ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


"ಹೇ ಪ್ರಜಾಧಿಪತಿ ಭಗೀರಥ ಮಹಾರಾಜನೆ, ಉತ್ಕೃಷ್ಟವಾಗಿ ಆಚರಿಸಲ್ಪಟ್ಟ ನಿನ್ನ ತಪದ ಪ್ರಭಾವದಿಂದ ನಾನು ನಿನಗೆ ಪ್ರಸನ್ನನಾಗಿದ್ದೇನೆ. ಹೇ ಸದಾಚರಣ ಸಂಪನ್ನ ನೃಪಶ್ರೇಷ್ಠನೇ, ನಿನಗೆ ಅಪೇಕ್ಷಿತವಾದ ವರವನ್ನು ಬೇಡಿಕೊ!"

ಬ್ರಹ್ಮದೇವನ ನುಡಿಗಳನ್ನು ಕೇಳಿ ಮಹಾತೇಜಸ್ಸುಳ್ಳ ಮಹಾಪರಾಕ್ರಮಿಯಾದ ಭಗೀರಥನು ಕರಗಳೆರಡನ್ನೂ ಜೋಡಿಸಿ ಇಂತೆಂದನು- ಯದಿ ಮೇ ಭಗವಾನ್ವಿತೋ ಯುಧ್ಯಸ್ತಿ: ತಪಸಃ ಫಲಮ್ | ಸಗರಸ್ಕಾತ್ಮಜಾಃ ಸರ್ವ ಮತ್ತ; ಸಲಿಲಮಾಪ್ನುಯುಂ |೧೮|| ಗಂಗಾಯಾಃ ಸಲಿಲಕ್ಲಿನ್ನೇ ಭಸ್ಮಷಾಂ ಮಹಾತ್ಮನಾಮ್ || ಸ್ವರ್ಗ೦ ಗಚ್ಚೇಂಯುರತ್ಯಂತಂ ಸರ್ವೇ ಚ ಪ್ರಪಿತಾಮಹಾಃ I೧೯ ದೇವ ಯಾಚೇ ಹ ಸಂತ ನಾವದೇತ್ಕುಲಂ ಚ ನಃ | ಅಕ್ಷಾಣಾಂ ಕುಲೇ ದೇವ ಏಷ ಮೇsಸ್ತು ವರಃ ಪರಃ |೨೦|| “ಹೇ ಭಗವನ್, ತಾವು ನನಗೆ ಪ್ರಸನ್ನರಾಗಿದ್ದರೆ, ನನ್ನ ತಪಸ್ಸಿನ ಫಲವು ನನಗೆ ಲಭಿಸುವಂತಿದ್ದರೆ, ಸಗರಪುತ್ರರೆಲ್ಲರ ಉತ್ತರಕ್ರಿಯೆಯು ನನ್ನಿಂದ ಆಗಬೇಕು. ಈ ಮಹಾತ್ಮರ ಭಸ್ಮವು ಗಂಗಾಜಲದಲ್ಲಿ ಬೆರೆಯಿತೆಂದರೆ, ಆ ಪ್ರಪಿತಾಮಹರಿಗೆ ಅಕ್ಷಯಸ್ತರ್ಗ ದೊರೆಯುವದು. ಹೇ ದೇವರೇ, ನಮ್ಮ ಕುಲವು ಉಚ್ಚಿನವಾಗಬಾರ ದೆಂದು ನಾನು ಸಂತಾನವನ್ನು ಬೇಡುತ್ತಿದ್ದೇನೆ. ಹೇ ದೇವ, ಇಕ್ಷಾಕು ವಂಶಜರಲ್ಲಿ ಹುಟ್ಟಿದ ನನಗೆ ಈ ದ್ವಿತೀಯ ವರವು ನಿಮ್ಮಿಂದ ದೊರೆಯಬೇಕು.” ಭಗೀರಥನ ವಿನಂತಿಯನ್ನು ಆಲಿಸಿ ಬ್ರಹ್ಮದೇವನು ಹೀಗೆ ನುಡಿದನು- ಮನೋರಥೋ ಮಹಾನೇಷ ಭಗೀರಥ ಮಹಾರಥ | ಏಮ ಭವತು ಭದ್ರ ತಏ ಇಕ್ಷಾಕುಕುಲವರ್ಧನ |೨೨|| “ಹೇ ಮಹಾರಥಿಯೆ, ಈ ನಿನ್ನ ಇಚ್ಛೆ ದೊಡ್ಡದಾಗಿದೆ. ಹೇ ಇಕ್ಷಾಕು ಕುಲವಧ್ರನೇ, ನೀನು ನುಡಿದಂತೆ ಆಗಲಿ! ಅದಕ್ಕಾಗಿ ಹಿಮಾಲಯದ ಜೈಷ್ಣ ಪುತ್ರಿಯಾದ ಗಂಗೆಯನ್ನು ಧರಿಸಲು ಶಂಕರನನ್ನು ನಿಯೋಜಿಸಬೇಕು. ಗಂಗೆಯ ಪ್ರಪಾತವನ್ನು ಪೃಥ್ವಿಯು ತಡೆಯಲಾರಳು. ಗಂಗೆಯನ್ನು ಧರಿಸುವ ಸಾಮರ್ಥ್ಯವು ಶಂಕರನ ಹೊರತು ಬೇರೆ ಯಾರಲ್ಲೂ ಇಲ್ಲ.” ಈ ರೀತಿ ಹೇಳಿ, ಭಗೀರಥನಿಗೆ ಯೋಗ್ಯ ಸಮಯದಲ್ಲಿ ಅನುಗ್ರಹಿಸಲು ಗಂಗೆಗೆ ತಿಳಿಸಿದನು.