ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೪೩


ಮಾರೀಚ ಮೊದಲಾದ ರಾಕ್ಷಸರಿಂದ ಮಾಡಿಸುತ್ತಿದ್ದಾನೆ; ಆದ್ದರಿಂದ ಅವರ
ಪಾರುಪತ್ಯ ಮಾಡಲು ನೀನು ರಾಮನನ್ನು ನನ್ನ ಜೊತೆ ಕಳುಹಿಸು!”

ಉತ್ತರಕಾಂಡ/೧೪

ಅಹಂಕಾರದಿಂದ ಉನ್ಮತ್ತನಾದ ರಾವಣನು ತನ್ನ ಆರು ಜನ ಅಮಾತ್ಯ
ರೊಡನೆ ಕೈಲಾಸಪರ್ವತಕ್ಕೆ ಹೋದನು. ಅಲ್ಲಿ ಆತನ ಅಣ್ಣನಾದ ಧನಾಧ್ಯಕ್ಷ
ಕುಬೇರನು ರಾಜ್ಯವನ್ನಾಳುತ್ತಿದ್ದನು. ರಾವಣನನ್ನು ಪ್ರತಿಭಟಿಸಲು ಆತನು ಯಕ್ಷ
ಸೈನ್ಯವನ್ನು ಕಳುಹಿಸಿದನು. ರಾವಣನು ಅವರೆಲ್ಲರನ್ನೂ ಸೋಲಿಸಿದನು. ಅನಂತರ
ರಾವಣನು ಪ್ರವೇಶ ದ್ವಾರದ ಬಳಿ ಬಂದಾಗ ಅಲ್ಲಿದ್ದ ದ್ವಾರಪಾಲಕರು ತಡೆದರೂ
ರಾವಣನು ಅವರನ್ನು ಲೆಕ್ಕಿಸಲಿಲ್ಲ.
ತತ್ತಸ್ತೋ ರಣಮುತ್ಪಾಟ್ಯ ತೇನ ಯಕ್ಷೇಣ ತಾಡಿತಃ |
ರುಧಿರಂ ಪ್ರಸ್ರವನ್ಭಾತಿ ಶೈಲೋ ಧಾತುಸ್ರವೈರಿವ ‖೨೭‖
ಸ ಶೈಲ ಶಿಖರಾಭೇಣ ತೋರಣೇನ ಸಮಾಹತಃ |
ಜಗಾಮ ನ ಕ್ಷತಿಂ ವೀರೋ ವರದಾನ್ಸ್ವಯಂಭುವಃ ‖೨೮‖

ಆಗ ದ್ವಾರದ ಬಳಿಯಲ್ಲಿದ್ದ ದಂಡವನ್ನೆತ್ತಿಕೊಂಡು ಆ ಯಕ್ಷನು ರಾವಣನಿಗೆ
ಹೊಡೆದನು.ರಾವಣನ ದೇಹದಿಂದ ರಕ್ತಸ್ರಾವವು ಶುರುವಾಯಿತು. ಆಗ ರಾವಣನು
ಧಾತುಸ್ರಾವದಿಂದ ಶೋಭಿಸುವಂತಹ ಪರ್ವತದಂತೆ ಕಂಗೊಳಿಸಿದನು.
ಪರ್ವತಶಿಖರದಷ್ಟು ಗಾತ್ರದ ದಂಡದಿಂದ ಹೊಡೆದಿದ್ದರೂ ಬ್ರಹ್ಮದೇವನ ವರದಿಂದ
ಆ ವೀರನಿಗೆ ಗಾಯದ ಕಲೆ ಕೂಡ ಆಗಲಿಲ್ಲ; ಇಷ್ಟೇ ಅಲ್ಲದೆ ರಾವಣನು ಅದೇ
ದಂಡವನ್ನು ತಾನ್ನು ಎತ್ತಿಕೊಂಡು ಆ ಯಕ್ಷನಿಗೆ ಹೊಡೆದು ನುಚ್ಚುನೂರು
ಮಾಡಿದನು. ರಾವಣನಿಗೆ ಯಾರಿಂದ ಮರಣಭಯವಿಲ್ಲ ಎಂಬುದರ ಬಗ್ಗೆ ಬ್ರಹ್ಮ
ದೇವನ ವರದಲ್ಲಿ ಉಲ್ಲೇಖವಿದೆ. ಮೇಲೆ ಕೊಟ್ಟ ಶ್ಲೋಕಗಳಲ್ಲಿ ತುಸು ಭಿನ್ನತೆಯು
ಕಂಡುಬರುತ್ತದೆ. ಎಲ್ಲ ಪ್ರಾಣಿಗಳ ಉಲ್ಲೇಖವು ಎಲ್ಲೆಡೆಯಲ್ಲಿ ಸಮಾನವಾಗಿಲ್ಲ.
ಮನುಷ್ಯ, ವಾನರರು, ಕರಡಿ ಇವರ ಉಲ್ಲೇಖವು ಮಾತ್ರ ಎಲ್ಲಿಯೂ ಇಲ್ಲ. ವರ
ಪಡೆಯಬೇಕೆಂಬ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನು ಕೈಕೊಂಡ ಕಾರಣ,
ರಾವಣನಿಗೆ ದೊರೆತ ವರವು 'ಯಾಚಿತ' ವರವಾಗಿದೆ.
ಈ ವರವನ್ನು ಹೊರತುಪಡಿಸಿ ಇನ್ನು ಎರಡು-ಮೂರು ವರಗಳು ಬ್ರಹ್ಮ
ದೇವನಿಂದ ರಾವಣನಿಗೆ ದೊರೆತದ್ದು ಕಂಡುಬರುತ್ತದೆ.