರಾಕ್ಷಸಾಧಿಪತಿ
ರಾವಣನು ನಿನ್ನ ಕಾರಣದಿಂದ ಇಲ್ಲಿಯೇ ವಧಿಸಲ್ಪಟ್ಟು ಭೂಮಿಗೆರಗಿದನು.”

ದೇವತೆಗಳು

ಉತ್ತರಕಾಂಡ/೧೮

ವೇದವತಿಯು ಅಗ್ನಿಪ್ರವೇಶವನ್ನು ಮಾಡಿದನಂತರ, ರಾವಣನು ಪುಷ್ಪಕ
ವಿಮಾನದಲ್ಲಿ ಕುಳಿತು ಪೃಥ್ವಿಯ ಪರ್ಯಟನಕ್ಕೆ ಹೊರಟನು. 'ಉಶಿರಬೀಜ'ವೆಂಬ