ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೩೭ ನಾ ಹತ್ವಾ ಸಮರೇ ಶತ್ರು ವಿಷ್ಣುಃ ಪ್ರತಿನಿವರ್ತತೇ | ದುರ್ಲಭಶ್ಚವ ಕಾಮೋದ್ಯ ಗುಪ್ತಾದ್ಧಿ ರಾವಣಾತ್ ೧೮॥ “ಸಂಗ್ರಾಮದಲ್ಲಿ ಶತ್ರುವನ್ನು ವಧಿಸದೇ ವಿಷ್ಣುವು ಹಿಂತಿರುಗುವದಿಲ್ಲ. ವರಪ್ರಾಪ್ತಿಯಿಂದ ರಕ್ಷಿತನಾದ ರಾವಣನೊಡನೆ ಯುದ್ಧ ನಡೆದರೆ ಈ ಸಂಕಲ್ಪವು ಈಡೇರುವದು ದುಸ್ತರವಾಗುತ್ತದೆ. ಹೀಗಿರುವದರಿಂದ ಆ ರಾಕ್ಷಸನಿಗೆ ಆತನ ಮೃತ್ಯುವಿನ ಕಾರಣವನ್ನು ತಿಳಿಸಿ, ತಕ್ಕ ಕಾಲದಲ್ಲಿ ಆತನ ವಧೆಯನ್ನು ನಾನೇ ಪೂರೈಸಿ ದೇವದಾನವರನ್ನು ಸಂತೋಷಗೊಳಿಸುವೆ'ನೆಂದು ಇಂದ್ರನಿಗೆ ವಿಷ್ಣುವು ಆಶ್ವಾಸನೆಯನ್ನಿತ್ತನು. ಸದ್ಯ ಭಯರಹಿತನಾಗಿ ದೇವತೆಗಳನ್ನು ಕೂಡಿಕೊಂಡು ರಾವಣನೊಡನೆ ಯುದ್ಧ ಮಾಡಲು ಹೇಳಿದನು. ಉತ್ತರಕಾಂಡ೨೯ ರಾವಣನೊಡನೆ ಯುದ್ಧ ನಡೆದಾಗ ಇಂದ್ರನು ದೇವತೆಗಳಿಗೆ ಈ ರೀತಿ ನುಡಿದನು: “ರಾವಣನನ್ನು ನೀವು ಜೀವಿತವಾಗಿ ಸೆರೆಹಿಡಿಯಿರಿ! ಗಾಳಿವೇಗದಿಂದ ಚಲಿಸುವ ರಥದ ಸಹಾಯದಿಂದ ಈ ಅತಿಬಲಾಢ ರಾಕ್ಷಸನು ಸೈನ್ಯದಿಂದ ಹೊರಟು ಹೋಗಬಹುದು. ನಷ ಹಂತುಂ ಶಕ್ಟೋದ್ಯ ವರದಾನಾತ್ತುನಿರ್ಭಯಃ | ತದ್ ಗ್ರಹಿಷ್ಕಾಮಹೇ ರಕ್ಷೆ ಯತ್ತಾ ಭವತ ಸುಯುಗೇ ॥೧೫॥ "ವರಪ್ರಾಪ್ತಿಯಿಂದ ಈತನಿಗೆ ಭಯವಿಲ್ಲದಾಗಿದೆ: ಆದ್ದರಿಂದ ಈಗ ಈತನ ವಧೆಯಾಗುವಂತಿಲ್ಲ. ನೀವು ರಣರಂಗಕ್ಕೆ ಸಿದ್ಧವಾಗಿರಿ! ನಾವು ಆ ರಾಕ್ಷಸರನ್ನು ನಿಗ್ರಹಿಸೋಣ!” ಸಹಸ್ರಾರ್ಜುನ ಉತ್ತರಕಾಂಡ/೩೨ ಸಹಸ್ರಾರ್ಜುನ ಮತ್ತು ರಾವಣ ಇವರಲ್ಲಿ ಗದಾಯುದ್ಧವಾಗುತ್ತಿದ್ದಾಗ ಕ್ರೋಧಗೊಂಡ ಸಹಸ್ರಾರ್ಜುನನು ತನ್ನ ಗದೆಯನ್ನು ರಾವಣನ ಹರವಾದ ಎದೆಯ ಮೇಲೆ ಚೆಲ್ಲಿದನು. ಆದರೆ-