ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ ೨೬೧ ಆಗ ಎಲ್ಲರೂ ಬ್ರಹ್ಮನ ಬಳಿಗೆ ಹೋಗಿ ಇಂತೆಂದರು: “ತಪಸ್ಸಿನ ಪ್ರಭಾವದಿಂದ ವಿಶ್ವಾಮಿತ್ರನ ಮಹಾತ್ಮವು ವರ್ಧಿಸುತ್ತಿವೆ. ಕಾಮಕ್ರೋಧಾದಿ ಲೋಪದೋಷಗಳು ವಿಶ್ವಾಮಿತ್ರನಲ್ಲಿ ಕಂಡುಬರುತ್ತಿಲ್ಲ. ಹೀಗಿರುವಾಗ ಆತನ ಮನಸ್ಸಿನಲ್ಲಿಯ ಇಚ್ಛೆಯು ಈಡೇರದಿದ್ದರೆ, ಸಕಲ ಪ್ರಾಣಿಗಳನ್ನು ಸಮಸ್ತ ಸ್ಥಾವರ-ಜಂಗಮ ತ್ರೈಲೋಕ್ಯವು ನಾಶಕ್ಕೀಡಾಗಬಹುದು. ಈ ಅಗ್ನಿಸಮನಾದ ಮುನಿಯನ್ನು ಹೇಗಾದರೂ ಮಾಡಿ ಪ್ರಸನ್ನಗೊಳಿಸಬೇಕು. ಆತನಿಗೆ ದೇವಲೋಕವು ಬೇಕಿದ್ದರೆ ಅದನ್ನು ಸಹ ಕೊಟ್ಟು ಬಿಡಬೇಕು. ತೈಲೋಕಕ್ಕೆ ಆಗಬಹುದಾದ ನಾಶವನ್ನು ತಡೆಯಬೇಕು.” ದೇವತೆ ಗಳೆಲ್ಲರ ವಿನಂತಿಯನ್ನು ಮನ್ನಿಸಿ ಬ್ರಹ್ಮಾದಿ ಸಕಲರು ವಿಶ್ವಮಿತ್ರನಿಗೆ ಈ ರೀತಿ ನುಡಿದರು. ಬ್ರಹ್ಮರ್ಷೆ ಸ್ವಾಗತಃ ತೇsಸ್ತು ತಪಸಾ ಸ ಸುತೋಷಿತಾಃ ೧೯ ಬ್ರಾಹ್ಮಣ್ಯಂ ತಪಸೋಣ ಪ್ರಾಪ್ತವಾನಸಿ ಕೌಶಿಕ || ದೀರ್ಘಮಾಯುಶ್ಚ ತೇ ಬ್ರಹ್ಮನದಾಮಿ ಸಮರುದ್ದಣ: ೨al ಸ್ವಸ್ತಿ ಪ್ರಾಪ್ಪುಹಿ ಭದ್ರ ತೇ ಗಚ್ಚ ಸೌಮ್ಯ ಯಥಾಸುಮ್ ೨೧ “ಹೇ ಬ್ರಹ್ಮರ್ಷೆ, ನಿನಗೆ ಸುಸ್ವಾಗತ! ನಿನ್ನ ತಪಸ್ಸಿನಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ. ಹೇ ಕುಶಿಕ ವಂಶಜನೇ, ನಿನ್ನ ಉಗ್ರ ತಪಸ್ಸಿನಿಂದ ನಿನಗೆ ಬ್ರಾಹ್ಮಣತ್ವವು ದೊರೆತಿದೆ. ಹೇ ಬ್ರಹ್ಮನ್, ಮರುದ್ಧಣಸಮೇತರಾಗಿ ನಿನಗೆ ದೀರ್ಘ ಆಯುಸ್ಸನ್ನು ಕೊಡುತ್ತೇವೆ. ಹೇ ಸತ್ವಗುಣಸಂಪನ್ನನೆ, ನಿನಗೆ ಸುಖವು ದೊರೆಯಲಿ ನಿನಗೆ ಶುಭವಾಗಲಿ! ತಪಶ್ಚರ್ಯೆಯನ್ನು ಕೊನೆಗೊಳಿಸಿ ನಿನಗೆ ಇಷ್ಟವಿದ್ದ ಕಡೆಗೆ ಪ್ರಯಾಣ ಮಾಡು!” ಇದನ್ನು ಆಲೈಸಿದ ವಿಶ್ವಮಿತ್ರನು ಬಹಳ ಸಂತೋಷಭರಿತನಾದನು. ದೇವತೆಗಳಿಗೆ ವಂದಿಸಿ ಹೀಗೆಂದನು- ಬ್ರಾಹ್ಮಣ್ಯಂ ಯದಿಮೆ ಪ್ರಾಪ್ತ ದೀರ್ಘಮಾಯಸ್ತಥೈವ ಚ ||೨೨|| ಓಂಕಾರರೋsಥ ವಷಟ್ಕಾರೋ ವೇದಾಶ್ಚ ವರಯಂತು ಮಾಮ್ | ಕತ್ರವೇದಾವಿದಾಂ ಶ್ರೇಷ್ಟೋ ಬ್ರಹ್ಮವೇದವಿದಾಮಪಿ ||೨೩| ಬ್ರಹ್ಮಪುತ್ರೋ ವಸಿಷೋ ಮಾಮೇವಂ ವದತು ದೇವತಾಃ | ಯದ್ಯಮ ಪರಮಃ ಕಾಮಃ ಕೃತೋ ಯಾಂತು ಸುರರ್ಷಭಾ: ೨೪ “ಬ್ರಾಹ್ಮಣ್ಯವು ಮತ್ತು ದೀರ್ಘಾಯಸ್ಸು ನನಗೆ ಪ್ರಾಪ್ತವಾಗಿದ್ದಲ್ಲಿ ಓಂಕಾರ” ವಷಟ್ಕಾರ ಮತ್ತು ವೇದಗಳು ನನಗೆ ವರಪ್ರದವಾಗಲಿ! ಸಾರಾಂಶದಲ್ಲಿ,