ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಉತ್ತರಕಾಂಡ/೯

ರಾವಣನ ತಾಯಿಯಾದ ಕೈಕಸಿಯು, ವೈಶ್ರವಣನಂತೆ ಆಗಲು ರಾವಣನಿಗೆ
ಯತ್ನಿಸಲು ಉಪದೇಶಿಸಿದಳು. ತಾಯಿಯ ಉಪದೇಶಕ್ಕೆ ತಲೆಬಾಗಿ ಅವಳ
ಇಚ್ಛೆಯನ್ನು ಗೌರವಿಸುವಂತೆ ಪ್ರತಿಜ್ಞೆಯನ್ನು ರಾವಣನು ಮಾಡಿದನು. ಬ್ರಹ್ಮ
ದೇವನನ್ನು ಪ್ರಸನ್ನಗೊಳಿಸಲು ಗೋಕರ್ಣಕ್ಕೆ ಹೊಗಿ ಘೋರ ತಪಸ್ಸನ್ನು
ಆಚರಿಸಬೇಕೆಂದು ನಿಶ್ಚಯಿಸಿದನು.
ಸ ರಾಕ್ಷಸಸ್ತತ್ರ ಸಹಾನುಜಸ್ತದಾ ತಪಶ್ಚಚಾರಾತುಲಮುಗ್ರವಿಕ್ರಮಃ |
ಅತೋಷ ಯಚ್ಛಾಪಿ ಪಿತಾಮಹಂ ವಿಭುಂ ದದೌ ಸ ತುಷ್ಟಶ್ಜಾವರಾಞ್ಜಯಾವಹಾನ್ ‖೪೮‖

ಬಂಧುಗಳನ್ನೊಳಗೊಂಡು ಆ ಪರಾಕ್ರಮಿಯಾದ ರಾಕ್ಷಸನು, ಅಲ್ಲಿ ಘೋರ
ತಪಸ್ಸನ್ನಾಚರಿಸಿ ಬ್ರಹ್ಮದೇವನನ್ನು ಪ್ರಸನ್ನಗೊಳಿಸಿದನು. ಸಂತೋಷಗೊಂಡ
ಬ್ರಹ್ಮದೇವನು ರಾವಣನಿಗೆ ಜಯಪ್ರದವಾದ ವರಗಳನ್ನು ಕೊಟ್ಟನು.

ಉತ್ತರಕಾಂಡ/೧೦

ಗರುಡ, ನಾಗ, ಯಕ್ಷ, ದೈತ್ಯ, ದಾನವ, ರಾಕ್ಷಸ ಮತ್ತು ದೇವತೆಯರಿಂದ
ತನಗೆ ಮರಣ ಬರಬಾರದೆಂದು ವರವನ್ನು ರಾವಣನು ಬ್ರಹ್ಮನ ಬಳಿ ಬೇಡಿದಾಗ
ಆ ವರವನ್ನು ಕೊಡಲಾಯಿತು. ಅದಲ್ಲದೆ-
ಶ್ರುಣು ಚಾಪಿ ವರೋ ಭೂಯಂ ಪ್ರೀತಸ್ಯೇಹ ಶುಭೋ ಮಮ |
ಹುತಾನಿ ಯಾನಿ ಶೀರ್ಷಾಣಿ ಪೂರ್ವಮಗ್ನೌ ತ್ವಯಾನಘ ‖೨೩‖
ಪುನಸ್ತಾನಿ ಭವಿಷ್ಯಂತಿ ತಥೈವ ತವ ರಾಕ್ಷಸ |
ವಿತರಾಮಿಹ ತೇ ಸೌಮ್ಯ ವರಂ ಚಾನ್ಯಂ ದುರಾಸದಮ್ ‖೨೪‖
ಛಂದತಸ್ತವ ರೂಷಂ ಚ ಮನಸಾ ಯದ್ಯಥೇಪ್ಸಿತಮ್ ‖೨೫‖

“ನಿನ್ನಲ್ಲಿ ಪ್ರಸನ್ನನಾದ ನಾನು ಇನ್ನೊಂದು ವರವನ್ನು ಕೊಡುತ್ತೇನೆ; ಕೇಳು! ಹೇ
ನಿಷ್ಟಾಪನೇ, ಈ ಮೊದಲು ನೀನು ನಿನ್ನ ಶಿರಗಳನ್ನು ಅಗ್ನಿಯಲ್ಲಿ ಸಮರ್ಪಿಸಿರುವೆ; ಆ
ಶಿರಗಳು ನಿನಗೆ ಮೊದಲಿದ್ದಂತೆ ಪ್ರಾಪ್ತವಾಗುವವು! ಹೇ ವಿನಯಸಂಪನ್ನನೇ, ನೀನು, ನಿನ್ನ
ಇಚ್ಛೆಯನುಸಾರ, ನಿನಗ ಇಷ್ಟವಿದ್ದ ರೂಪವನ್ನು ಧರಿಸಬಹುದಾದ ಇನ್ನೊಂದು ದುರ್ಲಭ
ವಾದ ವರವನ್ನು ನಾನು ನಿನಗೆ ಕೊಡುತ್ತಿದ್ದೇನೆ” ಎಂದು ಬ್ರಹ್ಮದೇವನು ಹೇಳಿದನು.
ಇದು 'ಅಯಾಚಿತ' ವರವಾಗಿದೆ.