ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೪೭


ಭಯಂ ತ್ಯಜತ ಭದ್ರಂ ವೋ ಹಿತಾರ್ಥಂ ಯುಧಿ ರಾವಣಮ್ |
ಸಪುತ್ರಪೌತ್ರಂ ಸಾಮಾತ್ಯಂ ಸಮಂತ್ರಿಜ್ಞಾತಿಬಾಂಧವಮ್ ‖೨೮‖
ಹತ್ವಾ ಕ್ರೂರಂ ದುರಾಧರ್ಷಂ ದೇವರ್ಷೀಣಾಂ ಭಯಾವಹಮ್ |
ದಶವರ್ಷಸಹಸ್ರಾಣಿ ದಶವರ್ಷಶತಾನಿ ಚ ‖೨೯‖
ವತ್ಸ್ಯಾಮಿ ಮಾನುಷೇ ಲೋಕೇ ಪಾಲಯನ್ ಪೃಥಿಮೀಮಿಮಾಮ್ |
ಏವಂ ದತ್ವಾ ವರಂ ದೇವೋ ದೇವಾನಾಂ ವಿಷ್ಣುರಾತ್ಮವಾನ್ ‖೩೦‖

“ನಿಮಗೆ ಶುಭವಾಗಲಿ! ಭಯಪಡಬೇಡಿರಿ! ದೇವ-ಋಷಿಗಳಿಂದಲೂ
ಸೋಲದ ಈ ಭಯಂಕರ ರಾವಣನನ್ನು ಆತನ ಪುತ್ರಪೌತ್ರ, ಅಮಾತ್ಯ, ಮಂತ್ರಿ,
ಆಪ್ತಬಾಂಧವರೊಂದಿಗೆ ಸಂಹರಿಸುವೆನು. ನಿಮ್ಮ ಹಿತರಕ್ಷಣೆಗಾಗಿ ಆತನನ್ನು
ಕಾಳಗದಲ್ಲಿ ವಧಿಸಿ, ಆ ನಂತರ ಹನ್ನೊಂದು ಸಾವಿರ ವರ್ಷಗಳವರೆಗೆ ಮನುಷ್ಯ
ಲೋಕದಲ್ಲಿ ವಾಸಿಸುವೆನು” ಎಂಬ ವರವನ್ನು ದೇವತೆಗಳಿಗೆ ಅನುಗ್ರಹಿಸಿದನು.
ದೇವತೆಗಳ ಕೋರಿಕೆಯ ಮೇರೆಗೆ ಮನುಷ್ಯಲೋಕದಲ್ಲಿ ಜನ್ಮತಾಳಲು
ಅನುರೂಪರಾದವರೆಂದರೆ ದಶರಥರಾಜನ ಪತ್ನಿಯರು ಎಂದು ಮನದಲ್ಲಿ
ನಿರ್ಧರಿಸಿ ತನ್ನ ನಾಲ್ಕು ಅಂಶಗಳ ಪಿತನಾಗಲು ದಶರಥನು ಯೋಗ್ಯನೆಂದು
ನಿರ್ಧರಿಸಿದನು.
ಇದು 'ಯಾಚಿತ' ವರವಾಗಿದೆ.

೬. ? < ಜಯಾ, ಸುಪ್ರಭಾ

ಬಾಲಕಾಂಡ/೨೧

ವಸಿಷ್ಠ ಮುನಿಯು ದಶರಥನಿಗೆ ವಿಶ್ವಾಮಿತ್ರನ ಸಾಮರ್ಥ್ಯದ ಬಗ್ಗೆ ಹೇಳಿ,
ಕೊಟ್ಟ ವಚನವನ್ನು ನಿಜಗೊಳಿಸಲು ಆತನಿಗೆ ಪ್ರೇರಿಸುತ್ತಾನೆ.
ಮಾರೀಚ ಹಾಗೂ ಸುಬಾಹು ಎಂಬ ಇಬ್ಬರು ರಾಕ್ಷಸರು, ವಿಶ್ವಾಮಿತ್ರನ
ಯಜ್ಞದಲ್ಲಿ ವಿಘ್ನಗಳನ್ನು ತಂದು ನಾಶಗೊಳಿಸುತ್ತಿದ್ದರು. ಅವರ ಪಾರುಪತ್ಯವು
ವಿಶ್ವಾಮಿತ್ರನಿಗೆ ಅಸಾಧ್ಯವಿರಲಿಲ್ಲ; ಆದರೆ ಯಜ್ಞದೀಕ್ಷೆಯನ್ನು ಸ್ವೀಕರಿಸಿದಾತನಿಗೆ
ಕೆಲವು ನೀತಿ ಬಂಧನಗಳಿರುತ್ತವೆ. ತನ್ನ ಯಜ್ಞವು ನಿರ್ವಿಘ್ನವಾಗಿ ನೆರವೇರಬೇಕೆಂದು
ದಶರಥನ ಬಳಿ ವಿನಂತಿಸಲು ವಿಶ್ವಾಮಿತ್ರನು ಹೋದನು. ವಿಶ್ವಾಮಿತ್ರನ
ವಿನಂತಿಯನ್ನು ಕೇಳಿಕೊಳ್ಳುವ ಮುನ್ನವೇ ದಶರಥನು ಅದನ್ನು ಪೂರ್ತಿಗೊಳಿಸುವ
ವಚನವನ್ನು ನುಡಿದನು. ಆಗ ವಿಶ್ವಾಮಿತ್ರನು ಯಜ್ಞವನ್ನು ರಕ್ಷಿಸಲು ಮತ್ತು