ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

CC ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ತವ ಪ್ರಸಾದಾದ್ಭವತು ದೇವದೇವ ಮಮೇಪ್ಪಿತಮ್ | ಏವಮತಿ ದೇವೇಶೋ ವಾಕ್ಯಮುಕ್ಕಾ ಗತಸ್ತದಾ ||೧೮|| 'ಹೇ ಮಹದೇವರೇ, ಹೇ ಪಾಪರಹಿತರೇ, ನೀವು ಸಂತುಷ್ಟರಾಗಿದ್ದರೆ, ಅಂಗ, ಪ್ರತ್ಯಂಗ, ಮಂತ್ರ ಮತ್ತು ರಹಸ್ಯ ಇವುಗಳನ್ನು ಒಳಗೊಂಡ ಧನುರ್ವೇದವನ್ನು ನನಗೆ ಕರುಣಿಸಿರಿ! ಹೇ ಪಾಪರಹಿತರೇ, ದೇವತೆಗಳು, ದಾನವರು, ಮಹರ್ಷಿಗಳು, ಗಂಧರ್ವರು, ಯಕ್ಷರು ಮತ್ತು ರಾಕ್ಷಸರು ಇವರ ಬಳಿಯಿದ್ದ ಅಸ್ತಗಳ ಸ್ಫೂರ್ತಿಯು ನನಗಾಗಲಿ! ಭೋ ದೇವಾಧಿದೇವರೆ, ನಿಮ್ಮ ಕೃಪಾಪ್ರಸಾದದಿಂದ ನನ್ನ ಇಚ್ಛೆಯು ಈಡೇರಲಿ!” ಆಗ ಶಿವನು 'ತಥಾಸ್ತು' ಎಂದು ನುಡಿದು ಸಮ್ಮತಿಸಿದನು. ಈ ವರವನ್ನು ಪಡೆದ ನಂತರ ವಸಿಷ್ಠರ ನಾಶವಾಯಿತೆಂದು ವಿಶ್ವಾಮಿತ್ರನು ಭಾವಿಸಿದನು. ದಹಿಸುವಂತಹ ಅಸ್ತಗಳನ್ನು ಪ್ರಯೋಗಿಸಿ ವಸಿಷ್ಠರ ಆಶ್ರಮಕ್ಕೆ ತೊಂದರೆ ಕೊಡಲಾರಂಭಿಸಿದನು. ಆಗ ವಸಿಷ್ಠರ ಆಶ್ರಮದಲ್ಲಿಯ ಸಕಲ ಪ್ರಾಣಿಮಾತ್ರರು ಭಯದಿಂದ ದಿಕ್ಕುಪಲಾಗಿ ಓಡತೊಡಗಿದರು. ತುಸುಕಾಲದಲ್ಲಿಯೇ ವಸಿಷ್ಠರ ಆಶ್ರಮವು ನೀರವವಾಯಿತು. ಇದು 'ಯಾಚಿತ' ವರವಾಗಿದೆ. ೧೬. ಬ್ರಹ್ಮದೇವ < ವಿಶ್ವಾಮಿತ್ರ ಬಾಲಕಾಂಡ/೬೫ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿಪದವು ಹೇಗೆ ಲಭಿಸಿತೆಂಬುದನ್ನು ಕುರಿತು ಶತಾನಂದನು ರಾಮನಿಗೆ ಹೇಳುತ್ತಿದ್ದಾನೆ. ಕ್ಷಾತ್ರತೇಜಸ್ಸಿಗಿಂತ ಬ್ರಹ್ಮತೇಜಸ್ಸು ಹೆಚ್ಚು ಪ್ರಭಾವಶಾಲಿಯಾದದ್ದು ಎಂಬುದನ್ನು ಅರಿತುಕೊಂಡ ನಂತರ, ತಾನೂ ಬ್ರಹ್ಮರ್ಷಿಯಾಗಬೇಕೆಂಬ ಉದ್ದೇಶದಿಂದ ವಿಶ್ವಾಮಿತ್ರನು ಘೋರ ತಪಸ್ಸನ್ನು ಕೈಗೊಂಡನು. ಮೌನವ್ರತಸ್ಥನಾಗಿ ಶ್ವಾಸೋಚ್ಛಾಸವನ್ನು ಅವರೋಧಿಸಿ ಒಂದು ಸಾವಿರ ವರ್ಷಗಳ ತಪಸ್ಸನ್ನು ಆಚರಿಸಿದ ನಂತರ ಆತನ ಶಿರಸ್ಸಿನಿಂದ ಹೊಗೆಯು ಹೊರಬರಹತ್ತಿತು. ಆ ಹೊಗೆಯಿಂದ ಮೂರೂ ಲೋಕಗಳು ಗೊಂದಲಕ್ಕೀಡಾದವು. ದೇವತೆಗಳು, ಋಷಿಗಳು, ಗಂಧರ್ವರು, ಪನ್ನಗು, ಉರಗಗಳು, ರಾಕ್ಷಸರು, ಎಲ್ಲರೂ ತಪಸ್ಸಿನ ತೇಜಸ್ಸಿನಿಂದ ದಂಗುಬಡೆದು ಮೋಹಿತರಾದರು. ಸೂರ್ಯನು ಕಳೆಗುಂದಿದನು.