ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

   
            ಪುತ್ರತ್ವಂ ಗಚ್ಛ ಭಗವನ್ನದಿತ್ಯಾ ಮಮ ಚಾನಘ ‖೧೬‖
            ಭ್ರಾತಾ ಭವ ಯವೀಯಾಂಸ್ತ್ವಂ ಶಕ್ರಸ್ಯಾಸುರಸೂದನ |
            ಶೋಕಾರ್ತಾನಾಂ ತು ದೇವಾನಾಂ ಸಾಹಾಯ್ಯಂ ಕರ್ತುಮರ್ಹಸಿ ‖೧೭‖
            ಅಯಂ ಸಿದ್ಧಾಶ್ರಮೋ ನಾಮ ಪ್ರಸಾದಾತ್ತೇ ಭವಿಷ್ಯತಿ ‖೧೮‖


"ಹೇ ವರಪ್ರದನೇ, ಅದಿತಿಯು, ದೇವತೆಯರು ಮತ್ತು ನಾನು ಕೂಡಿ, ಪ್ರಾರ್ಥಿಸಿದ ವರವನ್ನು ನೀವು ಪ್ರಸನ್ನರಾಗಿ ನನಗೆ ಕೊಡಿರಿ! ಹೇ ಸುವ್ರತನೇ, ಹೇ ಭಗವನ್, ಹೇ ಪಾಪರಹಿತನೇ, ನೀವು ನನ್ನ ಮತ್ತು ಅದಿತಿಯ ಪುತ್ರನಾಗಿ ಜನಿಸಿರಿ! ಹೇ ದೈತ್ಯನಾಶಕನೇ, ನೀವು ಇಂದ್ರನ ತಮ್ಮನೆಂದು ಆಗಿರಿ! ಮತ್ತು ಶೋಕಗ್ರಸ್ತರಾದ ದೇವತೆಗಳಿಗೆ ಸಹಾಯವನ್ನು ನೀಡಿರಿ! ನಿಮ್ಮ ಕರುಣೆಯಿಂದ ಈ ಪ್ರದೇಶವು ಸಿದ್ಧಾಶ್ರಮವೆಂದು ಖ್ಯಾತಿಗೊಳ್ಳುವದು."- ಈ ರೀತಿ ನುಡಿದನು.
ಕಶ್ಯಪ ಮುನಿಯ ಪ್ರಾರ್ಥನೆಯನುಸಾರ ವಿಷ್ಣುವು ಅದಿತಿಯ ಹೊಟ್ಟೆಯಲ್ಲಿ ಹುಟ್ಟಿದನು. 'ವಾಮನ'ನಾಗಿ ಬಲಿಯನ್ನು ಪಾತಾಳಕ್ಕೆ ಅದುಮಿದನು.
ಇದು 'ಯಾಚಿತ' ವರವಾಗಿದೆ.

೧೦. ಚೂಲಿ < ಸೋಮದಾ

ಬಾಲಕಾಂಡ/೩೩

ಕುಶನಾಭನು ತನ್ನ ಕನ್ಯೆಯರಿಗೆ ತಿಳಿಸಿ, ಹೇಳಿ ಅವರ ವಿವಾಹವನ್ನು ಬ್ರಹ್ಮ ದತ್ತನೊಡನೆ ಮಾಡಿಕೊಟ್ಟ ಕಥೆಯನ್ನು ವಿಶ್ವಾಮಿತ್ರನು ರಾಮನಿಗೆ ಹೇಳುತ್ತಿದ್ದಾನೆ.
ಒಮ್ಮೆ ಕುಶನಾಭನ ನೂರು ಕನ್ಯೆಯರು ಉತ್ತಮ ಅಲಂಕಾರಗಳನ್ನು ಧರಿಸಿ ಒಂದು ಉಪವನದಲ್ಲಿ ನೃತ್ಯ-ಗಾಯನಾದಿಗಳಲ್ಲಿ ತೊಡಗಿದ್ದಾಗ ವಾಯುವು ಅವರನ್ನು ಕಂಡನು. ಅವರ ತಾರುಣ್ಯಕ್ಕೆ, ಸೌಂದರ್ಯಕ್ಕೆ ಮೋಹಿತನಾದ ವಾಯುವು ಅವರನ್ನು "ನನ್ನ ಭಾರ್ಯೆಯರಾಗಿರಿ!" ಎಂದು ವಿನಂತಿಸಿದನು. ಆ ಕನ್ಯೆಯರು ಅದನ್ನು ನಿರಾಕರಿಸಿದರು. ಆಗ ಕೋಪಗೊಂಡ ವಾಯುವು ಅವರ ಅಂಗಭಂಗ ಮಾಡಿದ್ದರಿಂದ ಅವರ ರೂಪ ಲಾವಣ್ಯವು ನಶಿಸಿ ಅವರು ಕುಬ್ಜೆಯರಾದರು.
ಹೀಗೆ ಅಂಗಭಂಗದಿಂದ ಲಜ್ಜೆಗೊಂಡ, ಭಯಭೀತರಾದ ಆ ಕುಶಕನ್ಯೆಯರು ನಡೆದುದೆಲ್ಲವನ್ನೂ ತಮ್ಮ ತಂದೆಗೆ ಹೇಳಿದರು. ಅವರ ಕರುಣಾಜನಕ ಸ್ಥಿತಿಯನ್ನು ಕಂಡು ಕುಶನಾಭನಿಗೂ ವ್ಯಥೆಯಾಯಿತು. ಕುಶಕನ್ಯೆಯರಲ್ಲಿ ಶಾಪ ಕೊಡುವ