ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನಿನಗೆ ಭಯವಿದೆ; ಎಚ್ಚರಿಕೆ!' ಎಂದು ಬ್ರಹ್ಮದೇವನು ನುಡಿದ ಮಾತು ಈಗ
ನಿಜವಾಗುವ ಪ್ರಸಂಗವು ನನ್ನ ಮೇಲೆ ಬಂದಿದೆ.”
ದೇವದಾನವಗಂಧರ್ವೈ ಯಕ್ಷರಾಕ್ಷಸಪನ್ನಗೈಃ |
ಅವಧ್ಯತ್ತ್ವಂ ಮಯಾ ಪ್ರೋಕ್ತಂ ಮಾನುಷ್ಯೇಭ‍್ಯೋ ನ ಯಾಚಿತಮ್ ‖೭‖

“ದೇವತೆಗಳು, ದಾನವರು, ಯಕ್ಷ, ರಾಕ್ಷಸರು, ಗಂಧರ್ವರು, ನಾಗರು
ಇವರಿಂದ ನನ್ನ ವಧೆಯಾಗಕೂಡದೆಂದು ನಾನು ಬೇಡಿಕೊಂಡೆ; ಆದರೆ
ಮಾನವನಿಂದ ವಧೆಯಗಬಾರದೆಂಬ ವರವನ್ನು ಬೇಡಿಕೊಂಡಿಲ್ಲ” ಎಂದು
ರಾವಣನು ಈಗ ಉದ್ವಿಗ್ನನಾಗಿದ್ದಾನೆ.

ಯುದ್ಧಕಾಂಡ/೯೨

ಮೇಘನಾದನ (ಇಂದ್ರಜಿತು) ವಧೆಯಾದ್ದರಿಂದ ಅತ್ಯಂತ ಸಂತಾಪ
ಕ್ಕೊಳಗಾದ ರಾವಣನು, ತನ್ನ ರಾಕ್ಷಸರು ದಿಕ್ಕೆಡಬಾರದೆಂಬ ಉದ್ದೇಶದಿಂದ
ಅವರಿಗೆ ಈ ರೀತಿ ಎಂದನು- “ಸಹಸ್ರಾರು ವರ್ಷಗಳವರೆಗೆ ಅತಿ ಉಗ್ರವಾದ
ತಪಸ್ಸನ್ನಾಚರಿಸಿ ಬ್ರಹ್ಮದೇವನನ್ನು ಆಗಾಗ ಪ್ರಸನ್ನಗೊಳಿಸಿದ್ದೇನೆ.”
ತಸ್ಯೈವ ತಪಸೋ ವ್ಯುಷ್ಟ್ಯಾ ಪ್ರಸಾದಾಶ್ಚ ಸ್ವಯಂಭುವಃ |
ನಾಸುರೇಭ್ಯೋ ನ ದೇವೇಭ್ಯೋ ಭಯಂ ಮಮ ಕದಾಚನ ‖೨೯‖

“ಆ ತಪಸ್ಸಿನಿಂದಲೇ ನನಗೆ ಬ್ರಹ್ಮದೇವನ ಪ್ರಸಾದವು ಪ್ರಾಪ್ತವಾಯಿತು. ಆ
ಪ್ರಸಾದದಿಂದ 'ಅಸುರ ಮತ್ತು ದೇವತೆಗಳಿಂದ ನನಗೆ ಎಂದಿಗೂ ಭಯವುಂಟಾಗ
ಲಾರದು' ಎಂಬ ವರವು ನನಗೆ ದೊರಕಿತು.
“ಬ್ರಹ್ಮದೇವನಿಂದ ಪಡೆದ ಕವಚವನ್ನು ಧರಿಸಿ ಸಂಗ್ರಾಮದಲ್ಲಿ
ರಥಾ ರೂಢನಾದ ನನ್ನ ಮೇಲೆ ಏರಿಬರುವ ಸಾಮರ್ಥ್ಯವು ಪ್ರತ್ಯಕ್ಷ ಇಂದ್ರನಿಗೂ
ಇರುವದಿಲ್ಲ. ಸುರಾಸುರರ ಯುದ್ಧದ ಪ್ರಸಂಗದಲ್ಲಿ ಇಂದ್ರನು ನನಗೆ
ಕೊಟ್ಟ ಪ್ರಚಂಡ ಬಿಲ್ಲನ್ನು ರಾಮ-ಲಕ್ಷ್ಮಣರನ್ನು ವಧಿಸಲೋಸುಗ ನೀವು ಎತ್ತಿ
ಹಿಡಿಯಿರಿ!”