ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ದೇಶದಲ್ಲಿ ಮರುತರಾಜನು ದೇವತೆಗಳ ಸಹಿತಾಗಿ ಯಜ್ಞವನ್ನು ಮಾಡುತ್ತಿರುವದನ್ನು
ರಾವಣನು ಕಂಡನು. ಬೃಹಸ್ಪತಿಯ ಬಂಧುವಾದ ಸಂವರ್ತ ಮಹರ್ಷಿಯು
ಅಲ್ಲಿ ಪುರೋಹಿತಾಗಿದ್ದನು,
ದೃಷ್ಟ್ವಾ ದೇವಾಸ್ತು ತದ್ರಕ್ಷೋ ವರದಾನೇನ ದುರ್ಜಯಮ್ |
ತಿರ್ಯಗ್ಯೋನಿಂ ಸಮಾವಿಷ್ಟಾಸ್ತಸ್ಯ ಘರ್ಷಣಭೀರವಃ ‖೪‖

ವರಪ್ರಾಪ್ತಿಯ ಮೂಲಕ ಜಯಿಸಲಸಾಧ್ಯವಾದ ಆ ರಾಕ್ಷಸನನ್ನು ಕಂಡ
ಕೂಡಲೇ ಆತನಿಂದ ಹಲ್ಲೆ ನಡೆಯಬಹುದೆಂಬ ಭಯದಿಂದ ದೇವತೆಗಳು
ಪಕ್ಷಿಗಳ ರೂಪವನ್ನು ಧರಿಸಿದರು. ಇಂದ್ರನು ನವಿಲುಪಕ್ಷಿಯಾದನು; ಯಮನು
ಕಾಗೆಯಾದನು; ಧನಾಧ್ಯಕ್ಷನಾದ ಕುಬೇರನು ಓತಿಕೇತರೂಪವನ್ನು ಧರಿಸಿದನು.
ವರುಣನು ಹಂಸರೂಪವನ್ನು ಸ್ವೀಕರಿಸಿದನು.

ಮರುತರಾಜ

ಉತ್ತರಕಾಂಡ/೧೮

ಯಜ್ಞಮಂಟಪದಲ್ಲಿ ಪ್ರವೇಶಿಸಿ ರಾವಣನು ಮರುತರಾಜನಿಗೆ “ಯುದ್ಧಕ್ಕೆ
ಸಜ್ಜಾಗು! ಅಥವಾ ಪರಾಭವವನ್ನು ಒಪ್ಪಿಕೊ!” ಎಂದು ಆಹ್ವಾನಿಸಿದನು. ಆಗ
ಮರುತರಾಜನು “ನೀನು ಯಾರು?” ಎಂದು ಖೇಳಿದಾಗ ಗರ್ವೋನ್ಮತ್ತನಾದ
ರಾವಣನು ತಾನು ರಾಕ್ಷಸಶ್ರೇಷ್ಠನಿದ್ದು, ಬಂಧುವಾದ ಕೂಬೇರನನ್ನು ಸೋಲಿಸಿ
ಆತನ ಪುಷ್ಪಕವಿಮಾನವನ್ನು ಕಸಿದುತಂದಿದ್ದೇನೆಂದು ಹೇಳಿ, ತನ್ನಂಥ ಬಲಾಢ್ಯ
ರಾಕ್ಷಸಾಧಿಪತಿಯನ್ನು ಗುರುತಿಸದಿರುವ, ಮರುತರಾಜನ ಅಪಹಾಸವನ್ನು
ಮಾಡಿದನು. ಆಗ ಮರುತರಾಜನು, “ಹಿರಿಯ ಬಂಧುವನ್ನು ರಣರಂಗದಲ್ಲಿ
ಗೆದ್ದ ನೀನು ಧನ್ಯನು! ನಿನ್ನಂತೆ ಸ್ತುತಿಗೆ ಯೋಗ್ಯರು ಬೇರೆ ಯಾರೂ ಇರಲಿಕ್ಕಿಲ್ಲ!”
ಎಂದನು.
ಕಂ ತ್ವಂ ಪ್ರಾಕ್ಕೇವಲಂ ಧರ್ಮಂ ಚರಿತ್ವಾ ಲಬ್ಧ ವಾನ್ವರಮ್ ‖೧೨‖

“ಈ ಮೊದಲು ಕೇವಲ ತಪಸ್ಸನ್ನಾಚರಿಸಿ ಅದೆಂಥ ವರವನ್ನು ಪಡೆದು
ಕೊಂಡಿರುವೆ? ಈಗ ನೀನು ತೋರಿಬರುವ ಹಾಗೆ ಈ ಮೊದಲು ಎಂದೂ ಕಂಡು
ಬಂದಿಲ್ಲ. ಎಲೈ ದುರ್ಬುದ್ಧಿಯೇ, ನನ್ನ ಕೈಯಿಂದ ನೀನು ಇಂದು ಜೀವಿತವಾಗಿ
ಹಿಂದಿರುಗಲಾರೆ! ನನ್ನ ತೀಕ್ಷ್ಣಬಾಣಗಳಿಂದ ನಾನು ನಿನ್ನನ್ನು ಯಮಸದನಕ್ಕಟ್ಟುವೆನು.”