ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C೩೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ವರದಾನಕೃತತ್ರಾಣೇ ಸಾ ಗದಾ ರಾವಣೋರಸಿ | ದುರ್ಬಲೇವ ಯಥಾ ವೇಗಂ ದ್ವಿಧಾಭೂತಾಪತಿ [೬೧ ವರದಾನದಿಂದ ರಕ್ಷಿತನಾಗಿದ್ದ ಆ ರಾವಣನ ಎದೆಯ ಮೇಲೆ ಆ ಗದೆಯು ಪ್ರಹಾರ ಮಾಡಲು ಅಸಮರ್ಥವಾಯಿತು; ತನ್ನ ವೇಗದ ಪ್ರಭಾವದಿಂದ ಯಾವ ಪರಿಣಾಮವನ್ನುಂಟುಮಾಡಲೂ ಆಗಲಿಲ್ಲ. ಆ ಗದೆಯೇ ಇಬ್ಬಾಗವಾಗಿ ಮುರಿದು ಭೂಮಿಗೆ ಬಿದ್ದಿತು. ಗದೆಯ ಏಟಿನಿಂದ ರಾವಣನು ಕಳವಳಗೊಂಡನು; ಆಗ ಸಹಸ್ರಾರ್ಜುನನು ರಾವಣನ ಮೇಲೆ ಎರಗಿ ಆತನನ್ನು ಕಟ್ಟಿಹಾಕಿದನು. ರಾಕ್ಷಸರ ವಿರೋಧವನ್ನು ಲೆಕ್ಕಿಸದೆ ಅವರನ್ನು ದಿಕ್ಕೇಡುಮಾಡಿ ರಾವಣನನ್ನು ತನ್ನ ನಗರಕ್ಕೆ ಕೊಂಡೊಯ್ದನು. ಮಾಲ್ಯವಾನ ಯುದ್ಧಕಾಂಡ/೩೫ ರಾವಣನ ಅಜ್ಜನಾದ ವಾಲ್ಯವಾನನು ಅತಿಬುದ್ದಿವಂತನಾಗಿದ್ದನು. ರಾವಣನು ರಾಮನೊಡನೆ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಆತನ ಅನಿಸಿಕೆ ಇತ್ತು. ತನ್ನ ಅನಿಸಿಕೆಯನ್ನು ರಾವಣನು ಮನ್ನಿಸಬೇಕೆಂದು ಪ್ರಯತ್ನಿಸಿದನು. ರಾವಣನಿಗೆ ಈ ರೀತಿ ನುಡಿದನು- ದೇವದಾನವಯಕ್ಷೇದ್ಯೋ ಗೃಹೀತಶ್ವ ವರಸ್ಮಯಾ | ಮನುಷ್ಯಾ ವಾನರಾ ಋಕ್ಷಾ ಗೋಲಾಂಗೂಲ ಮಹಾಬಲಾಃ | ಬಲವಂತ ಆಹಾಗಮ್ಯ ಗರ್ಜಂತಿ ದೃಢವಿಕ್ರಮಾಃ |೨೩|| ದೇವತೆಗಳು-ದಾನವರು-ಯಕ್ಷರು ಇವರಿಂದ ಸಾವು ಬಾರದಂತೆ ನೀನು ಬ್ರಹ್ಮನಿಂದ ವರವನ್ನು ಪಡೆದಿರುವೆ; ಆದರೆ ಬಲಾಢರಾದ ಮನುಷ್ಯರು, ವಾನರರು, ಕರಡಿಗು, ಗೋಲಾಂಗೂಲಗಳು ಇವರೆಲ್ಲ ಇಲ್ಲಿ ಆಗಮಿಸಿದ್ದಾರೆ. ಆ ಮಹಾ ಪರಾಕ್ರಮಿಗಳಾದ, ಬಲಾಡ್ಯರಾದ ಮನುಷ್ಯ ಮುಂತಾದವರು ಇಲ್ಲಿಗೆ ಬಂದು ಆರ್ಭಟಿಸುತ್ತಿದ್ದಾರೆ. ಇದು ರಾಕ್ಷಸರ ವಿನಾಶಕಾಲವು ಸಮೀಪಿಸಿದ ಅಪಾಯದ ಚಿಹ್ನೆಯೆಂದು ಮಾಲ್ಯವಾನನು ಸೂಚಿಸಿದನು. ಅಹಂಕಾರದಿಂದ ಮದವೇರಿದ ರಾವಣನಿಗೆ ಅದು ಹಿಡಿಸಲಿಲ್ಲ.