ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಹೀಗೆ ನುಡಿದು ಮಹಾತೇಜಸ್ವಿಯಾದ ಕಶ್ಯಪನು ಅವಳ ಮೈಸಿರಿಯನ್ನು ಸ್ಪರ್ಶಿಸಿದನು. ಸಮಾಗಮದ ನಂತರ `ಶುಭವಾಗಲಿ!” ಎಂದು ಹಾರೈಸಿ ಆತನು ತಪಸ್ಸಿಗಾಗಿ ತೆರಳಿದನು. ದಿತಿಗೆ ಅತಿಶಯ ಆನಂದವಾಯಿತು. ಅವಳು ಉಗ್ರತಪಸ್ಸನ್ನು ಕೈಗೊಂಡಳು. ಆ ಸಮಯದಲ್ಲಿ ಇಂದ್ರನು ದಿತಿಗೆ ಉತ್ಕಷ್ಟಸೇವೆಯನ್ನು ಸಲ್ಲಿಸಿದನು. ಸಾವಿರ ವರ್ಷಗಳ ತಪಸ್ಸು ಪೂರ್ಣವಾಗಲು ಕೇವಲ ಹತ್ತು ವರ್ಷಗಳು ಉಳಿದಾಗ ಆಕೆಯು ಸಂತೋಷಭರಿತಳಾಗಿ ಇಂದ್ರನಿಗೆ ಇಂತೆಂದಳು- “ಹೇ ಸುರಶ್ರೇಷ್ಠನೇ, ನಿನ್ನ ಸೇವೆಯಿಂದ ನಾನು ಸಂತೋಷಗೊಂಡಿದ್ದೇನೆ. ನಿನ್ನನ್ನು ವಧಿಸಲೆಂದು ಬಯಸಿದ ಪುತ್ರನು ಹುಟ್ಟದೇ ನಿನಗೆ ಜಯವನ್ನುಂಟುಮಾಡುವ ಪುತ್ರನು ನನಗೆ ಆಗಲಿ!” ವರೋ ವರ್ಷಸಹಸ್ತಾಂತೇ ಮಮ ದತ್ತ ಸುತ್ತು ಪ್ರತಿ IX೧೫|| ಮಹಾತ್ಮನಾದ ನಿನ್ನ ಪಿತನಿಗೆ ಪ್ರಾರ್ಥಿಸಿಕೊಂಡಾಗ ಆತನು “ಸಾವಿರ ವರ್ಷಗಳ ನಂತರ ನಿನಗೆ ಪುತ್ರನು ಹುಟ್ಟುವನು!” ಎಂಬ ವರವನ್ನು ಕೊಟ್ಟಿದ್ದಾನೆ. ಹೀಗಿರುವಾಗ ಒಂದು ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ನಡುನೆತ್ತಿಯ ಮೇಲೇರಿದಾಗ ದಿತಿಯು ತಲೆದಿಂಬಿನತ್ತ ಪಾದಗಳನ್ನಿರಿಸಿ ನಿದ್ರೆ ಹೋದಳು. ಈ ವರ್ತನೆಯಿಂದ ಅವಳಲ್ಲಿಯ ಶುಚಿರ್ಭೂತತನವು ಇಲ್ಲದಾಯಿತು. ಇದರಿಂದ ಇಂದ್ರನಿಗೆ ಆನಂದವಾಗಿ, ಆತನು ಆಕೆಯ ಶರೀರದಲ್ಲಿ ಜಾಗರೂಕತೆ ಯಿಂದ ಪ್ರವೇಶಿಸಿ ಅವಳ ಗರ್ಭವನ್ನು ಏಳು ಭಾಗಗಳಲ್ಲಿ ತುಂಡರಿಸಿದನು. ಆಗ ಆ ಗರ್ಭವು ಅಳತೊಡಗಿತು. ಆ ರೋದನವನ್ನು ಕೇಳಿ ದಿತಿಯು 'ಮಾರುದ? “ಮಾರುದ” ಎಂದಳು. ಗರ್ಭವನ್ನು ನಾಶಪಡಿಸಬಾರದೆಂದು ಅವಳು ಇಂದ್ರನಿಗೆ ಹೇಳಿದನು. ಆಗ ಆತನು ಅವಳ ದೇಹದಿಂದ ಹೊರಗೆ ಬಂದು ಈ ರೀತಿ ನುಡಿದನು- "ಪಾದಗಳನ್ನಿಡುವ ಜಾಗದಲ್ಲಿ ನೀನು ತಲೆ ಇಟ್ಟು ಮಲಗಿದ ಕಾರಣ ನಿನ್ನಲ್ಲಿ ಅಶುಚಿಯುಂಟಾಯಿತು. ನಿನ್ನ ಈ ನ್ಯೂನತೆಯನ್ನು ಗಮನಿಸಿ ಯುದ್ಧದಲ್ಲಿ ನನ್ನನ್ನು ವಧಿಸಬಹುದಾದ ನಿನ್ನ ಪುತ್ರನನ್ನು ನಾನು ಏಳು ಭಾಗಗಳಲ್ಲಿ ತುಂಡರಿಸಿರುವನು; ಅದಕ್ಕೆ ಕ್ಷಮಿಸು!” ಇದನ್ನು ಕೇಳಿದ ನಂತರ ದಿತಿಯು ಇಂದ್ರನಿಗೆ ಹೀಗೆಂದಳು: “ನೀನು ಮಾಡಿದ ಸಂಗತಿಯು ಇಬ್ಬರಿಗೂ ಹಿತಕರವಾಗಬೇಕು; ಈ ಏಳು ಪುತ್ರರು ಏಳು ಮರುದ್ಧಣರ ಸ್ಥಾನವನ್ನು ಕಾಪಾಡಲಿ.” ಈ ಇಚ್ಛೆಯನ್ನು