ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ವರದಾನ

೨೫೩


ಸಾಮರ್ಥ್ಯವಿದ್ದರೂ ಅವರು ತೋರಿದ ಕ್ಷಮಾಶೀಲವೃತ್ತಿಯನ್ನು ತುಂಬ ಶ್ಲಾಘಿಸಿದನು. ದಾನ, ಸತ್ಯ, ಯಜ್ಞ, ಯಶ ಮತ್ತು ಧರ್ಮ ಇವೆಲ್ಲವೂ ಕ್ಷಮೆಯಲ್ಲಿ ಅಂತರ್ಭೂತವಾಗಿರುವದರಿಂದ, ಕ್ಷಮೆಯು ಜಗತ್ತಿನ ಪ್ರಮುಖ ಆಧಾರವೆಂಬ ಶ್ರದ್ಧೆಯು ಕುಶನಾಭನದಾಗಿತ್ತು. ಅವನು ತನ್ನ ಪುತ್ರಿಯರಿಗೆ ಸಮಾಧಾನ ಹೇಳಿದನು. ಆತನು ಮಂತ್ರಿಮಂಡಲದವರೊಡನೆ ವಿಚಾರವಿನಿಮಯ ಮಾಡಿ, ಕನ್ಯೆಯರಿಗಾಗಿ ತಕ್ಕ ವರಸಂಶೋಧನೆಯನ್ನು ಪ್ರಾರಂಭಿಸಿದನು. ಆಗ ಮಹಾ ತೇಜಸ್ಸುಳ್ಳ, ಊರ್ಧ್ವರೇತನಾದ, ಸದಾಚಾರಸಂಪನ್ನನಾದ 'ಚೂಲಿ' ಎಂಬ ಮಹರ್ಷಿಯು ಬ್ರಹ್ಮಪ್ರಾಪ್ತಿಗಾಗಿ ತಪಸ್ಸನ್ನಾಚರಿಸುತ್ತಿದ್ದನು. ಅವಳ ಸೌಜನ್ಯ ಗಂಧರ್ವಿಯೊಬ್ಬಳು ಆತನಿಗೆ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಳು. ಅವಳ ಸೌಜನ್ಯಶೀಲ, ನಿಷ್ಠಾಪೂರ್ಣ ಸೇವೆಯಿಂದ ಈ ಮುನಿಯ ಪ್ರಸನ್ನನಾಗಿ ಆಕೆಗೆ ಹೀಗೆಂದನು-

            ಪರಿಶುಷ್ಟೋsಸ್ಮಿ ಭದ್ರಂ ತೇ ಕಿರಂ ಕರೋಮಿ ತವ ಪ್ರಿಯಮ್ ‖೧೪‖


"ನಿನಗೆ ಮಂಗಳವಾಗಲಿ! ನಿನಗೆ ಪ್ರಿಯವಾಗಿರುವ ಯಾವುದನ್ನು ಮಾಡಲಿ?" ಮುನಿಯು ಈ ರೀತಿ ಸಂತುಷ್ಟನಿರುವದನ್ನು ಕಂಡು ಅವಳು ಈ ರೀತಿ ನುಡಿದಳು-

            ಲಕ್ಷ್ಯಾ ಸಮುದಿತೋ ಬ್ರಾಹ್ಮ್ಯಾ ಬ್ರಹ್ಮಭೂತೋ ಮಹಾತಪಾಃ |
            ಬ್ರಾಹ್ಮೇಣ ತಪಸಾ ಯುಕ್ತಂ ಪುತ್ರಮಿಚ್ಛಾಮಿ ಧಾರ್ಮಿಕಮ್ ‖೧೬‖
            ಅಪತಿಶ್ಚಾಸ್ಮಿ ಭದ್ರಂ ತೇ ಭಾರ್ಯ ಚಾಸ್ಮಿ ನ ಕಸ್ಯಚಿತ್ |
            ಬ್ರಾಹ್ಮೇಣೋಪಗತಾಯಾಶ್ಚ ದಾತುಮರ್ಹಸಿ ಮೇ ಸುತಮ್ ‖೧೭‖
            ತಸ್ಯಾಃ ಪ್ರಸನ್ನೋ ಬ್ರಹ್ಮರ್ಷಿರ್ದದೌ ಬ್ರಾಹ್ಯಮನುತ್ತಮಮ್ |
            ಬ್ರಹ್ಮದತ್ತ ಇತಿ ಖ್ಯಾತಂ ಮಾನಸಂ ಚೂಲಿನಃ ಸುತಮ್ ‖೧೮‖


"ಹೇ ಮಹಾತಪಸ್ವಿ, ನೀವು ನಿಮ್ಮ ಬ್ರಹ್ಮತೇಜದಿಂದ ಕೇವಲ ಬ್ರಹ್ಮ ಸ್ವರೂಪರಾಗಿರುವಿರಿ; ಅದಕ್ಕಾಗಿ ಬ್ರಹ್ಮತಪದಿಂದ ಯುಕ್ತನಾದ ಧಾರ್ಮಿಕ ಪುತ್ರನು ಆಗಬೇಕೆಂಬ ಇಚ್ಛೆಯು ನನ್ನದಿದೆ. ಹೇ ಮುನಿಯೇ, ದೇವರು ನಿಮಗೆ ಒಳಿತನ್ನು ಮಾಡಲಿ! ನನಗೆ ಪತಿ ಇರುವದಿಲ್ಲ; ಈ ನಂತರವೂ ಹೀಗೆಯೇ ಉಳಿಯಬೇಕೆಂದು ಬಯಸುತ್ತೇನೆ. ನಾನು ಯಾರೊಬ್ಬರ ಪತ್ನಿಯಾಗಬಯಸುವುದಿಲ್ಲ. ಹೀಗಿರುವ ನನಗೆ ಬ್ರಹ್ಮ ಸಂಬಂಧಿತ ಉಪಾಯದಿಂದ ಒಬ್ಬ ಪುತ್ರನನ್ನು ಪಡೆಯುವಂತೆ