ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೫೧


ಸಂತತಿಯಾಗಬೇಕೆಂಬ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನು ಆಚರಿಸಿದ
ಕಾರಣ ಅದು ಉದ್ದೇಶಪೂರಿತವಾಗಿದೆ. ಹೀಗಿರುವುದರಿಂದ ಸುಕೇತುವಿಗೆ ದೊರೆತ
ವರವು 'ಯಾಚಿತ' ವರವಾಗಿದೆ. ತಾಕಿಯು ವರವನ್ನು ಬೇಡಿಕೊಂಡು
ಉಲ್ಲೇಖವಿದೆ. ಅವಳಿಗೆ ದೊರೆತ ವರವು 'ಅಯಾಚಿತ'ವಾಗಿದೆ.

೯. ವಿಷ್ನು < ಕಶ್ಯಪ

ಬಾಲಕಾಂಡ/೨೯

ವಿಶ್ವಾಮಿತ್ರನು ರಾಮನಿಗೆ ಸಿದ್ಧಾಶ್ರಮದ ಕಥೆಯನ್ನು ಹೇಳುತ್ತಿದ್ದಾನೆ.
ಜನರ ಮನಸ್ಸು ತಪಸ್ಸಿನತ್ತ ಪ್ರವೃತ್ತಗೊಳ್ಳಬೇಕೆಂದು, ದೇವತೆಗಳಿಗೆ ಪೂಜ್ಯನಾದ
ಮಹಾತಪಸ್ವಿಯಾದ ವಿಷ್ಣುವು ಈ ಆಶ್ರಮದಲ್ಲಿ ಬಹು ವರ್ಷಗಳವರೆಗೆ ತಪಸ್ಸನ್ನಾ
ಚರಿಸಿದನು. ನೂರಾರು ಯುಗಗಳನ್ನು ಇಲ್ಲಿ ವಾಸಿಸಿ ಕಳೆದನು.
ವಾಮನಾವತಾರವನ್ನು ತಾಳುವ ಮೊದಲು ವಿಷ್ಣುವು ಈ ಆಶ್ರಮವನ್ನು
ಸ್ವೀಕರಿಸಿದ್ದನು. ಆತನು ತಪಶ್ಚರ್ಯೆಯಲ್ಲಿ ತೊಡಗಿದಾಗ ವಿರೋಚನನ ಪುತ್ರನಾದ
ಬಲಿಯು ಇಂದ್ರ ಹಾಗೂ ಮರುತ್-ಗಣ ಇವರನ್ನು ಗೆದ್ದು ಇಂದ್ರಪದವನ್ನು
ಪಡೆಯಲು ಯತ್ನಿಸಿದನು. ಬಲಿಯು ಒಂದು ಮಹಾಯಾಗವನ್ನು ಮಾಡಿದನು.
ಆಗ ಅಗ್ನಿ ಮೊದಲಾದ ಎಲ್ಲ ದೇವತೆಗಳು ವಿಷ್ಣುವು ವಾಸವಿದ್ದ ಆಶ್ರಮಕ್ಕೆ
ಬಂದರು. ಬಲಿಯ ವ್ರತ ಪೂರ್ತಿಗೊಳ್ಳುವ ಮೊದಲೇ ದೇವತೆಗಳ ಒಳಿತಿಗಾಗಿ,
ವಾಮನಾವತಾರವನ್ನು ತಾಳಿ ಬಲಿಯನ್ನು ನಿಯಂತ್ರಿಸಬೇಕೆಂದು ಬೇಡಿಕೊಂಡರು.
ಆಗ ಅಗ್ನಿಯಂತೆ ಪ್ರಖರನಾಗಿದ್ದ ಭಗವಾನ್ ಕಶ್ಯಪನು ಅದಿತಿಯೊಡನೆ ಅಲ್ಲಿಗೆ
ಬಂದನು. ಆತನು ವಿಷ್ಣುವನ್ನು ಸ್ತುತಿಸಿ ಈ ರೀತಿ ಎಂದನು: “ನಾನು ಆಚರಿಸಿದ
ತಪದ ಪ್ರಭಾವದಿಂದ ನಿನ್ನ ದೇಹದಲ್ಲಿ ಸಮಸ್ತ ಜಗತ್ತನ್ನು ಕಾಣುತ್ತಿದ್ದೇನೆ. ನೀನು
ಅನಾದಿಯೂ ಅತರ್ಕನೂ ಇರುವೆ. ನಾನು ನಿನಗೆ ಶರಣು ಬಂದಿದ್ದೇನೆ.”
ವರಂ ವರಯ ಭದ್ರಂ ತೇ ವರಾರ್ಹೋsಸಿ ಮತೋ ಮಮ ‖೧೪‖

“ವರವನ್ನು ಬೇಡಿಕೊ! ನಿನಗೆ ಮಂಗಳವಾಗಲಿ! ನೀನು ವರವನ್ನು ಬೇಡಲು
ಯೋಗ್ಯನಿರುವೆ” ಎಂದು ಶ್ರೀಹರಿಯು ಪ್ರಸನ್ನನಾಗಿ ಪಾಪವಿಮೋಚಿತನಾದ
ಕಶ್ಯಪನಿಗೆ ನುಡಿದನು. ಆಗ ಕಶ್ಯಪ ಮುನಿಯು-
ಅದಿತ್ಯಾ ದೇವತಾನಾಂ ಚ ಮಮ ಚೈವಾನುಯಾಚಿತಮ್ ‖೧೫‖
ವರಂ ವರದ ಸುಪ್ರೀತೋ ದಾತುಮರ್ಹಸಿ ಸುವ್ರತ |